ಬ್ರೇಕಿಂಗ್ ನ್ಯೂಸ್
07-04-24 07:45 pm HK News Desk ದೇಶ - ವಿದೇಶ
ವಯನಾಡ್, ಎ.7: ಕೇರಳದ ವಯನಾಡ್ ಜಿಲ್ಲೆಯ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ 20 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಇದೇ ವೇಳೆ, ಪೊಲೀಸರು ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಎಸ್ಎಫ್ಐ ವಿದ್ಯಾರ್ಥಿಗಳ ಸುದೀರ್ಘ 29 ಗಂಟೆಗಳ ಕಿರುಕುಳವೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಫೆಬ್ರವರಿ 18ರಂದು ಸಿದ್ಧಾರ್ಥ್ ಎಂಬ 20 ವರ್ಷದ ವಿದ್ಯಾರ್ಥಿ ನೇಣು ಬಿಗಿದು ಸಾವಿಗೆ ಶರಣಾಗಿದ್ದ. ಪ್ರಕರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹೆತ್ತವರು ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದರು. ಸ್ಥಳೀಯ ಪೊಲೀಸರ ತನಿಖೆಯ ಬಗ್ಗೆ ತಮಗೆ ನಂಬಿಕೆಯಿಲ್ಲ ಎಂದು ಹೆತ್ತವರು ಹೇಳಿದ್ದರು. ಅದರಂತೆ, ಪಿಣರಾಯಿ ವಿಜಯನ್ ಸರಕಾರ ತನಿಖೆಯನ್ನು ಸಿಬಿಐಗೆ ಕೊಟ್ಟಿತ್ತು. ಸಿಬಿಐ ತನಿಖೆ ಎತ್ತಿಕೊಳ್ಳುತ್ತಿದ್ದಂತೆ 20 ವಿದ್ಯಾರ್ಥಿಗಳ ಮೇಲೆ ಮರು ಎಫ್ಐಆರ್ ದಾಖಲಿಸಿದೆ.
ಸಿದ್ಧಾರ್ಥ್ ಮೇಲೆ ಫೆ.16ರ ಬೆಳಗ್ಗೆ 9 ಗಂಟೆಯಿಂದ ಮರುದಿನ ಫೆ.17ರ ರಾತ್ರಿ 2 ಗಂಟೆ ವರೆಗೂ ನಿರಂತರ ಕಿರುಕುಳ ನೀಡಲಾಗಿತ್ತು. ಹಿರಿಯ ವಿದ್ಯಾರ್ಥಿಗಳು ಬೆಲ್ಟ್ ನಲ್ಲಿ ಹಲ್ಲೆ ಮಾಡಿದ್ದರು. ದೈಹಿಕವಾಗಿ ಹಿಂಸೆ ನೀಡಿದ್ದರು. ಅಲ್ಲದೆ, ಮಾನಸಿಕವಾಗಿಯೂ ನಿರಂತರ ಹಿಂಸೆ ನೀಡಿದ್ದರು ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ನಿರಂತರ ಕಿರುಕುಳದ ಕಾರಣ ಈ ಸಂಸ್ಥೆಯಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ. ಶಿಕ್ಷಣ ಅರ್ಧಕ್ಕೆ ಬಿಟ್ಟು ಮನೆಗೆ ಹಿಂತಿರುಗುವುದಕ್ಕೂ ಸಾಧ್ಯವಿಲ್ಲ ಎಂದು ಮಾನಸಿಕವಾಗಿ ನೊಂದುಕೊಂಡು ಸಿದ್ದಾರ್ಥ್ ತನ್ನ ಹಾಸ್ಟೆಲಿನ ಬಾತ್ ರೂಮಿನಲ್ಲಿ ಫೆ.18ರಂದು ಬೆಳಗ್ಗೆ ನೇಣಿಗೆ ಶರಣಾಗಿದ್ದ ಎಂದು ವರದಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯ ಹೆತ್ತವರು ಆಡಳಿತಾರೂಢ ಎಡರಂಗದ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಮೇಲೆ ಆರೋಪ ಮಾಡಿದ್ದರು. ಪೊಲೀಸರು ತನಿಖೆ ಆರಂಭಿಸಿ ಹಲವರನ್ನು ಬಂಧಿಸಿದ್ದರು. ಈ ಘಟನೆಯಿಂದಾಗಿ ರಾಜ್ಯದ ಎಡರಂಗ ಸರಕಾರಕ್ಕೆ ತೀವ್ರ ಮುಜುಗರವೂ ಆಗಿತ್ತು.
JS Siddharth, the 20-year-old student who was found dead at Kerala Veterinary University in Wayanad on February 18, was subjected to severe ragging and was continuously assaulted for 29 hours, the state police said in their case file handed over to the CBI.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm