ಬ್ರೇಕಿಂಗ್ ನ್ಯೂಸ್
13-05-24 07:56 pm HK News Desk ದೇಶ - ವಿದೇಶ
ವಾರಾಣಸಿ, ಮೇ 13: ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಮುಗಿಸಿ ವಾರಾಣಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ಶೋ ನಡೆಸಿದರು. ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ಶೋ ನಡೆಸಿರುವ ಮೋದಿಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ರೋಡ್ಶೋ ಆರಂಭದಲ್ಲಿ ಅವರು ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ವಾರಾಣಸಿಯ ಹಾಲಿ ಸಂಸದರಾಗಿರುವ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಸೋಮವಾರದ ರೋಡ್ಶೋನಲ್ಲಿ ಮೋದಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಥ್ ಕೊಟ್ಟರು. ಮೋದಿ ಅವರು ಸಾಗುವ ಹಾದಿಯುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೆರವಣಿಗೆಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮುಂಚೂಣಿಯಲ್ಲಿದ್ದರು. ಮರಾಠಿ, ಗುಜರಾತಿ, ತಮಿಳರು, ಬೆಂಗಾಲಿ, ಮಹೇಶ್ವರಿ, ಮಾರವಾಡಿಗಳು, ಪಂಜಾಬಿಗಳು ಸೇರಿದಂತೆ ಇತರೆ ಸಮುದಾಯದವರು ರೋಡ್ಶೋ ಉದ್ದಕ್ಕೂ 11 ವಲಯಗಳಲ್ಲಿ ಮೋದಿ ಅವರಿಗೆ ವಿಶೇಷ ಸ್ವಾಗತ ಕೋರಿದರು.
ಕಣ್ಣು ಹಾಯಿಸುವಷ್ಟು ದೂರದಲ್ಲೂ ಕೇಸರಿ ಧ್ವಜಗಳ, ಬಲೂನ್, ಬ್ಯಾನರ್ಗಳು ಕಾಣುತ್ತಿದ್ದವು. ವಾರಾಣಸಿಯ ಲಂಕಾ ಚೌಕದಿಂದ ಸುಮಾರು 6 ಕಿಲೋ ಮೀಟರ್ ದೂರದವರೆಗೂ ಮೋದಿ ರೋಡ್ಶೋ ನಡೆಸಿದರು. ವಾರಾಣಸಿಯಲ್ಲಿಯೇ ರಾತ್ರಿ ಉಳಿಯಲಿರುವ ಮೋದಿ, ಮಂಗಳವಾರ ಬೆಳಿಗ್ಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸ ಬಳಿಕ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಜೂನ್ 1ರಂದು ಕೊನೆಯ ಹಂತದಲ್ಲಿ ಮತದಾನ ನಿಗದಿಯಾಗಿದೆ. ಮೋದಿ ಅವರು ವಾರಾಣಸಿಯಿಂದ ಎರಡು ಬಾರಿ ಗೆಲುವು ದಾಖಲಿಸಿದ್ದು ಮೂರನೇ ಬಾರಿಯೂ ಇಲ್ಲಿಂದಲೇ ಜನಾಭಿಪ್ರಾಯಕ್ಕೆ ಮುಂದಾಗಿದ್ದಾರೆ. ಕಣದಲ್ಲಿ ಕಾಂಗ್ರೆಸ್ನಿಂದ ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ.
The streets of Varanasi are set to witness a spectacle on Monday evening for a roadshow by Prime Minister Narendra Modi, who is poised to file his nomination for a third consecutive term from the parliamentary constituency, a day later.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm