ಬ್ರೇಕಿಂಗ್ ನ್ಯೂಸ್
14-04-24 05:07 pm HK NEWS ದೇಶ - ವಿದೇಶ
ನವದೆಹಲಿ, ಎ.14: ದೇಶದಲ್ಲಿ ಬುಲೆಟ್ ಟ್ರೈನ್ ಸೇವೆಯನ್ನು ವಿಸ್ತರಣೆ ಮಾಡಲಾಗುವುದು. ಉತ್ತರ ಭಾರತ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿಯೂ ಬುಲೆಟ್ ಟ್ರೈನ್ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಕಲ್ಪ ಪತ್ರ ಹೆಸರಿನ ಪ್ರಣಾಳಿಕೆ ಬಿಡುಗಡೆ ಬಳಿಕ ಈ ಮಾತುಗಳನ್ನಾಡಿದ್ದಾರೆ.
ಈಗಾಗಲೇ ಮುಂಬೈ- ಅಹ್ಮದಾಬಾದ್ ಬುಲೆಟ್ ಟ್ರೈನ್ ಕೆಲಸ ಆಗುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಇದಲ್ಲದೆ, ಒಂದು ಬುಲೆಟ್ ಟ್ರೈನ್ ಉತ್ತರ ಭಾರತ, ಇನ್ನೊಂದು ಪೂರ್ವ ಭಾರತದಲ್ಲಿ ಮತ್ತು ಮತ್ತೊಂದು ಬುಲೆಟ್ ಟ್ರೈನ್ ದಕ್ಷಿಣ ಭಾರತದಲ್ಲಿ ಸಂಚಾರ ಮಾಡಲಿದೆ. ಇದಕ್ಕಾಗಿ ಸರ್ವೆ ಕಾರ್ಯ ಶೀಘ್ರದಲ್ಲೇ ಶುರುವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಮುಂಬೈ- ಅಹ್ಮದಾಬಾದ್ ನಡುವಿನ 508 ಕಿಮೀ ಉದ್ದದ ಬುಲೆಟ್ ಟ್ರೈನ್ ಕೆಲಸ ಪ್ರಗತಿಯಲ್ಲಿದೆ. ಇದರ ಕಾಮಗಾರಿ ನಡೆಸುತ್ತಿರುವ ನ್ಯಾಶನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ ಕಂಪನಿಯು ಮಹಾರಾಷ್ಟ್ರದ ಪಾಲ್ಘಾರ್ ಮತ್ತು ಥಾಣೆ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣ ಆಗುತ್ತಿರುವುದನ್ನು ಹೇಳಿಕೊಂಡ ಬೆನ್ನಲ್ಲೇ ಮೋದಿ ಇನ್ನೂ ಮೂರು ಕಡೆ ಬುಲೆಟ್ ಟ್ರೈನ್ ಆರಂಭಿಸುವ ಘೋಷಣೆ ಮಾಡಿದ್ದಾರೆ.
ಮುಂಬೈ- ಅಹ್ಮದಾಬಾದ್ ನಡುವೆ ಸವಾಲಾಗಿದ್ದ 135 ಕಿಮೀ ಸ್ಟ್ರೆಚ್ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಎರಡು ಕಡೆ ಬೆಟ್ಟಗಳ ನಡುವೆ ಸುರಂಗ ಮಾರ್ಗವೂ ಇದರಲ್ಲಿ ಒಳಗೊಂಡಿದೆ. ಈ ಹೈಸ್ಪೀಡ್ ರೈಲು ಕಾರಿಡಾರ್ ಒಟ್ಟು 1.5 ಲಕ್ಷ ಕೋಟಿ ರೂಪಾಯಿ ವೆಚ್ಚದ್ದಾಗಿದ್ದು, ಕೇಂದ್ರದಿಂದ ಹತ್ತು ಸಾವಿರ ಕೋಟಿ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯ ಸರಕಾರಗಳು ತಲಾ 5 ಸಾವಿರ ಕೋಟಿ ವ್ಯಯಿಸಲಿದೆ. ಉಳಿದಂತೆ, ಖಾಸಗಿ ಹೂಡಿಕೆ ಇದರಲ್ಲಿರುತ್ತದೆ.
ದೇಶದಲ್ಲೀಗ ಮೂರು ಮಾದರಿಯ ವಂದೇ ಭಾರತ್ ರೈಲುಗಳ ಸಂಚಾರ ಇದೆ. ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ ಕಾರ್ ಮತ್ತು ವಂದೇ ಭಾರತ್ ಮೆಟ್ರೋ ಸೇವೆಗಳಿದ್ದು, ದೇಶದ ಉದ್ದಗಲದಲ್ಲಿ ಸಂಚಾರ ಮಾಡುತ್ತಿದೆ. 2019ರಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು, ದೇಶದಲ್ಲಿ 51 ಈ ಮಾದರಿಯ ರೈಲುಗಳು ಸಂಚರಿಸುತ್ತಿವೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
Prime Minister Narendra Modi on Sunday promised to expand bullet train services in the country, adding that three new trains will run in north, east and south India. As the Prime Minister unveiled the BJP's poll manifesto for the 2024 Lok Sabha elections, he also said that a survey on this will begin soon.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm