ಸಾವಿರ ವರ್ಷ ಕಳೆದರೂ ಮರೆಯಲಾಗದ ದಿನ, ರಾಮನೇ ಭಾರತದ ಆತ್ಮ, ರಾಮನೇ ಈ ದೇಶದ ಅಡಿಗಲ್ಲು, ರಾಮನೇ ಕಾನೂನು, ನಮಗೆಲ್ಲ ಇಂದೇ ದೀಪಾವಳಿ ; ಪ್ರಧಾನಿ ಮೋದಿ

22-01-24 04:31 pm       HK News Desk   ದೇಶ - ವಿದೇಶ

ರಾಮನ ಮಂದಿರದೊಂದಿಗೆ ಭಾರತೀಯರು ಶತಮಾನಗಳ ಹೋರಾಟ, ಸುದೀರ್ಘ ಕಾಲದ ನಿರೀಕ್ಷೆಗಳನ್ನು ಗೆದ್ದಿದ್ದಾರೆ. ದೇಶದ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ಇದೊಂದು ಅವಿಸ್ಮರಣೀಯ ಕ್ಷಣ.

ಅಯೋಧ್ಯೆ, ಜ.22: ರಾಮನ ಮಂದಿರದೊಂದಿಗೆ ಭಾರತೀಯರು ಶತಮಾನಗಳ ಹೋರಾಟ, ಸುದೀರ್ಘ ಕಾಲದ ನಿರೀಕ್ಷೆಗಳನ್ನು ಗೆದ್ದಿದ್ದಾರೆ. ದೇಶದ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ಇದೊಂದು ಅವಿಸ್ಮರಣೀಯ ಕ್ಷಣ. ಸಾವಿರ ವರ್ಷಗಳು ಕಳೆದರೂ ಮುಂದಿನ ಜನಾಂಗ ಈ ದಿನವನ್ನು ನೆನಪಿಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮೋದಿ ಮಾತನಾಡಿದರು. ನಾನು ಇವತ್ತು ಶ್ರೀರಾಮನಲ್ಲಿ ಕ್ಷಮೆಯನ್ನೂ ಕೇಳುತ್ತೇನೆ. ಶತಮಾನಗಳಿಂದ ಹೋರಾಟ, ಸಾವಿರಾರು ಮಂದಿ ಬಲಿದಾನಗೈದರೂ ಮಂದಿರ ಕಟ್ಟುವುದಕ್ಕೆ ನಮ್ಮಿಂದ ಆಗಿರಲಿಲ್ಲ. ನಮ್ಮ ಶ್ರಮದಲ್ಲಿ ದೊಡ್ಡ ಕೊರತೆ ಆಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವತ್ತು ಸುದೀರ್ಘ ಕಾಲದ ನಿರೀಕ್ಷೆಯನ್ನು ಈಡೇರಿಸಿದ್ದೇವೆ. ನಮ್ಮ ತಪ್ಪನ್ನು ಭಗವಾನ್ ರಾಮಚಂದ್ರ ಮನ್ನಿಸುತ್ತಾನೆಂಬ ನಂಬಿಕೆ ನನಗಿದೆ ಎಂದು ಮೋದಿ ಹೇಳಿದರು.

Ram Temple consecration in Ayodhya: From schools- colleges, banks to govt  offices, what all will remain shut on Monday? | Mint

ರಾಮನೇ ಈ ದೇಶದ ಆತ್ಮ. ರಾಮನೇ ಈ ದೇಶದ ನಂಬಿಕೆ. ರಾಮನೇ ಈ ದೇಶದ ಅಡಿಗಲ್ಲು. ರಾಮನೇ ಈ ದೇಶದ ಕಾನೂನು. ರಾಮನೇ ಈ ದೇಶದ ಪ್ರತಿಷ್ಠೆ. ರಾಮನೇ ಈ ದೇಶದ ಆದರ್ಶ, ರಾಮನೇ ಭಾರತದ ಅಸ್ಮಿತೆಯಾಗಿದ್ದಾನೆ. ರಾಮನೇ ಈ ದೇಶದ ನಾಯಕ ಮತ್ತು ರಾಮನೇ ದೇಶದ ಕಾನೂನಿನ ಜನಕ. ರಾಮನೇ ನಮ್ಮೆಲ್ಲರ ಆತ್ಮ. ರಾಮನನ್ನು ಗೌರವಿಸುವುದರಿಂದ ಈ ದೇಶಕ್ಕೆ ಪುಣ್ಯ ಸಿಗಲಿದೆ. ಅದು ಕೆಲವು ವರ್ಷ ಅಥವಾ ಶತಮಾನಕ್ಕೆ ಸೀಮಿತವಾಗಲ್ಲ. ಸಾವಿರಾರು ವರ್ಷಗಳ ಕಾಲಕ್ಕೂ ಪ್ರೇರಣೆಯಾಗಲಿದೆ. ಈ ದಿನವನ್ನೂ ಇಡೀ ದೇಶದಲ್ಲಿ ದೀಪಾವಳಿ ಸಂಭ್ರಮದ ರೀತಿ ಸಂಭ್ರಮಿಸಬೇಕು. ಪ್ರತಿ ಮನೆಯಲ್ಲೂ ರಾಮನ ಜ್ಯೋತಿ ಬೆಳಗಬೇಕು ಎಂದು ಮೋದಿ ಕರೆ ನೀಡಿದರು.

ರಾಮನ ಟೆಂಟ್ ವಾಸ ಮುಗಿಯಿತು. ರಾಮನ ಜನ್ಮಭೂಮಿಯಲ್ಲೇ ಭವ್ಯ ಮಂದಿರವನ್ನು ಕಟ್ಟಿದ್ದು, ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ರಾಮ ವಿವಾದ ತರುವವನಲ್ಲ. ಸಮಸ್ಯೆಗಳನ್ನು ಬಗೆಹರಿಸುವ ಸ್ಥಾನದಲ್ಲಿದ್ದಾನೆ. ಇಂದಿನ ದಿನ ಈ ದೇಶ ಮತ್ತು ಜಗತ್ತಿನ ಮೂಲೆ ಮೂಲೆಯಲ್ಲಿರುವ ರಾಮ ಭಕ್ತರಿಗೆಲ್ಲ ಅವಿಸ್ಮರಣೀಯ ಕ್ಷಣ. ರಾಮನ ಭಕ್ತರೆಲ್ಲ ರೋಮಾಂಚನಗೊಂಡಿದ್ದಾರೆ. ಇದೊಂದು ಪವಿತ್ರ ದಿನವಾಗಿದ್ದು ಎಲ್ಲರೂ ನೆನಪಿಡಲೇಬೇಕಾದ ಐತಿಹಾಸಿಕ ದಿನ ಎಂದು ಹೇಳಿದ ಮೋದಿ, ರಾಮ ಮಂದಿರ- ಬಾಬ್ರಿ ಮಸೀದಿ ನಡುವಿನ ವ್ಯಾಜ್ಯವನ್ನು ಬಗೆಹರಿಸಿದ ನ್ಯಾಯಾಂಗಕ್ಕೆ ಅಭಿನಂದನೆ ಹೇಳಿದರು.

Prime Minister Narendra Modi Monday said the consecration of the idol of Ram Lalla at the magnificent Ram temple here marks the advent of a new era and called upon people to build the foundation of a strong, grand and divine India of the next 1,000 years. Addressing a gathering after the consecration ceremony, Modi said this occasion is not of mere triumph but of humility.