ಬ್ರೇಕಿಂಗ್ ನ್ಯೂಸ್
29-03-24 08:20 pm HK News Desk ದೇಶ - ವಿದೇಶ
ನವದೆಹಲಿ, ಮಾ.29: ವಿರೋಧ ಪಕ್ಷ ಕಾಂಗ್ರೆಸ್ಗೆ ಆದಾಯ ತೆರಿಗೆ (ಐಟಿ) ಇಲಾಖೆಯು ಮತ್ತೊಂದು ಆಘಾತ ನೀಡಿದೆ. ಗುರುವಾರ ಸುಮಾರು 1,700 ಕೋಟಿ ರೂ. ಮೊತ್ತದ ತೆರಿಗೆ ಪಾವತಿಸುವಂತೆ ಐಟಿ ನೋಟಿಸ್ ಜಾರಿ ನೀಡಿದೆ. 2024ರ ಮಹತ್ವದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ ಈ ನೋಟಿಸ್ ಬಂದಿದ್ದು, ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ಆತಂಕಕ್ಕೆ ತಳ್ಳಿದೆ.
ನಾಲ್ಕು ಮೌಲ್ಯಮಾಪನ ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಈ ನೋಟಿಸ್ ಬಂದಿರುವುದಾಗಿ ಪಕ್ಷ ಹೇಳಿಕೊಂಡಿದೆ.
1700 ಕೋಟಿ ರೂ. ಮೊತ್ತದ ನೋಟಿಸ್ 2017-18 ರಿಂದ 2020-21ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದ ಹೊಸ ತೆರಿಗೆ ಬೇಡಿಕೆಯಾಗಿದೆ. ಇದರಲ್ಲಿ ದಂಡದ ಮೊತ್ತ ಹಾಗೂ ಬಡ್ಡಿಯೂ ಒಳಗೊಂಡಿದೆ. ಇದಲ್ಲದೆ ಕಾಂಗ್ರೆಸ್ ಇತರ ಮೂರು ಮೌಲ್ಯಮಾಪನ ವರ್ಷಗಳ ಆದಾಯದ ಮರುಮೌಲ್ಯಮಾಪನವನ್ನೂ ಎದುರುನೋಡುತ್ತಿದೆ. ಇದರ ಗಡುವು ಭಾನುವಾರಕ್ಕೆ ಕೊನೆಗೊಳ್ಳಲಿದೆ.
ಆದಾಯ ತೆರಿಗೆ ಇಲಾಖೆಯ ಈ ಕ್ರಮಕ್ಕೆ ತಡೆ ಕೋರಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ವಕೀಲ ಮತ್ತು ರಾಜ್ಯಸಭಾ ಸಂಸದ ವಿವೇಕ್ ಟಂಕಾ ಅವರು ನೋಟಿಸ್ ಬಂದಿರುವುದನ್ನು ದೃಢಪಡಿಸಿದ್ದು, ಐಟಿ ಕ್ರಮ ಪ್ರಜಾಸತ್ತಾತ್ಮಕ ವಿರೋಧಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಇದನ್ನು ಪಕ್ಷವು ಕಾನೂನಾತ್ಮಕವಾಗಿ ಎದುರಿಸುತ್ತದೆ ಎಂದು ಹೇಳಿದ್ದಾರೆ.
ಪ್ರಮುಖ ದಾಖಲೆಗಳಿಲ್ಲದೆ ಸುಮಾರು 1,700 ಕೋಟಿ ರೂ. ಮೊತ್ತದ ಹೊಸ ಐಟಿ ನೋಟಿಸ್ ಅನ್ನು ಗುರುವಾರ ಪಕ್ಷಕ್ಕೆ ನೀಡಲಾಗಿದೆ ಎಂದು ವಿವೇಕ್ ಟಂಕಾ ತಿಳಿಸಿದ್ದಾರೆ. "ಮೌಲ್ಯಮಾಪನದ ಆದೇಶಗಳಿಲ್ಲದ ತೆರಿಗೆ ಪಾವತಿಸುವಂತೆ ಸೂಚಿಸುವ ನೋಟಿಸ್ ಸ್ವೀಕರಿಸಿದ್ದೇವೆ. ಮರುಮೌಲ್ಯಮಾಪನಕ್ಕೆ ಯಾವುದೇ ಕಾರಣಗಳನ್ನು ನೀಡದೆ, ಕೇವಲ ತೆರಿಗೆ ಬೇಡಿಕೆಯ ನೋಟಿಸ್ ನೀಡಲು ಮಾತ್ರ ಸರ್ಕಾರ ಆಸಕ್ತಿ ಹೊಂದಿದೆ,” ಎಂದು ಅವರು ಹರಿಹಾಯ್ದಿದ್ದಾರೆ.
ಈ ರೀತಿಯ ನೋಟಿಸ್ಗಳ ಮೂಲಕ ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ಮುಖ್ಯ ವಿರೋಧ ಪಕ್ಷಕ್ಕೆ ಆರ್ಥಿಕವಾಗಿ ತೊಂದರೆ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
The Congress has received a ₹ 1,800 crore notice from the Income Tax Department, a day after the Delhi High Court dismissed the party's petition challenging the tax notices.
21-03-25 10:41 pm
HK News Desk
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
Karnataka Bandh News Live: ಕರ್ನಾಟಕ ಬಂದ್ ಕರೆ...
21-03-25 08:06 pm
18 BJP MLAs suspended, assembly: ಸ್ಪೀಕರ್ ಪೀಠಕ...
21-03-25 05:46 pm
21-03-25 04:46 pm
HK News Desk
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
21-03-25 12:44 pm
Bangalore Correspondent
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm