ಬ್ರೇಕಿಂಗ್ ನ್ಯೂಸ್
20-03-24 07:10 pm HK News Desk ದೇಶ - ವಿದೇಶ
ಮುಂಬೈ, ಮಾ.20: ಒಂದು ಕಾಲದಲ್ಲಿ ಮುಂಬೈ ಭೂಗತ ಜಗತ್ತನ್ನು ತನ್ನ ಗನ್ ತುದಿಯಿಂದಲೇ ನಡುಗಿಸಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ 2006ರ ಫೇಕ್ ಎನ್ಕೌಂಟರ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
2006ರಲ್ಲಿ ನಡೆದಿದ್ದ ರಾಮನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ಎನ್ಕೌಂಟರ್ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್, ಕೆಳಗಿನ ಕೋರ್ಟ್ ಪ್ರದೀಪ ಶರ್ಮಾರನ್ನು ಆರೋಪದಿಂದ ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ. ಎಸ್ಐಟಿ ತನಿಖೆಯಲ್ಲಿ ಫೇಕ್ ಎನ್ಕೌಂಟರ್ ಎಂದು ಸಾಬೀತಾದ ಬಳಿಕ ಅದಕ್ಕೆ ಕಾರಣವಾದ ಕ್ರೈಂ ಬ್ರಾಂಚ್ ಇನ್ಸ್ ಪೆಕ್ಟರನ್ನು ಮುಕ್ತಗೊಳಿಸುವುದು ಸರಿಯಲ್ಲ ಎಂದು ಹೇಳಿದ್ದು, ಕೆಳಗಿನ ಕೋರ್ಟ್ ಸ್ವೀಕಾರಾರ್ಹವಲ್ಲ ಎಂದು ತೀರ್ಪು ನೀಡಿದೆ. ಅಲ್ಲದೆ, ಮೂರು ವಾರದ ಒಳಗೆ ಕೋರ್ಟಿಗೆ ಶರಣಾಗುವಂತೆ ಪ್ರದೀಪ್ ಶರ್ಮಾಗೆ ಹೈಕೋರ್ಟ್ ತಾಕೀತು ಮಾಡಿದೆ.


ಹೈಕೋರ್ಟ್ ದ್ವಿಸದಸ್ಯ ಪೀಠದ ಜಸ್ಟಿಸ್ ರೇವತಿ ಮೋಹಿತ್ ದೇರೆ ಮತ್ತು ಗೌರಿ ಗೋಡ್ಸೆ ಈ ತೀರ್ಪು ನೀಡಿದ್ದಾರೆ. ಇದಲ್ಲದೆ, ಕೆಳಗಿನ ಕೋರ್ಟ್ ಇತರ 13 ಮಂದಿ ಪೊಲೀಸರಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದ್ದು, ಅದೇ ಮಾದರಿಯ ಶಿಕ್ಷೆಯನ್ನು ಪ್ರದೀಪ್ ಶರ್ಮಾ ಅನುಭವಿಸಬೇಕೆಂದು ತೀರ್ಪು ನೀಡಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದಂತಾಗಿದೆ.


ಯಾರೀತ ಎನ್ಕೌಂಟರ್ ಪ್ರದೀಪ್ ಶರ್ಮಾ ?
ಮಹಾರಾಷ್ಟ್ರ ಪೊಲೀಸ್ ಅಕಾಡೆಮಿಯ 1983ರ ಬ್ಯಾಚಿನ ಅಧಿಕಾರಿಯಾಗಿರುವ ಪ್ರದೀಪ್ ಶರ್ಮಾ 25 ವರ್ಷಗಳ ಸೇವಾವಧಿಯಲ್ಲಿ ಸುಮಾರು 112 ಮಂದಿ ಉಗ್ರರು, ಡಕಾಯಿತರು, ಗ್ಯಾಂಗ್ ಸ್ಟರ್, ಅಂಡರ್ ವರ್ಲ್ಡ್ ರೌಡಿಗಳನ್ನು ಎನ್ಕೌಂಟರ್ ಮೂಲಕ ಕೊಂದು ಮುಗಿಸಿದ್ದಾರೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 1990 - 2000ನೇ ಇಸವಿ ವೇಳೆಗೆ ಮುಂಬೈ ಭೂಗತ ಜಗತ್ತನ್ನು ಆಳಿದ್ದ ದಾವೂದ್ ಇಬ್ರಾಹಿಂ ಖಸ್ಕರ್, ಚೋಟಾ ರಾಜನ್, ಅರುಣ್ ಗಾವ್ಲಿ, ಅಮರ್ ನಾಯ್ಕ್ ನೇತೃತ್ವದ ಗ್ಯಾಂಗ್ ಗಳನ್ನು ಮಟ್ಟಹಾಕಲು ಪ್ರದೀಪ್ ಶರ್ಮಾ ಶ್ರಮ ವಹಿಸಿದ್ದರು.
