ದಟ್ಟ ಮಂಜಿನಿಂದಾಗಿ ಭೀಕರ ಅಪಘಾತ ; 12 ಮಂದಿ ದುರ್ಮರಣ, ಗಂಗಾಸ್ನಾನಕ್ಕೆ ಹೊರಟವರ ದುರಂತ ಅಂತ್ಯ

25-01-24 09:06 pm       HK News Desk   ದೇಶ - ವಿದೇಶ

ದಟ್ಟ ಮಂಜಿನಿಂದಾಗಿ ಶಹಜಹಾನ್​ಪುರದಲ್ಲಿ ಕಂಟೈನರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ 12 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ, ಜ 25: ದಟ್ಟ ಮಂಜಿನಿಂದಾಗಿ ಶಹಜಹಾನ್​ಪುರದಲ್ಲಿ ಕಂಟೈನರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ 12 ಮಂದಿ ಸಾವನ್ನಪ್ಪಿದ್ದಾರೆ.

ಮಂಜಿನಿಂದಾಗಿ ರಸ್ತೆ ಕಾಣದೇ ಕಂಟೈನರ್‌ ಬಲಭಾಗಕ್ಕೆ ಚಲಿಸತೊಡಗಿದೆ. ಈ ವೇಳೆ ಎದುರಿನಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮಹಿಳೆಯರು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ.

ಆಟೋ ರಿಕ್ಷಾದಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಪ್ರಯಾಣ ಮಾಡುತ್ತಿದ್ದರು. ಅವರು ಹುಣ್ಣೆಮೆಯ ಪ್ರಯುಕ್ತ ಗಂಗಾಸ್ನಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ಕಂಟೈನರ್ ರೂಪದಲ್ಲಿ ಬಂದ ಜವರಾಯ 12 ಮಂದಿಯನ್ನು ಬಲಿ ಪಡೆದಿದ್ದಾನೆ.

Twelve people, including three women, died on Thursday morning when their autorickshaw collided head-on with a container truck plying on the wrong side of the road amid reduced visibility due to fog, police said.