Senator Danesh Kumar Palyani ; ಪಾಕಿಸ್ತಾನದಲ್ಲಿ ಹಿಂದು ಹೆಣ್ಮಕ್ಕಳನ್ನು ಡಕಾಯಿತರು ಹೊತ್ತೊಯ್ಯುತ್ತಿದ್ದಾರೆ, ಬಲವಂತದ ಮತಾಂತರ, ಅಪಹರಣಕ್ಕೆ ಲಗಾಮಿಲ್ಲ ; ಸಿಂಧ್ ಪ್ರಾಂತದ ಹಿಂದು ಶಾಸಕನ ಅಳಲು

01-05-24 10:25 pm       HK NEWS   ದೇಶ - ವಿದೇಶ

ಪಾಕಿಸ್ತಾನದಲ್ಲಿ ಹಿಂದು ಹೆಣ್ಮಕ್ಕಳನ್ನು ಬಲವಂತ ಮತಾಂತರ ಮಾಡಲಾಗುತ್ತಿದೆ. ಪಾಕಿಸ್ತಾನ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ಪ್ರಭಾವಿಗಳ ವಿರುದ್ಧ ಕ್ರಮಕ್ಕೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಪಾಕಿಸ್ತಾನದಲ್ಲಿ ಹಿಂದು ಸಮುದಾಯದ ಶಾಸಕ ದನೇಶ್ ಕುಮಾರ್ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇಸ್ಲಮಾಬಾದ್, ಮೇ 1: ಪಾಕಿಸ್ತಾನದಲ್ಲಿ ಹಿಂದು ಹೆಣ್ಮಕ್ಕಳನ್ನು ಬಲವಂತ ಮತಾಂತರ ಮಾಡಲಾಗುತ್ತಿದೆ. ಪಾಕಿಸ್ತಾನ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ಪ್ರಭಾವಿಗಳ ವಿರುದ್ಧ ಕ್ರಮಕ್ಕೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಪಾಕಿಸ್ತಾನದಲ್ಲಿ ಹಿಂದು ಸಮುದಾಯದ ಶಾಸಕ ದನೇಶ್ ಕುಮಾರ್ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದಾರೆ.

ಹಿಂದು ಹೆಣ್ಮಕ್ಕಳು ಅಂದ್ರೆ ಕೆಲವರಿಗೆ ಕಾಲ ಕಸವಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದು ಯುವತಿಯರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದಾರೆ. ಪ್ರಭಾವಿಗಳ ಬಗ್ಗೆ ಸರಕಾರದ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ದರೋಡೆಕೋರರು ಸೇರಿ ಪಾಕಿಸ್ತಾನವನ್ನು ಹಾಳು ಮಾಡುತ್ತಿದ್ದಾರೆ. ಪಾಕಿಸ್ತಾನದ ಸಂವಿಧಾನದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ. ಪವಿತ್ರ ಖುರಾನ್ ನಲ್ಲಿಯೂ ಇದಕ್ಕೆಲ್ಲ ಅವಕಾಶ ಇಲ್ಲ ಎಂದವರು ಸಂಸತ್ತಿನ ಗಮನ ಸೆಳೆದಿದ್ದಾರೆ.

ಎರಡು ವರ್ಷದ ಹಿಂದೆ ಪ್ರಿಯಾ ಕುಮಾರಿ ಎಂಬ ಯುವತಿಯನ್ನು ಡಾಕೂಗಳು ಸೇರಿ ಹೊತ್ಕೊಂಡು ಹೋಗಿದ್ದಾರೆ. ಆಕೆ ಎಲ್ಲಿದ್ದಾಳೆಂದು ಇವತ್ತಿಗೂ ತಿಳಿದಿಲ್ಲ. ಜುವೆನಿಲ್ ತನಿಖೆಯೆಂದು ನೀವು ನಾಟಕ ಮಾಡುತ್ತೀರಿ. ಈ ರೀತಿ ಹಿಂದು ಹೆಣ್ಮಕ್ಕಳನ್ನು ಡಾಕೂಗಳು ಹೊತ್ತೊಯ್ದ ಎಷ್ಟು ನಿದರ್ಶನ ಬೇಕು ನಿಮಗೆ. ಪಕ್ಕದ ಬಲೂಚಿಸ್ತಾನದಲ್ಲಿ ಈ ರೀತಿ ಸ್ಥಿತಿ ಇಲ್ಲ. ಹಿಂದು- ಮುಸ್ಲಿಂ ಜೊತೆಯಾಗಿ ಬಾಳುತ್ತಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿ ನಮಗೆ ಸ್ವಾತಂತ್ರ್ಯ ಇಲ್ಲ. ನಾವು ಇಲ್ಲಿಯೇ ಹುಟ್ಟಿದವರು, ಇದೇ ಭೂಮಿಯನ್ನು ಆರಾಧಿಸುವವರು. ಅಲ್ಪಸಂಖ್ಯಾತ ಸಮುದಾಯಕ್ಕೆ ಯಾಕೆ ರಕ್ಷಣೆ ಕೊಡುತ್ತಿಲ್ಲ ಎಂದವರು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ವಿಶ್ವಸಂಸ್ಥೆಯ ತಜ್ಞರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದು ಮತ್ತು ಕ್ರಿಸ್ತಿಯನ್ ಸಮುದಾಯದ ಬಾಲಕಿಯರು, ಮಕ್ಕಳು, ಯುವತಿಯರನ್ನು ಬಲವಂತದಿಂದ ಅಪಹರಿಸುವುದು, ಮತಾಂತರ ಮಾಡುವುದು, ಕಳ್ಳಸಾಗಣೆ ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪೊಲೀಸರು ಲವ್ ಮ್ಯಾರೇಜ್ ಎಂದು ನಿರ್ಲಕ್ಷ್ಯ ತೋರುತ್ತಾರೆ. ಮಕ್ಕಳು, ಅಪ್ರಾಪ್ತರನ್ನು ಹೊತ್ತೊಯ್ಯುವುದನ್ನು ಅಷ್ಟಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಿಂಧ್ ಪ್ರಾಂತ್ಯದ ಶಾಸಕ ದನೇಶ್ ಕುಮಾರ್ ಪಾಕಿಸ್ತಾನದ ಸಂಸತ್ತಿನಲ್ಲಿ ಹಿಂದು ಹೆಣ್ಮಕ್ಕಳ ಪರವಾಗಿ ದನಿಯೆತ್ತಿದ್ದಾರೆ. 

A Hindu lawmaker in Pakistan has voiced serious concern over the forced conversion of minority girls in the country, slamming the government for its inaction “against influential people” involved in grave human rights abuse. While speaking in the country’s parliament, Senator Danesh Kumar Palyani said the constitution of Pakistan does not allow forced religious conversion and neither does the Quran.