Mumbai, Poonam Pandey alive: ಬಾಲಿವುಡ್ ನಟಿ ಪೂನಂ ಪಾಂಡೆ ಸತ್ತಿಲ್ಲ ! ಗರ್ಭನಾಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಾವಿನ ಸುದ್ದಿ ಹಬ್ಬಿಸಿದೆ ಎಂದ ನಟಿ 

03-02-24 01:43 pm       HK News Desk   ದೇಶ - ವಿದೇಶ

ಗರ್ಭನಾಳ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ, ತಾನು ಸತ್ತಿಲ್ಲ, ಶಾಕ್ ಕೊಡುವುದಕ್ಕಷ್ಟೇ ಸಾವಿನ ಸುದ್ದಿ ಹಬ್ಬಿಸಿದ್ದಾಗಿ ತಿಳಿಸಿದ್ದಾರೆ. 

ಮುಂಬೈ, ಫೆ.3: ಗರ್ಭನಾಳ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ, ತಾನು ಸತ್ತಿಲ್ಲ, ಶಾಕ್ ಕೊಡುವುದಕ್ಕಷ್ಟೇ ಸಾವಿನ ಸುದ್ದಿ ಹಬ್ಬಿಸಿದ್ದಾಗಿ ತಿಳಿಸಿದ್ದಾರೆ. 

ನನ್ನ ಸಾವಿನಿಂದ ಬೇಸರದಲ್ಲಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಹಾಗೆ ಮಾಡಿದ್ದು ನಿಮಗೆಲ್ಲರಿಗೂ ಶಾಕ್ ಕೊಡುವುದಕ್ಕೆ ಮಾತ್ರ ಎಂದು ನಟಿ ಪೂನಂ ಪಾಂಡೆ ವಿಡಿಯೋ ಶೇರ್ ಮಾಡಿದ್ದಾರೆ. ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಾವು ಮಾತನಾಡಬೇಕಾಗಿದೆ. ಆದರೆ ಯಾರೂ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಈ ರೋಗಕ್ಕೆ ಅಟೆನ್ಶನ್ ಬೇಕಾಗಿತ್ತು. ಇದಕ್ಕಾಗಿ ಈ ರೀತಿ ಸುದ್ದಿ ಹಬ್ಬಿಸಬೇಕಾಯ್ತು ಎಂದಿದ್ದಾರೆ.

ಈ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಯಿತು ಎನ್ನುವುದರಲ್ಲಿ ನನಗೆ ಖುಷಿ ಇದೆ. ಸರ್ವಿಕಲ್ ಕ್ಯಾನ್ಸರ್​ಗಾಗಿ ನಾನು ನನ್ನ ಸಾವನ್ನು ಫೇಕ್ ಮಾಡಿದೆ ಎಂದಿದ್ದಾರೆ. ಇದು ಸೈಲೆಂಟ್ ಆಗಿ ನಮ್ಮ ಜೀವವನ್ನು ತೆಗೆಯುವ ಒಂದು ರೋಗ. ನನ್ನ ಸಾವಿನ ಸುದ್ದಿ ಮಾಡಿರುವ ಪರಿಣಾಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ನಟಿ ಹೇಳಿದ್ದಾರೆ. ಪೂನಂ ಪಾಂಡೆ ಸಾವಿನ ಸುದ್ದಿ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. 32ನೇ ವಯಸ್ಸಿಗೆ ಸಾವು ಕಂಡ ನಟಿಯೆಂದು ಕ್ಯಾನ್ಸರ್ ರೋಗದ ಬಗ್ಗೆ ಚರ್ಚೆ ಶುರುವಾಗಿತ್ತು.‌

Poonam Pandey, model and reality TV star, today announced that she hasn't died of cervical cancer. Her announcement on Instagram came a day after the model's manager announced that she had died of cervical cancer.