Russia accused Ukraine, Russian military plane: ಉಕ್ರೇನ್ ಗಡಿ ಪ್ರದೇಶದಲ್ಲಿ ಸೇನಾ ವಿಮಾನ ಪತನ ; ಯುದ್ಧದಲ್ಲಿ ಸೆರೆಯಾದ ಉಕ್ರೇನ್‌ನ 65 ಸೈನಿಕರು ಸೇರಿ 74 ಜನರ ಸಾವು

24-01-24 09:30 pm       HK News Desk   ದೇಶ - ವಿದೇಶ

ಉಕ್ರೇನ್‌ನ 65 ಯುದ್ಧ ಕೈದಿಗಳು ಸೇರಿದಂತೆ 74 ಜನರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನವು ಉಕ್ರೇನ್ ಬಳಿಯ ಗಡಿ ಪ್ರದೇಶದ ಪ್ರಾಂತ್ಯದಲ್ಲಿ ಬುಧವಾರ ಪತನಗೊಂಡಿದೆ.

ಮಾಸ್ಕೊ, ಜ.24: ಉಕ್ರೇನ್‌ನ 65 ಯುದ್ಧ ಕೈದಿಗಳು ಸೇರಿದಂತೆ 74 ಜನರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನವು ಉಕ್ರೇನ್ ಬಳಿಯ ಗಡಿ ಪ್ರದೇಶದ ಪ್ರಾಂತ್ಯದಲ್ಲಿ ಬುಧವಾರ ಪತನಗೊಂಡಿದೆ. ಈ ಬಗೆಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಆ ವಿಡಿಯೋದಲ್ಲಿ ಬೆಲ್ಗೊರೊಡ್​​ ಪ್ರಾಂತ್ಯದಲ್ಲಿ ವಿಮಾನವೊಂದು ಪತನಗೊಂಡು ಆಕಾಶದಿಂದ ಬೀಳುವಂತೆ ಕಂಡುಬರುತ್ತಿದೆ. ಬೆಂಕಿಯ ಬೃಹತ್ ಚೆಂಡು ಸ್ಫೋಟಗೊಂಡಿದ್ದು, ಅದು ನೆಲಕ್ಕೆ ಅಪ್ಪಳಿಸಿದೆ. ಈಗಾಗಲೇ ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ಗಳು ಮತ್ತು ಪೊಲೀಸರು ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.

ಯುದ್ಧದಲ್ಲಿ ಸೆರೆಯಾದ ಉಕ್ರೇನ್‌ನ 65 ಸೈನಿಕರು ಈ ವಿಮಾನದಲ್ಲಿದ್ದರು. ಇವರೊಂದಿಗೆ 6 ವಿಮಾನ ಸಿಬ್ಬಂದಿ ಮತ್ತು 3 ರಕ್ಷಣಾ ಸಿಬ್ಬಂದಿ ಇದ್ದರು. ಕೈದಿಗಳ ಹಸ್ತಾಂತರ ಪ್ರಕ್ರಿಯೆಗಾಗಿ ಇವರನ್ನು ಬೆಲ್ಗೊರೊಡ್​ ಪ್ರಾಂತ್ಯದಲ್ಲಿನ ಉಭಯ ರಾಷ್ಟ್ರಗಳ ಗಡಿ ಪ್ರದೇಶಕ್ಕೆ ಕರೆತರಲಾಗುತ್ತಿತ್ತು ಎಂದು ಸೇನೆ ಮಾಹಿತಿ ನೀಡಿದೆ.

ಬೆಲ್ಗೊರೊಡ್ ಪ್ರದೇಶದಲ್ಲಿ ವಿಮಾನದ ಪತನಕ್ಕೆ ನಿರ್ದಿಷ್ಟ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ವಿಮಾನದಲ್ಲಿ ಯಾರಿದ್ದರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೇ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಂತೆ ಉಕ್ರೇನಿಯನ್ ಅಧಿಕಾರಿಗಳು ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ, ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿತ್ತು. ಅದನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ಸೇನಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Russia says plane carrying Ukrainian POWs crashed, all aboard dead

Russia accuses Kyiv of downing a military transport plane, killing all 74  aboard, including POWs | WJTV

Russia accuses Ukraine of shooting down a military transport plane, killing  65 Ukrainian POWs aboard, latest news, russia ukraine war, russia ukraine  conflict

ಉಕ್ರೇನಿಯನ್ ಸಮಾಜವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಶತ್ರುಗಳು ಉಕ್ರೇನ್ ವಿರುದ್ಧ ವಿಶೇಷ ಕಾರ್ಯಾಚರಣೆಗಳನ್ನು ಸಕ್ರಿಯವಾಗಿ ನಡೆಸುತ್ತಿದ್ದಾರೆ'' ಎಂದು ಎಂದು ಗ್ಲಾಡ್ಕೋವ್ ತನ್ನ ಟೆಲಿಗ್ರಾಮ್ ಚಾನೆಲ್​ನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿಗಾರರೊಂದಿಗೆ ಬೆಳಗ್ಗೆ ಕರೆಯೊಂದರಲ್ಲಿ ಮಾತನಾಡಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ಅಪಘಾತದ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿಲ್ಲದ ಕಾರಣ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿದ್ದರು. ರಕ್ಷಣಾ ಪಡೆಗಳು, ಸರಕು, ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ರಷ್ಯಾದ ಮಿಲಿಟರಿ ರಫ್ತು ಏಜೆನ್ಸಿ ಪ್ರಕಾರ, ಇದು 225 ಸೈನಿಕರನ್ನು ಒಯ್ಯಬಲ್ಲದು ಎಂಬುದು ತಿಳಿದುಬಂದಿದೆ.

Russia accused Ukraine of downing a Russian military plane in the Belgorod region near the Ukrainian border Wednesday, saying all 74 people on board were killed including dozens of Ukrainian servicemen being transported for a prisoner swap.