ಬ್ರೇಕಿಂಗ್ ನ್ಯೂಸ್
26-01-24 04:18 pm HK News Desk ದೇಶ - ವಿದೇಶ
ಲಕ್ನೋ, ಜ.26: ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಔರಂಗಜೇಬನ ಕಾಲದಲ್ಲಿ ಬೃಹತ್ ದೇವಸ್ಥಾನವನ್ನು ಒಡೆದು ಕಟ್ಟಲಾಗಿತ್ತು ಎಂಬುದನ್ನು ಪ್ರಾಚ್ಯವಸ್ತು ಇಲಾಖೆಯ ಸರ್ವೆಯಲ್ಲಿ ಪತ್ತೆ ಮಾಡಲಾಗಿದೆ. ವಾರಣಾಸಿ ಕೋರ್ಟಿಗೆ ಎಎಸ್ಐ ವರದಿಯನ್ನು ಸಲ್ಲಿಸಲಾಗಿದ್ದು ವರದಿಯ ಅಂಶಗಳನ್ನು ಹಿಂದು ಪರ ವಕೀಲ ವಿಷ್ಣು ಶರ್ಮಾ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.
ಮಸೀದಿಯ ಒಳಗಡೆ ವೈಜ್ಞಾನಿಕ ಸರ್ವೆ ನಡೆಸಿದ್ದು, ಮಸೀದಿಯಿದ್ದ ಜಾಗದಲ್ಲಿ ಈ ಹಿಂದೆ ದೇವಸ್ಥಾನ ಇತ್ತೆಂದು ಹೇಳಿದೆ. ಅಲ್ಲದೆ, ಮಸೀದಿ ಒಳಗಿನ ಗೋಡೆಯಲ್ಲಿ ಅರೆಬಿಕ್ ಮತ್ತು ಪರ್ಶಿಯನ್ ಭಾಷೆಯಲ್ಲಿ ಬರೆದಿರುವ ಶಾಸನದ ದಾಖಲೆಗಳು ಲಭ್ಯವಾಗಿದ್ದು ಅದರಲ್ಲಿ 1676-77ರ ಔರಂಗಜೇಬನ ಕಾಲದಲ್ಲಿ ದೇವಸ್ಥಾನ ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತೆಂದು ಉಲ್ಲೇಖಿಸಿರುವುದಾಗಿ ಎಎಸ್ಐ ವರದಿ ಹೇಳಿದೆ. ದೇವಸ್ಥಾನದ ಗೋಡೆ, ಕಂಬಗಳನ್ನು ಬಳಸಿ ಮಸೀದಿಯನ್ನು ಕಟ್ಟಲಾಗಿದೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. ಎರಡು ದಿನಗಳ ಹಿಂದೆ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋರ್ಟಿಗೆ ಎಎಸ್ಐ ಸಲ್ಲಿಸಿರುವ ವರದಿಯನ್ನು ಎರಡೂ ಕಡೆಯ ಅರ್ಜಿದಾರರರು ಪಡೆಯಬಹುದು ಎಂದಿದ್ದರು.
