ಬ್ರೇಕಿಂಗ್ ನ್ಯೂಸ್
03-02-24 09:57 pm HK News Desk ದೇಶ - ವಿದೇಶ
ಹೊಸದಿಲ್ಲಿ, ಫೆ 03: ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯ್ತಪ್ಪಿನಿಂದ ಆಡಿದ ಮಾತು ಬಿಜೆಪಿಗೆ ಹೊಸ ಆಹಾರವಾಗಿ ಪರಿಣಮಿಸಿದೆ. ಖರ್ಗೆಯವರ ಮಾತಿಗೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಉಘೇ ಉಘೇ.. ಎಂದರೆ, ಪ್ರಧಾನಿ ಮೋದಿ ಬಾಯ್ತುಂಬ ನಕ್ಕಿದ್ದಾರೆ.
"ಅಬ್ಕಿ ಬಾರ್, 400 ಪಾರ್" ಎಂದು ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ ಹೇಳಿದ್ದರು. ಖರ್ಗೆಯವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಕೂಡಾ ತನ್ನ ಅಧಿಕೃತ X ಹ್ಯಾಂಡಲ್ ನಲ್ಲಿ ಈ ವಿಡಿಯೋ ಹಾಕಿ ಕಾಂಗ್ರೆಸ್ ಕಾಲೆಳೆದಿದೆ.
" 330 - 334 ಸೀಟನ್ನು ನೀವು ಈಗಾಗಲೇ ಹೊಂದಿದ್ದೀರಿ, ಈ ಬಾರಿ ಅದು ನಾಲ್ಕು ನೂರರ ಗಡಿ ದಾಟಬಹುದು" ಎಂದು ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರನ್ನು ಉಲ್ಲೇಖಿಸಿ ಹೇಳಿದ್ದರು. ಖರ್ಗೆಯವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತ ಪಡಿಸಿದರೆ, ಇನ್ನು ಮೋದಿ, ನಡ್ಡಾ, ಪಿಯೂಶ್ ಗೋಯಲ್ ಬಾಯ್ತುಂಬ ನಕ್ಕಿದ್ದಾರೆ.
ಬಿಜೆಪಿಯ ಸದಸ್ಯರು ಅವರ ಶಕ್ತಿಯಿಂದ ಆರಿಸಿ ಬರಲಿ ನೋಡೋಣ, ಎಲ್ಲರೂ ಮೋದಿಯ ಹೆಸರಿನಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಖರ್ಗೆ, ಬಿಜೆಪಿ ಸದಸ್ಯರಿಗೆ ಅಲ್ಲೇ ತಿರುಗೇಟು ನೀಡಿದ್ದಾರೆ. ’ನನಗೆ ಹೊಸ ದ್ವೇಷಿಗಳು ಬೇಕಾಗಿದ್ದಾರೆ, ನನ್ನ ಹಳೆಯ ದ್ವೇಷಿಗಳು ನನ್ನ ಅಭಿಮಾನಿಗಳಾಗಿದ್ದಾರೆ’ ಎಂದು ಈ ಖರ್ಗೆಯವರ ವಿಡಿಯೋ ತುಣುಕಿನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.
ಖರ್ಗೆ ತಮ್ಮ ಭಾಷಣವನ್ನು ಮುಂದುವರಿಸುತ್ತಾ, ಒಂದು ಕಡೆ ನಿರುದ್ಯೋಗ ತಾಂಡವಾಡುತ್ತಿದೆ, ಇನ್ನೊಂದೆಡೆ ಲಕ್ಷಾಂತರ ಸರ್ಕಾರೀ ಹುದ್ದೆಗೆಳು ಭರ್ತಿಯಾಗದೇ ಖಾಲಿ ಬಿದ್ದಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಈ ಹುದ್ದೆಗಳನ್ನು ಭರ್ತಿ ಮಾಡಲಿ ಎಂದು ಹೇಳಿದ್ದಾರೆ.
’ಅಬ್ಕಿ ಬಾರ್, 400 ಪಾರ್’ ಎನ್ನುವ ವಿಡಿಯೋದ ಜೊತೆಗೆ ಖರ್ಗೆಯವರ ಇನ್ನೊಂದು ವಿಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ’ಈ ಬಾರಿ ನೀವು ನೂರರ ಗಡಿಯನ್ನೂ ದಾಟುವುದಿಲ್ಲ. ಇಂಡಿಯಾ ಮೈತ್ರಿಕೂಟ ಬಲಾಢ್ಯವಾಗಿದೆ’ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಯ ಸದಸ್ಯರು ಇದಕ್ಕೆ ಲೇವಡಿ ಮಾಡಿದಾಗ ಇಂಡಿಯಾ ಬಲಾಹೀನಾವಾಗಿದೆಯಾ ಎಂದು ಬಿಜೆಪಿ ಸದಸ್ಯರನ್ನು ಖರ್ಗೆ ಪ್ರಶ್ನಿಸಿದ್ದಾರೆ.
ನಾವು ಕನಸನ್ನು ಬಿತ್ತುತ್ತಿಲ್ಲ, ವಾಸ್ತವತೆಯನ್ನು ತೆರೆದಿಡುತ್ತಿದ್ದೇವೆ, ಅದಕ್ಕಾಗಿಯೇ ಜನರು ಮೋದಿಯವರನ್ನು ಮತ್ತೆ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಬಾರಿಯ ಫಲಿತಾಂಶಕ್ಕಿಂತ ಉತ್ತಮ ಸಾಧನೆಯನ್ನು ನಮ್ಮ ಪಕ್ಷ ಮಾಡಲಿದೆ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೆಲವು ದಿನಗಳ ಹಿಂದೆ ಹೇಳಿದ್ದರು.
A video of Congress president Mallikarjun Kharge saying ‘Abki Baar, 400 Paar’, referring to the ruling Bharatiya Janata Party, has gone viral on social media.In a clip shared by BJP's official X handle, Kharge is heard saying,"You have majority, with 330-334 seats. This time, it will be above 400." The clipped portion evoked laughter among those seated in the Treasury bench, including Prime Minister Narendra Modi.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm