ಲಿವರ್ ಕ್ಯಾನ್ಸರ್ ; ಸಂಗೀತ ಮಾಂತ್ರಿಕ ಇಳಯರಾಜ ಪುತ್ರಿ ಭವತಾರಿಣಿ ಶ್ರೀಲಂಕಾದಲ್ಲಿ ನಿಧನ, ಸಂತಾಪ ಸೂಚಿಸಿದ ಗಣ್ಯರು

26-01-24 11:51 am       HK News Desk   ದೇಶ - ವಿದೇಶ

ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಇಳಯರಾಜ ಅವರ ಪುತ್ರಿ ಹಿನ್ನೆಲೆ ಗಾಯಕಿ ಭವತಾರಿಣಿ ಗುರುವಾರ ನಿಧನರಾಗಿದ್ದಾರೆ.

ಚೆನೈ, ಜ 26: ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಇಳಯರಾಜ ಅವರ ಪುತ್ರಿ ಹಿನ್ನೆಲೆ ಗಾಯಕಿ ಭವತಾರಿಣಿ ಗುರುವಾರ ನಿಧನರಾಗಿದ್ದಾರೆ.

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭವತಾರಿಣಿ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಹೋಗಿದ್ದರು. ಜನವರಿ 25 ರಂದು ಸಂಜೆ 5 ಗಂಟೆಗೆ ಶ್ರೀಲಂಕಾದಲ್ಲಿ ಅವರು ಕೊನೆಯುಸಿರೆಳೆದರು. ಇಂದು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುವುದು. ಅಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.

ಭವತಾರಿಣಿ ತನ್ನ ಗಂಡನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಆಕೆಗೆ 47 ವರ್ಷ ವಯಸ್ಸಾಗಿತ್ತು. ಭಾವತಾರಿಣಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ದುಃಖಿತರಾಗಿದ್ದಾರೆ.

ಭವತಾರಿಣಿ ಸಂಗೀತ ಲೋಕದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅವರು ಇಳಯರಾಜ ಅವರ ಮಗಳು ಮತ್ತು ಕಾರ್ತಿಕ್ ರಾಜ-ಯುವನ್ ಶಂಕರ್ ರಾಜರ ಸಹೋದರಿ. ಭವತಾರಿಣಿ ಅವರು ಭಾರತಿ ಚಿತ್ರದ ಮಾಯಿಲ್ ಪೋಲ ಪೊನ್ನು ಒಣ್ಣು ಎಂಬ ತಮಿಳು ಗೀತೆಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಿನ್ನೆಲೆ ಗಾಯಕಿಯಾಗುವುದರ ಜೊತೆಗೆ ಸಂಗೀತ ಸಂಯೋಜಕಿಯೂ ಆಗಿದ್ದರು. ಕಳೆದ 6 ತಿಂಗಳಿಂದ ಲಿವರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರನ್ನು ಉತ್ತಮ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಭವತಾರಿಣಿ ಅವರ ಕೊನೆಯ ಮ್ಯೂಸಿಕ್ ಆಲ್ಬಂ ಮಲಯಾಳಂ ಚಿತ್ರ 'ಮಾಯಾನದಿ' ಆಗಿತ್ತು. ಅವರು ತಮಿಳು ಚಲನಚಿತ್ರಗಳಾದ 'ಕಾದಲುಕ್ಕು ಮರಿಯದೈ', 'ಭಾರತಿ', 'ಅಳಗಿ', 'ಫ್ರೆಂಡ್ಸ್', 'ಪಾ', 'ಮಂಕಥಾ' ಮತ್ತು 'ಅನೇಗನ್' ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

ಇಳಯರಾಜ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯುವನ್ ಶಂಕರ್ ಸಂಗೀತ ನಿರ್ದೇಶಕರಾಗಿದ್ದರೆ ಭವತಾರಿಣಿ ಗಾಯಕಿ. ಮಾಯಿಲ್ ಪೋಲ ಪೊನ್ನು ಒನ್ನು ಚಿತ್ರಕ್ಕಾಗಿ ಇವರಿಗೆ ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿತ್ತು.

National Award-winning playback singer and daughter of legendary music director Ilaiyaraaja, Bhavatharini breathed her last on Thursday at the age of 47. According to reports, she succumbed to liver cancer during her treatment in Sri Lanka.