ವರದಿಯಲ್ಲಿ ಮಸೀದಿಯ ಪಶ್ಚಿಮ ಭಾಗದಲ್ಲಿರುವ ಗೋಡೆ ಈ ಹಿಂದೆ ಇದ್ದ ದೇವಸ್ಥಾನದ್ದೇ ಆಗಿದೆಯೆಂದು ಹೇಳಿದೆ. ದೇವಸ್ಥಾನಕ್ಕೆ ಬಳಕೆ ಮಾಡಲಾಗಿದ್ದ ಕಂಬಗಳನ್ನೇ ಬಳಸಿಕೊಂಡು ಮಸೀದಿಯನ್ನು ವಿಸ್ತರಣೆ ಮಾಡಲಾಗಿತ್ತು. ಪೂರ್ವ ಭಾಗದಲ್ಲಿ ಮಸೀದಿಯನ್ನು ವಿಸ್ತರಿಸಿ ಪ್ರಾರ್ಥನೆಗೆ ಹೆಚ್ಚು ಸ್ಥಳಾವಕಾಶ ಸಿಗುವಂತೆ ಮಾಡಲಾಗಿತ್ತು. ಒಟ್ಟು 34 ಶಾಸನಗಳು ಮತ್ತು 32 ಮುದ್ರಿತ ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ಆಧರಿಸಿ ಪ್ರಾಚ್ಯವಸ್ತು ಇಲಾಖೆಯವರು ವರದಿ ನೀಡಿದ್ದಾರೆ. ಈ ಪೈಕಿ ಹಿಂದೆ ಇದೇ ಸ್ಥಳದಲ್ಲಿದ್ದ ಹಿಂದು ದೇವಾಲಯದಲ್ಲಿದ್ದ ಶಾಸನಗಳೂ ಇವೆ. ಶಾಸನಗಳಿದ್ದ ಕಲ್ಲುಗಳನ್ನೂ ಮಸೀದಿ ಮರು ನಿರ್ಮಿಸುವಾಗ ಬಳಕೆ ಮಾಡಲಾಗಿತ್ತು. ಈ ಶಾಸನಗಳನ್ನು ದೇವನಾಗರಿ, ಗ್ರಂಥ, ತೆಲುಗು ಮತ್ತು ಕನ್ನಡದಲ್ಲಿ ಬರೆದಿರುವುದನ್ನು ಪತ್ತೆ ಮಾಡಲಾಗಿದೆ ಎಂದು ವರದಿ ಹೇಳಿದೆ.
ಹಿಂದೆ ಇದ್ದ ದೇವಸ್ಥಾನದಲ್ಲಿ ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಮಸೀದಿಯಲ್ಲಿ ಲಭ್ಯವಾದ ಶಾಸನಗಳಲ್ಲಿ ಕಂಡುಬರುತ್ತವೆ. ಸರ್ವೆ ವೇಳೆ ಕಟ್ಟಡದ ರಚನೆಗೆ ಯಾವುದೇ ಹಾನಿ ಉಂಟಾಗಿಲ್ಲ, ಶೋಧಿಸಿದ ಎಲ್ಲಾ ವಸ್ತುಗಳನ್ನು ದಾಖಲಿಸಲಾಗಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯಲ್ಲಿ ಹಿಂದಿನ ರಚನೆಯ ಕಂಬಗಳ ಬಳಕೆಯಾಗಿದೆ. ಸ್ತಂಭಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಜ್ಞಾನವಾಪಿ ಮಸೀದಿಯಲ್ಲಿ ಗೌರಿ ಪೂಜೆಗೆ ಅವಕಾಶ ನೀಡಬೇಕೆಂದು ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿತ್ತು. ಅದರಂತೆ, ಪ್ರಾಚ್ಯವಸ್ತು ಇಲಾಖೆಯಿಂದ ಸರ್ವೆಗೆ ಕೋರ್ಟ್ ಆದೇಶ ಮಾಡಿತ್ತು. ಸರ್ವೆ ಸಂದರ್ಭದಲ್ಲಿ ಮಸೀದಿಯಲ್ಲಿ ಬಳಸುತ್ತಿದ್ದ ನೀರಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವದಂತಿ ಹರಡಿತ್ತು. ಮಸೀದಿ ಕಡೆಯವರು ಅದನ್ನು ಬರೀ ಕಲ್ಲು ಎಂದು ವಾದಿಸಿದ್ದರು. ಮಸೀದಿ ಗೋಡೆಗಳಿಗೆ ಯಾವುದೇ ಹಾನಿಯಾಗದಂತೆ ನಡೆಸಿದ ವೈಜ್ಞಾನಿಕ ಸರ್ವೆಯ ವರದಿಯನ್ನು ಇತ್ತೀಚೆಗೆ ಕೋರ್ಟಿಗೆ ಸಲ್ಲಿಸಲಾಗಿತ್ತು.
The Archaeological Survey of India (ASI) survey report of the Gyanvapi Mosque in Varanasi, which was made public on January 25, has kicked off a fresh wave of controversy. The report has printed photos of fragments of what appear to be statues of Hindu deities and other iconography within the mosque complex, India Today reported on Friday.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm