Ram Mandir Ayodhya Security; ಅಯೋಧ್ಯೆ ಅಭೇದ್ಯ ಕೋಟೆ ; ಐದು ಸುತ್ತಿನ ಭದ್ರತೆಯ ಚಕ್ರವ್ಯೂಹ !‌ ರಾಮ ಮಂದಿರಕ್ಕೆ ಗಣ್ಯಾತಿಗಣ್ಯರ ಆಗಮನ ಹಿನ್ನೆಲೆಯಲ್ಲಿ ವಿಶೇಷ ನಿಗಾ

22-01-24 11:13 pm       HK News Desk   ದೇಶ - ವಿದೇಶ

ರಾಮಲಲ್ಲಾನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯಾ ಪುರಿಯನ್ನು ಯಾರಿಗೂ ಭೇದಿಸಲಾಗದ ಕೋಟೆಯಂತೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ- ವಿದೇಶದ ಗಣ್ಯರು ಭಾಗವಹಿಸುವುದರಿಂದ ಒಂದು ದಿನದ ಮಟ್ಟಿಗೆ ಭದ್ರತೆಯನ್ನು ಐದು ಸುತ್ತಿನ ಕೋಟೆಯಂತೆ ವಿಭಜಿಸಿ ವಿಶೇಷ ರೀತಿಯಲ್ಲಿ ಮಾಡಲಾಗಿತ್ತು.

ಅಯೋಧ್ಯೆ, ಜ.22: ರಾಮಲಲ್ಲಾನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯಾ ಪುರಿಯನ್ನು ಯಾರಿಗೂ ಭೇದಿಸಲಾಗದ ಕೋಟೆಯಂತೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ- ವಿದೇಶದ ಗಣ್ಯರು ಭಾಗವಹಿಸುವುದರಿಂದ ಒಂದು ದಿನದ ಮಟ್ಟಿಗೆ ಭದ್ರತೆಯನ್ನು ಐದು ಸುತ್ತಿನ ಕೋಟೆಯಂತೆ ವಿಭಜಿಸಿ ವಿಶೇಷ ರೀತಿಯಲ್ಲಿ ಮಾಡಲಾಗಿತ್ತು. ಪ್ರಧಾನಿ ಕಾರ್ಯಾಲಯದ ಸೂಚನೆಯಂತೆ ವಿಶಿಷ್ಟ ರೀತಿಯಲ್ಲಿ ಭದ್ರತೆ ಏರ್ಪಡಿಸಲಾಗಿತ್ತು.

ಮೊದಲ ಸುತ್ತಿನಲ್ಲಿ ಎಸ್ ಪಿಜಿ ಕಮಾಂಡೋಗಳ ಭದ್ರತೆ ಇತ್ತು. ರೈಫಲ್, ಆಟೊಮೆಟಿಕ್ ಗನ್, 17 ಎಂಎಂ ರಿವಾಲ್ವರ್ ಮತ್ತಿತರ ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿದ್ದ ಕಮಾಂಡೋ ಪಡೆ ಅದಾಗಿತ್ತು. ಎರಡನೇ ಸುತ್ತಿನಲ್ಲಿ ಎಸ್ ಪಿಸಿ ಕಮಾಂಡೋಗಳ ಭದ್ರತೆ ಇತ್ತು. ಮೂರನೇ ಸುತ್ತಿನಲ್ಲಿ ಎನ್ಎಸ್ ಜಿ ಪಡೆಯ ಬ್ಲಾಕ್ ಕ್ಯಾಟ್ ಕಮಾಂಡೋಗಳು ಸುತ್ತುವರಿದಿದ್ದರು. ನಾಲ್ಕನೇ ಸುತ್ತಿನಲ್ಲಿ ಪ್ಯಾರಾ ಮಿಲಿಟರಿಯ ಪಡೆಗಳು ರಾಮ ಮಂದಿರವನ್ನು ಸುತ್ತುವರಿದ್ದವು.

ಐದನೇ ಮತ್ತು ಕೊನೆಯ ಸುತ್ತಿನಲ್ಲಿ ಉತ್ತರ ಪ್ರದೇಶದ ರಾಜ್ಯ ಪೊಲೀಸರ ಭದ್ರತೆ ಇತ್ತು. ಹೊರಗಡೆ ಏನೇ ಘಟನೆಗಳಾದರೂ ಅದನ್ನು ಅಲ್ಲಿಯೇ ಹತ್ತಿಕ್ಕುವ ಜವಾಬ್ದಾರಿ ಅವರದಾಗಿತ್ತು. ಹಿಂಸೆ ರೀತಿಯ ಘಟನೆಗಳು ಹರಡುವ ಮೊದಲೇ ನಂದಿಸುವ ಹೊಣೆ ಕೊಡಲಾಗಿತ್ತು. ಈ ಐದು ಸುತ್ತಿನ ಕೋಟೆಯ ಭದ್ರತೆ ನಡುವೆಯೂ ಭದ್ರತಾ ವಿರೋಧಿ ದಳ (ಎಟಿಎಸ್) 550 ಕಮಾಂಡೋಗಳು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪಿನ 35 ಮಂದಿ ಅಯೋಧ್ಯಾ ನಗರಿಯ ಅಲ್ಲಲ್ಲಿ ತಮ್ಮಷ್ಟಕ್ಕೆ ಭದ್ರತೆ ಉಸ್ತುವಾರಿ ನೋಡಿಕೊಂಡಿದ್ದರು.

ಅಯೋಧ್ಯೆ ನಗರಿಯನ್ನು ಭದ್ರತೆ ನೆಲೆಯಲ್ಲಿ ರೆಡ್ ಮತ್ತು ಯೆಲ್ಲೋ ಎಂದು ಎರಡಾಗಿ ವಿಭಜಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ 100 ಡಿಎಸ್ಪಿ, 325 ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗಳು ಮತ್ತು 800 ಎಸ್ಐಗಳನ್ನು ಅಯೋಧ್ಯಾ ಜಿಲ್ಲೆಯ ಹಲವು ಕಡೆಗಳಲ್ಲಿ ನಿಯೋಜನೆ ಮಾಡಲಾಗಿತ್ತು. ಇದಲ್ಲದೆ, 11 ಸಾವಿರ ಪ್ಯಾರಾ ಮಿಲಿಟರಿ ಮತ್ತು ಪೊಲೀಸರನ್ನು ಭದ್ರತೆ ನೋಡಿಕೊಂಡಿದ್ದರು. ವಿಐಪಿಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂವರು ಡಿಐಜಿ ದರ್ಜೆಯ ಅಧಿಕಾರಿಗಳು, 40 ಎಎಸ್ಪಿ, 82 ಡಿಎಸ್ಪಿ ಮತ್ತು 90 ಇನ್ಸ್ ಪೆಕ್ಟರ್ ಗಳು ಮತ್ತು ಅವರ ಜೊತೆಗೆ ಒಂದು ಸಾವಿರ ಪೊಲೀಸರನ್ನು ಕೊಡಲಾಗಿತ್ತು. ಇವರಲ್ಲದೆ, 250 ಪೊಲೀಸರು ಟೂರಿಸ್ಟ್ ಗಳಿಗೆ ಗೈಡ್ ಮಾಡುವುದಕ್ಕಾಗಿಯೇ ಇದ್ದರು. ಉತ್ತರ ಪ್ರದೇಶ ಸರಕಾರ ಟ್ರಾಫಿಕ್ ನೋಡಿಕೊಳ್ಳಲು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮಾಡಿತ್ತು. ಎಐ ಟೆಕ್ನಾಲಜಿ ಆಧರಿತ ಏಂಟಿ ಡ್ರೋನ್ ಸಿಸ್ಟಮ್ ಕೂಡ ಏಕ್ಟಿವ್ ಆಗಿತ್ತು. ಅಯೋಧ್ಯೆ ಒಂದು ದಿನದ ಮಟ್ಟಿಗೆ ಅಭೇದ್ಯ ಕೋಟೆಯಾಗಿತ್ತು.

The northern Indian city of Ayodhya in Uttar Pradesh has become a fortress as the Ram Mandir consecration ceremony gets underway on Monday (Jan 22). Prime Minister Narendra Modi arrived in the holy city with a five-tier security cordon, specially designed to protect him from any untoward incident.