ಮದುವೆ ಆದ್ರು ಡಾಕ್ಟರ್ ಲೇಡಿಗೆ ತೀರದ ದಾಹ ; ಇಬ್ಬರು ಪ್ರೇಮಿಗಳೊಂದಿಗೆ  ರೂಮಿನಲ್ಲಿ ಸರಸ, ಗಂಡನಿಂದ ಬಿತ್ತು ಮೂವರಿಗೂ ಗೂಸಾ 

11-05-24 09:43 pm       HK News Desk   ದೇಶ - ವಿದೇಶ

ಹೋಟೆಲ್‌ನ ರೂಮಿನಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಸರಸವಾಡುತ್ತಿದ್ದ ಪತ್ನಿ, ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ.

ಲಕ್ನೋ, ಮೇ.11: ಹೋಟೆಲ್‌ನ ರೂಮಿನಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಸರಸವಾಡುತ್ತಿದ್ದ ಪತ್ನಿ, ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ.

ತನ್ನ ಹೆಂಡತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದ ವೈದ್ಯ, ಗುರುವಾರ ರಾತ್ರಿ ಹೋಟೆಲ್ ಕೊಠಡಿಗೆ ನುಗ್ಗಿದ್ದಾನೆ. ಇಬ್ಬರು ಪುರುಷರ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪತ್ನಿಯನ್ನ ಹಿಡಿದಿದ್ದರೆ. ಇದರಿಂದ ಕುಪಿತರಾದ ವೈದ್ಯನ ಕುಟುಂಬದವರು ಹಾಗೂ ಇಬ್ಬರು ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಮಹಿಳೆ ಹಾಗೂ ಆಕೆಯ ಇಬ್ಬರು ಗೆಳೆಯರ ಮೇಲೆ ವೈದ್ಯನ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಇದರ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವೈದ್ಯ ಹಾಗೂ ಆತನ ಪತ್ನಿ, ಜೊತೆಗಿದ್ದ ಇಬ್ಬರು ಪುರುಷರನ್ನೂ ಬಂಧಿಸಿದ್ದಾರೆ. ಈ ವೇಳೆ ತನ್ನ ಹೆಂಡತಿ ಇಬ್ಬರು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾನೆ.

ಪೊಲೀಸರ ಪ್ರಕಾರ, ದಂಪತಿ ಕೌಟುಂಬಿಕ ಕಲಹದಿಂದಾಗಿ ಕಳೆದ ಒಂದು ವರ್ಷದಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವೇಳೆ ಮಹಿಳೆ ಹೋಟೆಲ್‌ನಲ್ಲಿ ಇಬ್ಬರು ಪುರುಷರೊಂದಿಗೆ ಅನೈತಿಕ ಚಟುವಟಿಕೆಗೆ ಮುಂದಾಗಿದ್ದಾಳೆ. ಇದೇ ಸಮಯದಲ್ಲಿ ಪತಿಯ ಕಣ್ಣಿಗೆ ಬಿದ್ದಿದ್ದಾಳೆ. ಬಳಿಕ ಇಬ್ಬರು ಪುರುಷರೊಂದಿಗೂ ವಾಗ್ವಾದ ಏರ್ಪಟ್ಟಿದ್ದು, ಪತಿ ಹಲ್ಲೆ ನಡೆಸಿದ್ದಾನೆ.

ಮಹಿಳೆ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಹೇಳಲಾಗಿದೆ. ಈಕೆಯೊಂದಿಗೆ ಇದ್ದ ಇಬ್ಬರು ಪುರುಷರಲ್ಲಿ ಒಬ್ಬ ಗಾಜಿಯಾಬಾದ್‌ ಮತ್ತೋರ್ವ ಬುಲಂದ್‌ಶಹರ್‌ ನಿವಾಸಿಯಾಗಿದ್ದ. ಸದ್ಯ ಮಹಿಳೆ ಸೇರಿ ಮೂವರನ್ನು ಬಂಧಿಸಿರುವ ಪೊಲೀಸರು ವೈದ್ಯ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

A doctor caught his estranged wife allegedly in an objectionable position with two other men at a hotel in Uttar Pradesh's Kasganj. A violent altercation ensued between the two sides which was captured on camera. The video of the incident has gone viral on social media.