1999ರಲ್ಲಿ ಪಾಕಿಸ್ತಾನದಲ್ಲಿ ಅಡಗಿದ್ದ ದಾವೂದ್ ಇಬ್ರಾಹಿಂನನ್ನು ಕೊಲ್ಲಲು ರೆಡಿಯಾಗಿದ್ದ ಛೋಟಾ ರಾಜನ್ ಗ್ಯಾಂಗ್ ಸದಸ್ಯ ವಿನೋದ್ ಮಟ್ಕರ್ ನನ್ನು ಪ್ರದೀಪ್ ಶರ್ಮಾ ಎನ್ಕೌಂಟರ್ ಮಾಡಿದ್ದರು. ಅದೇ ವರ್ಷ ಡಿ ಕಂಪನಿಗೆ ಸೇರಿದ ಸಾದಿಕ್ ಕಾಲಿಯಾನನ್ನು ಮುಂಬೈನ ದಾದರ್ ಪ್ರದೇಶದಲ್ಲಿ ಎನ್ಕೌಂಟರ್ ಮಾಡಲಾಗಿತ್ತು. 2003ರಲ್ಲಿ ಪ್ರದೀಪ್ ಶರ್ಮಾ ಅಂಧೇರಿ ಕ್ರೈಮ್ ಇಂಟೆಲಿಜೆನ್ಸ್ ಯೂನಿಟ್ ಮುಖ್ಯಸ್ಥರಾಗಿದ್ದರು. ಆ ಸಂದರ್ಭದಲ್ಲಿ ಮೂವರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ್ದರು. 2008ರ ವೇಳೆಗೆ ಪ್ರದೀಪ್ ಶರ್ಮಾ ಮಾಡಿದ್ದ ಎನ್ಕೌಂಟರ್ ಪ್ರಕರಣಗಳಲ್ಲಿ ಕೆಲವು ನಕಲಿ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೆ, ಎನ್ಕೌಂಟರ್ ಮೂಲಕ ವಿರೋಧಿ ಗ್ಯಾಂಗ್ ಗಳಿಂದ ಹಣ ಪಡೆದು ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದು ಪೊಲೀಸ್ ಸೇವೆಯಿಂದ ವಜಾ ಮಾಡಲಾಗಿತ್ತು.
ಆದರೆ ಪ್ರದೀಪ್ ಶರ್ಮಾ ಮಹಾರಾಷ್ಟ್ರ ಟ್ರಿಬ್ಯುನಲ್ ನಲ್ಲಿ ವಜಾ ಶಿಕ್ಷೆಯನ್ನು ಪ್ರಶ್ನಿಸಿ ಮತ್ತೆ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು. ಅಷ್ಟರಲ್ಲಿ 2006ರಲ್ಲಿ ನಡೆದ ಲಖನ್ ಭಾಯಿ ಎನ್ಕೌಂಟರ್ ಪ್ರಕರಣದಲ್ಲಿ ಹೈಕೋರ್ಟಿನಲ್ಲಿ ದಾವೆ ಹೂಡಿ ಪ್ರದೀಪ್ ಶರ್ಮಾ ಮತ್ತು ಪೊಲೀಸರ ತಂಡದ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಪ್ರದೀಪ್ ಶರ್ಮಾ ಅರೆಸ್ಟ್ ಕೂಡ ಆಗಿದ್ದರು. ಆದರೆ 2013ರಲ್ಲಿ ಕೋರ್ಟಿನಲ್ಲಿ ವಿಚಾರಣೆ ನಡೆದು ಇತರೇ 13 ಮಂದಿಗೆ ಜೀವಾವಧಿ ಶಿಕ್ಷೆ ಜಾರಿಯಾದರೂ, ಪ್ರದೀಪ್ ಶರ್ಮಾ ಆರೋಪದಿಂದ ಖುಲಾಸೆಗೊಂಡಿದ್ದರು. ನಾಲ್ಕು ವರ್ಷಗಳ ಬಳಿಕ 2017ರಲ್ಲಿ ಮತ್ತೆ ಪೊಲೀಸ್ ಇಲಾಖೆ ಸೇರಿದ್ದ ಪ್ರದೀಪ್ ಶರ್ಮಾ ಥಾಣೆ ಜಿಲ್ಲೆಯ ಭ್ರಷ್ಟಾಚಾರ ವಿರೋಧಿ ದಳದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 2019ರಲ್ಲಿ ಪೊಲೀಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ್ದ ಶರ್ಮಾ, ಮುಂಬೈನ ನಲಸೋಪಾರ ವಿಧಾನಸಭೆ ಕ್ಷೇತ್ರದಿಂದ ಶಿವಸೇನೆಯಿಂದ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದರು. 2021ರಲ್ಲಿ ಥಾಣೆಯ ಮನ್ಸುಕ್ ಹೀರಾನ್ ಕೊಲೆ ಪ್ರಕರಣದಲ್ಲಿ ಪ್ರದೀಪ್ ಶರ್ಮಾ ಎನ್ಐಎ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಪಡೆದು ಹೊರಬಂದಿದ್ದ ಅವರನ್ನು ಬಳಿಕ ಐಟಿ ಅಧಿಕಾರಿಗಳು ಅಪರಿಮಿತ ಆಸ್ತಿ ವಿಚಾರದಲ್ಲಿ ಬೆನ್ನು ಹತ್ತಿದ್ದರು.

ಕುತ್ತಿಗೆ ಹಿಡಿದ ಲಖನ್ ಭಯ್ಯಾ ಎನ್ಕೌಂಟರ್ ಕೇಸ್
2006 ನವೆಂಬರ್ 11ರಂದು ರೌಡಿ ಲಖನ್ ಭಯ್ಯಾನನ್ನು ಆತನ ಸ್ನೇಹಿತನೇ ಆಗಿದ್ದ ಅನಿಲ್ ಭೇಡಾ ಎಂಬಾತ ವಾಶಿಯಿಂದ ತನ್ನ ವಾಹನದಲ್ಲಿ ಕರೆದೊಯ್ದಿದ್ದ. ಆನಂತರ, ಕಾರ್ಯಕ್ರಮ ಒಂದರಲ್ಲಿ ಹಾಜರಾಗಿದ್ದ ಲಖನ್ ಭಯ್ಯಾನನ್ನು ಪೊಲೀಸರು ಕೆಲವೇ ಹೊತ್ತಿನಲ್ಲಿ ಎನ್ಕೌಂಟರ್ ಮಾಡಿದ್ದರು. ಆದರೆ ಲಖನ್ ಭಯ್ಯಾ ಸೋದರ, ವಕೀಲ ರಾಮಪ್ರಸಾದ್ ಗುಪ್ತಾ ತನ್ನ ಸೋದರನದ್ದು ಫೇಕ್ ಎನ್ಕೌಂಟರ್ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2009ರಲ್ಲಿ ಕೋರ್ಟ್ ಸೂಚನೆಯಂತೆ ಎಫ್ಐಆರ್ ದಾಖಲಾಗಿದ್ದಲ್ಲದೆ, ತನಿಖೆಗೆ ವಿಶೇಷ ತನಿಖಾ ತಂಡ ನೇಮಕವಾಗಿತ್ತು. ತನಿಖಾ ತಂಡವು ಲಖನ್ ಭಯ್ಯಾನನ್ನು ಕೊಲ್ಲಲು ಪೊಲೀಸರು ವಿರೋಧಿ ಗ್ಯಾಂಗಿನಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು ಎಂದು ಕೋರ್ಟಿಗೆ ಚಾರ್ಜ್ ಶೀಟ್ ಹಾಕಿದ್ದರು. 2013ರಲ್ಲಿ 13 ಮಂದಿ ಪೊಲೀಸರು ಸೇರಿ ಒಟ್ಟು 21 ಮಂದಿ ದೋಷಿಗಳೆಂದು ಸೆಷನ್ಸ್ ಕೋರ್ಟ್ ತೀರ್ಪಿತ್ತಿದ್ದಲ್ಲದೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಎನ್ಕೌಂಟರ್ ಮಾಡಿಸಿದ್ದ ತಂಡದ ಮುಖ್ಯಸ್ಥ ಪ್ರದೀಪ್ ಶರ್ಮಾ ಖುಲಾಸೆಗೊಂಡಿದ್ದರು. ಈ ಪೈಕಿ ಒಬ್ಬ ಇನ್ಸ್ ಪೆಕ್ಟರ್ ಸೇರಿ ಮೂವರು ತನಿಖೆಯ ಸಂದರ್ಭದಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟಿದ್ದರು.
ಪ್ರದೀಪ್ ಶರ್ಮಾನನ್ನು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ವಕೀಲ ರಾಮಪ್ರಸಾದ್ ಗುಪ್ತಾ ಮತ್ತೆ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಪೊಲೀಸರು ಸ್ಟೇಜಿನಲ್ಲಿರುವಾಗಲೇ ಎನ್ಕೌಂಟರ್ ಮಾಡಿದ್ದಾರೆ, ಆ ಕುರಿತ ದಾಖಲೆಗಳನ್ನು ತಿರುಚಿದ್ದಾರೆಂದು ಕೋರ್ಟಿನಲ್ಲಿ ವಾದಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಮೊನ್ನೆ ಮಾರ್ಚ್ 19ರಂದು ಹೈಕೋರ್ಟ್ 867 ಪುಟಗಳ ತೀರ್ಪಿತ್ತಿದ್ದು, ಪ್ರದೀಪ್ ಶರ್ಮಾ ಕೂಡ ದೋಷಿಯೆಂದು ಹೇಳಿದ್ದಲ್ಲದೆ, ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
Pradeep Sharma, a former Mumbai Police 'encounter specialist,' has been sentenced to life imprisonment by the Bombay High Court for his involvement in the fake encounter killing of Ramnarayan Gupta, an alleged close aide of gangster Chhota Rajan, in 2006. This landmark judgment marks the first conviction of police officers in a fake encounter case in India.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm