ಬ್ರೇಕಿಂಗ್ ನ್ಯೂಸ್
10-05-24 10:06 am HK News Desk ದೇಶ - ವಿದೇಶ
ತಿರುವನಂತಪುರಂ, ಮೇ. 10 : ಕೇರಳದ ಹರಿಪಾಡ್ ಸಮೀಪದ ಪಲ್ಲಿಪ್ಪಾಡ್ನಲ್ಲಿ ಕಣಗಿಲೆ (ಒಲಿಂಡರ್) ಹೂವು ಮತ್ತು ಎಲೆಯ ರಸವನ್ನು ಸೇವಿಸಿದ 24 ವರ್ಷದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಕನಸುಗಳ ಬೆನ್ನೇರಿ ಬ್ರಿಟನ್ಗೆ ತೆರಳುತಿದ್ದ ಯುವತಿ ಏರ್ಪೋರ್ಟ್ ತೆರಳುವಾಗಲೇ ಮೃತಪಟ್ಟಿದ್ದಾರೆ.
ಪಲ್ಲಿಪ್ಪಾಡ್ನ ನೀಂದೂರ್ನ ಕೊಂಡುರೆತ್ತು ಮನೆಯ ಸುರೇಂದ್ರನ್ ಅವರ ಪುತ್ರಿ ಸೂರ್ಯ ಅವರು ಭಾನುವಾರ ನರ್ಸಿಂಗ್ ಕೆಲಸಕ್ಕೆ ಸೇರಲು ಯುಕೆಗೆ ತೆರಳುತಿದ್ದರು. ಕೆಲಸಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಾಗ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ನಂತರ ಆಕೆಯನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತಿರುವಲ್ಲಾ ಬಳಿಯ ಪರುಮಳದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಮೃತಪಟ್ಟಿದ್ದಾಳೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಣಗಿಲೆ ಹೂವು ಮತ್ತು ಎಲೆ ತಿಂದದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಮನೆಯಿಂದ ಫೋನ್ ಮೂಲಕ ಸಂಬಂಧಿಕರು ಮತ್ತು ಸ್ನೇಹಿತರಿಗೆ ತನ್ನ ಪ್ರಯಾಣದ ವಿಷಯವನ್ನು ತಿಳಿಸಿದ್ದಾಳೆ. ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ಓಡಾಡುವಾಗ, ಗೊತ್ತಿಲ್ಲದೆ ಎಲೆ ಮತ್ತು ಹೂವನ್ನು ಕಚ್ಚಿದ್ದಾರೆ. ತಕ್ಷಣವೇ ಅದನ್ನು ಉಗುಳಿದ್ದಾರೆ. ಆದರೂ, ಎಲೆ ಮತ್ತು ಹೂವಿನ ರಸದ ಕೆಲವು ಹನಿಗಳು ದೇಹಕ್ಕೆ ಸೇರಿಕೊಂಡಿದ್ದವು ಎಂದು ಮೃತ ಯುವತಿ ಸೂರ್ಯ ಸುರೇಂದ್ರನ್ ಪೋಷಕರು ಮತ್ತು ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಣಗಿಲೆ ಹೂವಿನ ವಿಷತ್ವದ ಬಗ್ಗೆ ಅಧ್ಯಯನ ನಡೆಸಿರುವ ಡಾ.ಬೆನಿಲ್ ಕೊಟ್ಟಕ್ಕಲ್, ಹೂವಿನಲ್ಲಿರುವ ಆಲ್ಕಲಾಯ್ಡ್ಗಳು ಕಾರ್ಡಿಯಾಕ್ ಗ್ಲೈಕೋಸೈಡ್ಗಳ ವರ್ಗದಲ್ಲಿ ಬರುತ್ತವೆ. "ನೆರಿಯಮ್ ಒಲಿಯಾಂಡರ್ನಲ್ಲಿರುವ ಈ ಆಲ್ಕಲಾಯ್ಡ್ಗಳು ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಕಾಂಡದೊಳಗೆ ಕಂಡುಬರುವ ಲ್ಯಾಟೆಕ್ಸ್ನಲ್ಲಿ ಆಲ್ಕಲಾಯ್ಡ್ಗಳ ಉಪಸ್ಥಿತಿಯು ತುಂಬಾ ಹೆಚ್ಚಾಗಿದೆ. ಹೆಚ್ಚು ಹೂ ಬಿಡಲು ಅಭಿವೃದ್ಧಿಪಡಿಸಿದ ಹೊಸ ತಳಿಯ ಕಣಗಿಲೆ ಗಿಡಗಳಲ್ಲಿ ಈ ವಿಷಾಂಶ ಹೆಚ್ಚಿರುವ ಶಂಕೆ ವ್ಯಕ್ತವಾಗಿದೆ.
24 year old girl in Kerala dies after after Consuming Arali Flower accidentally. A 24-year-old young woman named Surya Surendran passed away after unintentionally chewing the Oleander flower. It is locally known as the Arali flower in the Malayalam language.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm