Prime Minister Narendra Modi, Arunachal Pradesh: ಚೀನಾ ಗಡಿಯಲ್ಲಿ ವಿಶ್ವದ ಅತೀ ಉದ್ದದ ದ್ವಿಪಥ ಸೆಲಾ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ ;  ಏನಿದರ ವಿಶೇಷತೆ ?

10-03-24 01:41 pm       HK News Desk   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ  ಈಶಾನ್ಯ ರಾಜ್ಯ ಪ್ರವಾಸದ ಎರಡನೇ ದಿನವಾದ ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ವಿಶ್ವದ ಅತಿ ಎತ್ತರದಲ್ಲಿ (13,000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ನವದೆಹಲಿ, ಮಾ 10: ಪ್ರಧಾನಿ ನರೇಂದ್ರ ಮೋದಿ  ಈಶಾನ್ಯ ರಾಜ್ಯ ಪ್ರವಾಸದ ಎರಡನೇ ದಿನವಾದ ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ವಿಶ್ವದ ಅತಿ ಎತ್ತರದಲ್ಲಿ (13,000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ತಲುಪಲು ಇದು ಏಕೈಕ ಮಾರ್ಗವಾಗಿದೆ. ಪ್ರಾಜೆಕ್ಟ್ ವರ್ತಕ್ ಅಡಿಯಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನಿಂದ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವು ಟ್ರಾನ್ಸ್-ಅರುಣಾಚಲ ಹೆದ್ದಾರಿ ವ್ಯವಸ್ಥೆಯ ಒಂದು ಘಟಕವಾಗಿದೆ. 13,000 ಅಡಿಗಳಷ್ಟು ವಿಶ್ವದ ಅತಿ ಉದ್ದದ ಎರಡು-ಪಥದ ಸುರಂಗವಾಗಿದೆ.

ಪ್ರಸ್ತುತ ಸೆಲಾ ಪಾಸ್‌ನಲ್ಲಿ, ಭಾರತೀಯ ಸೇನೆಯ ಸೈನಿಕರು ಮತ್ತು ಪ್ರದೇಶದ ಜನರು ತವಾಂಗ್ ತಲುಪಲು ಬಲಿಪರಾ-ಚರಿದುವಾರ್ ರಸ್ತೆಯನ್ನು ಬಳಸುತ್ತಿದ್ದಾರೆ. ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದಾಗಿ, ಸೆಲಾ ಪಾಸ್‌ನಲ್ಲಿ ತೀವ್ರವಾದ ಹಿಮವು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಅಲ್ಲದೆ, ಸೆಲಾ ಪಾಸ್ 30 ತಿರುವುಗಳನ್ನು ಹೊಂದಿದೆ, ಇದು ತುಂಬಾ ಅಂಕುಡೊಂಕಾದವು. ಇದರಿಂದಾಗಿ ಇಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಪ್ರಯಾಣಕ್ಕೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ಇಡೀ ತವಾಂಗ್ ವಲಯವು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಸೆಲಾ ಪಾಸ್ ಸುರಂಗವು ಅಸ್ತಿತ್ವದಲ್ಲಿರುವ ರಸ್ತೆಯನ್ನು ಬೈಪಾಸ್ ಮಾಡುತ್ತದೆ ಮತ್ತು ಇದು ಬೈಸಾಖಿಯನ್ನು ನುರಾನಾಂಗ್‌ಗೆ ಸಂಪರ್ಕಿಸುತ್ತದೆ.

Prime Minister Narendra Modi on Saturday dedicated to the nation the Sela tunnel, built at an altitude of 13,000 feet, which will provide all-weather connectivity to strategically located Tawang district, and is expected to ensure better movement of troops along the frontier region.