ಬ್ರೇಕಿಂಗ್ ನ್ಯೂಸ್
13-04-24 08:49 pm H K News ದೇಶ - ವಿದೇಶ
ಕೋಜಿಕ್ಕೋಡ್, ಎ.13: ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಕೇರಳದಲ್ಲಿ ಅಭಿಯಾನ ನಡೆಸುವ ಮೂಲಕ 34 ಕೋಟಿ ಹಣ ಒಟ್ಟು ಮಾಡಿ ಶಿಕ್ಷೆಯಿಂದ ಪಾರು ಮಾಡಲಾಗಿದೆ.
ಕೋಜಿಕ್ಕೋಡ್ ಮೂಲದ ನಿವಾಸಿ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗಿ ಬಂದವರು. 18 ವರ್ಷಗಳಿಂದ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಪರವಾಗಿ ಕೇರಳದಲ್ಲಿ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಅಬ್ದುರ್ ರಹೀಂ 2006ರಲ್ಲಿ ಡ್ರೈವರ್ ವೀಸಾದಲ್ಲಿ ರಿಯಾದ್ ತೆರಳಿದ್ದರು. ಸೌದಿ ಕುಟುಂಬದ ಮನೆಯೊಂದರಲ್ಲಿ ಕಾರು ಚಾಲಕನಾಗಿದ್ದುಕೊಂಡು ಬುದ್ಧಿಮಾಂದ್ಯ ಬಾಲಕನನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಜೊತೆಗಿತ್ತು. ಕಾರಿನಲ್ಲಿ ಬಾಲಕನ ಜೊತೆಗೆ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿದ್ದು, ಬಾಲಕನಿಗೆ ಇಡಲಾಗಿದ್ದ ಕೃತಕ ಉಸಿರಾಟದ ಮೆಷಿನ್ ಸಂಪರ್ಕ ಕಡಿತವಾಗಿತ್ತು. ರಕ್ಷಿಸಲು ಅಬ್ದುಲ್ ರಹೀಂ ಮಾಡಿದ ಪ್ರಯತ್ನ ಕೈಕೊಟ್ಟಿದ್ದರಿಂದ ಬಾಲಕ ಮೃತಪಟ್ಟಿದ್ದ. ಅದರಂತೆ, ರಹೀಮ್ ವಿರುದ್ಧ ದಾಖಲಾಗಿ ಸೌದಿ ಕಾನೂನು ಪ್ರಕಾರ ಜೈಲಿನಲ್ಲಿ ಇಡಲಾಗಿತ್ತು.
2018ರಲ್ಲಿ ಸೌದಿ ಕೋರ್ಟ್ ರಹೀಮ್ ಗೆ ಬಾಲಕನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರತಿಯಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದೇ ವೇಳೆ, ಬಾಲಕನ ಕುಟುಂಬಕ್ಕೆ ‘ಬ್ಲಡ್ ಮನಿ’ ರೂಪದಲ್ಲಿ 34 ಕೋಟಿ ಪರಿಹಾರ ಧನ ಪಾವತಿಸಿದಲ್ಲಿ ಗಲ್ಲು ಶಿಕ್ಷೆಯಿಂದ ಕಡಿತ ಮಾಡುವ ಪ್ರಸ್ತಾಪ ಇಡಲಾಗಿತ್ತು. ಹೀಗಾಗಿ ಲೀಗಲ್ ಏಕ್ಷನ್ ಕಮಿಟಿ ಹೆಸರಲ್ಲಿ ರಹೀಮ್ ಪರವಾಗಿ ಅಭಿಯಾನ ನಡೆಸಿದ್ದಕ್ಕೆ ಕೇರಳದ ಜನರು ಸ್ಪಂದಿಸಿದ್ದು ಹಣ ಹೊಂದಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಸೇವ್ ಅಬ್ದುಲ್ ರಹೀಂ ಹೆಸರಲ್ಲಿ ಪ್ರತ್ಯೇಕ ಏಪ್ ಮಾಡಿ, ಹಣಕ್ಕಾಗಿ ಕ್ಯಾಂಪೇನ್ ಮಾಡಲಾಗಿತ್ತು. ಎನ್ಆರ್ ಐ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಅಭಿಯಾನದ ಮುಂಚೂಣಿಯಲ್ಲಿದ್ದರಿಂದ ಹಣ ಹರಿದು ಬಂದಿತ್ತು. 34 ಕೋಟಿ ಹಣ ಒಟ್ಟಾಗುತ್ತಲೇ ಭಾರತೀಯ ವಿದೇಶಾಂಗ ಇಲಾಖೆಯ ಮೂಲಕ ಸೌದಿ ಅರೇಬಿಯಾದ ಇಂಡಿಯನ್ ಎಂಬಸ್ಸಿಗೆ ಹಣ ತಲುಪಿಸಲಾಗಿದೆ. ರಿಯಾದ್ ಜೈಲಿನಲ್ಲಿರುವ ಅಬ್ದುಲ್ ರಹೀಂ ತನ್ನೂರಿನ ಜನರು ಹಣ ಒಟ್ಟು ಮಾಡಿದ್ದರಿಂದ ಸಂತಸಗೊಂಡಿದ್ದು ಇದು ಒರಿಜಿನಲ್ ಕೇರಳ ಸ್ಟೋರಿ ಎಂದು ಪ್ರತಿಕ್ರಿಯಿಸಿದ್ದಾರೆ.
The deadline loomed like the sword of Damocles but an astonishing four days is all it took for people in Kerala to channel their compassion and rally together to raise an astounding ₹34 crore to save a man from the state from the gallows in Saudi Arabia.
18-03-25 01:08 pm
HK News Desk
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm