ಬ್ರೇಕಿಂಗ್ ನ್ಯೂಸ್
04-02-24 08:43 pm HK News Desk ದೇಶ - ವಿದೇಶ
ಮುಂಬೈ, ಫೆ 04: ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಮತ್ತು ಅವರ ತಂಡವು 'ಗರ್ಭಕಂಠದ ಕ್ಯಾನ್ಸರ್' ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಫೇಕ್ ಡೆತ್ ನ್ಯೂಸ್' ಹರಡಿ ಇದೀಗ ವ್ಯಾಪಕ ಟೀಕೆಗೊಳಗಾಗಿದೆ. ಸುಳ್ಳು ಸುದ್ದಿ ಹಬ್ಬಿಸಿದ ತಾರೆಯ ವಿರುದ್ಧ ಮುಂಬೈ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯೂಎ) ಕೂಡ ನಟಿಯ ವಿರುದ್ಧ ಎಫ್‌ಐಆರ್‌ಗೆ ಆಗ್ರಹಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್ ಶ್ಯಾಮ್ಲಾಲ್ ಗುಪ್ತಾ, "ಪೂನಂ ಪಾಂಡೆ ಭಾರತೀಯರ ಭಾವನೆಗಳೊಂದಿಗೆ ಆಟವಾಡಿದ್ದಾರೆ. ನಟಿಯ ನಿಧನದ ಸುದ್ದಿ ತಿಳಿದ ಅನೇಕರು ಆಕೆಗಾಗಿ ಮತ್ತು ಅವರ ಕುಟುಂಬಕ್ಕಾಗಿ ಪ್ರಾರ್ಥಿಸಿದರು. ಚೀಪ್ ಪಬ್ಲಿಸಿಟಿ ಸ್ಟಂಟ್ ಮೂಲಕ ಜನರ ಭಾವನೆಗಳನ್ನು ನೋಯಿಸಿದ್ದಾರೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಇದು ಸೂಕ್ತ ವಿಧಾನವಲ್ಲ. ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಲ್ಲಿ ವಿನಂತಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ನಟಿ ಬಿಪಾಶಾ ಬಸು ಕೂಡ ಪೂನಂ ಪಾಂಡೆ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು. 'ನಟಿ ಮಾತ್ರವಲ್ಲ, ಈ ಕೃತ್ಯದ ಹಿಂದೆ ಇರುವ ಪಿಆರ್ ತಂಡ ಕೂಡ ನಾಚಿಕೆಪಡಬೇಕು' ಎಂದು ನಟಿ ಆರತಿ ಸಿಂಗ್ ಅವರ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಬಿಪಾಶಾ ಬರೆದಿದ್ದರು. ನಟಿ ಮಿನಿ ಮಾಥುರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, "ಈ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ಸ್ಟಂಟ್ ಕೇವಲ ಅಸಹ್ಯಕರ ವಿಷಯ ಮಾತ್ರವಲ್ಲ, ಸಂವೇದನಾಶೀಲರಹಿತ ಕೂಡ. ವಿಷಯದ ಬಗ್ಗೆ ಸಂಶೋಧನೆ ಮಾಡದೇ ಹೀಗೆ ಮಾಡಿದ್ದಾರೆ'' ಎಂದು ತಿಳಿಸಿದ್ದಾರೆ
ಮಹಾರಾಷ್ಟ್ರ ಎಂಎಲ್ಸಿ ಸತ್ಯಜೀತ್ ತಂಬೆ ಕೂಡ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, "ಪೂನಂ ಪಾಂಡೆ ಸಾವಿನ ಸುದ್ದಿ ಅಂತಿಮವಾಗಿ ಪ್ರಚಾರದ ಸ್ಟಂಟ್ ಎಂಬುದು ಸಾಬೀತಾಯಿತು. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಮೊದಲನೆಯದು, ಜಾಗೃತಿ ಎಂದು ನಕಲಿ ಸುದ್ದಿ ಹರಡಿದ್ದು. ಪ್ರಭಾವಿ ವ್ಯಕ್ತಿ ಅಥವಾ ಮಾಡೆಲ್ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯುವುದು ರೋಗದ ಬಗ್ಗೆ ಜಾಗೃತಿ ಮೂಡಿಸುವ ವಿಧಾನವಾಗುವುದಿಲ್ಲ. ಇಡೀ ಘಟನೆಯು ಗರ್ಭಕಂಠದ ಕ್ಯಾನ್ಸರ್‌ನ ಗಂಭೀರತೆಯನ್ನು ಶೂನ್ಯಗೊಳಿಸುತ್ತದೆ ಮತ್ತು ಗಮನವನ್ನು ಸಂಪೂರ್ಣವಾಗಿ ಆ ಪ್ರಭಾವಿ ವ್ಯಕ್ತಿಗಳ ಕಡೆಗೆ ತಿರುಗಿಸುತ್ತದೆ. ನಟಿ ಜಾಗೃತಿ ಮೂಡಿಸುವ ಬದಲು ಕ್ಯಾನ್ಸರ್‌ನಿಂದ ಬದುಕುಳಿದವರ ಮೇಲೆ ತಮಾಷೆ ಮಾಡಿದಂತಿದೆ. ಮತ್ತೊಂದು ಸಮಸ್ಯೆ ಎಂದರೆ, ಈ ನಾಟಕವನ್ನು ಸುದ್ದಿ ಸಂಸ್ಥೆಗಳು ಸತ್ಯಾನುಸತ್ಯತೆಗಳನ್ನು ಪರಿಶೀಲಿಸದೇ ವರದಿ ಮಾಡಿವೆ. ಮಾಧ್ಯಮಗಳನ್ನು ಹೀಗೆಲ್ಲಾ ಬಳಸಿಕೊಲ್ಳುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಕ್ಯಾಕರಿಸಿ ಉಗಿದ ಜನ ;
ನಿಜಾ, ಗರ್ಭ ಕೋಶ ಕಂಠ ಕ್ಯಾನ್ಸರ್ ನಿಜಕ್ಕೂ ಅಪಾಯಕಾರಿ. ಭಾರತ ದೇಶದಲ್ಲಿ ಪ್ರತಿ ವರ್ಷ 1 ಲಕ್ಷದ 30 ಸಾವಿರ ಮಹಿಳೆಯರಲ್ಲಿ ಗರ್ಭ ಕಂಠ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಈ ಪೈಕಿ 75 ಸಾವಿರ ಮಹಿಳೆಯರು ಪ್ರತಿ ವರ್ಷ ಭಾರತದಲ್ಲಿ ಜೀವ ಬಿಡುತ್ತಿದ್ದಾರೆ. ಇಂಥಹ ಕಾಯಿಲೆಯ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ನಿಜವಾಗಿಯೂ ಇದೆ. ಆದರೆ ಅದಕ್ಕೆ ಪೂನಂ ಪಾಂಡೆ ಆಯ್ಕೆ ಮಾಡಿಕೊಂಡ ದಾರಿ ನಿಜಕ್ಕೂ ಖಂಡನೀಯ
ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಕೆರಳಿ ಕೆಂಡವಾಗಿರುವ ಅನೇಕರು, ಪೂನಂ ಪಾಂಡೆಯನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ತಿದ್ದಾರೆ. ನಿಮ್ಮ ಪ್ರಚಾರದ ಹುಚ್ಚಿಗೆ ಬೇರೆಯವರ ಭಾವನೆ ಜೊತೆ ಆಟ ಆಡಬೇಡಿ ಎನ್ನುತ್ತಿದ್ದಾರೆ.
ಫೆಬ್ರುವರಿ 1 ಗುರುವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿರುವ 9 ರಿಂದ 14 ವರ್ಷ ವಯಸ್ಸಿನ ಬಾಲಕಿಯರಿಗೆ ಕಡಿಮೆ ದರದಲ್ಲಿ ಗರ್ಭ ಕಂಠ ಕ್ಯಾನ್ಸರ್ ನಿರೋಧಕ ಲಸಿಕೆಯನ್ನ ನೀಡೋದಾಗಿ ಘೋಷಿಸಿದ್ದರು ಕೂಡ. ಇದನ್ನೇ ಆಧಾರವಾಗಿಟ್ಟುಕೊಂಡು ಪೂನಂ ಪಾಂಡೆ ಆಡಿದ ನಾಟಕ ಇದು.
A day after announcing her death, Poonam Pandey emerged alive and healthy. According to Pandey, the faked death stunt was an attempt to draw public attention towards cervical cancer. A day after her manager shared a grief note announcing Poonam's death, the controversial actress came out with a video on social media clarifying that she staged her death only to spread awareness about cancer. Her promotional strategy has left everyone in disbelief.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm