Jaipur, Leopard enters hotel: ಲಾಡ್ಜ್ ರೂಮ್ ನಲ್ಲಿ ಅಡಗಿ ಕುಳಿತ ಚಿರತೆ ; ಓಡಿಹೋದ ಅತಿಥಿಗಳು,  ಪಾರಾದ ಸಿಬ್ಬಂದಿಗಳು

20-01-24 02:22 pm       HK News Desk   ದೇಶ - ವಿದೇಶ

ಇಲ್ಲಿಯ ಕನೋಟಾ ಎಂಬಲ್ಲಿ ಅರಣ್ಯದಿಂದ ಬಂದ ಚಿರತೆಯೊಂದು ಖಾಸಗಿ ಹೋಟೆಲ್​ಗೆ ನುಗ್ಗಿರುವ ಘಟನೆ ನಡೆದಿದೆ.

ರಾಜಸ್ಥಾನ, ಜ 20: ಇಲ್ಲಿಯ ಕನೋಟಾ ಎಂಬಲ್ಲಿ ಅರಣ್ಯದಿಂದ ಬಂದ ಚಿರತೆಯೊಂದು ಖಾಸಗಿ ಹೋಟೆಲ್​ಗೆ ನುಗ್ಗಿರುವ ಘಟನೆ ನಡೆದಿದೆ.

ಹೋಟೆಲ್ ಒಳಗೆ ಪ್ರವೇಶಿಸಿದ ಚಿರತೆ ಕೊಠಡಿಯೊಂದರಲ್ಲಿ ಅಡಗಿ ಕುಳಿತಿದೆ. ಇದನ್ನು ಕಂಡು ಸಿಬ್ಬಂದಿ ಕೂಡಲೇ ಕೊಠಡಿ ಬಾಗಿಲನ್ನು ಮುಚ್ಚಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಅಲ್ಲಿ ತಂಗಿದ್ದ ಅತಿಥಿಗಳನ್ನು ಬೇರೊಂದು ಹೋಟೆಲ್​ಗೆ ಸ್ಥಳಾಂತರಿಸಿದ್ದಾರೆ. ಇನ್ನೂ ಕೆಲವರು ಶಾಕ್ ಆಗಿ ಹೋಟೆಲ್​ ಬಿಟ್ಟು ಓಡಿದ್ದಾರೆ.

ನಂತರ ಅಲ್ಲಿಯ ಸಿಬ್ಬಂದಿ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಚಿರತೆಗೆ ಅರವಳಿಕೆ ನೀಡಿದ್ದಾರೆ. ಬಳಿಕ ಜೈಪುರದ ಮೃಗಾಲಯಕ್ಕೆ ಕೊಂಡೊಯ್ದಿದ್ದಾರೆ. 2 ಗಂಟೆಗಳ ಕಾಲ
ಹೋಟೆಲ್ ಕೊಠಡಿಯಲ್ಲೇ ಚಿರತೆಯನ್ನು ಬಂಧಿಸಲಾಗಿತ್ತು.

ಅದೃಷ್ಟವಶಾತ್​ ಕೊಠಡಿಯಲ್ಲಿ ವಾಸ ಮಾಡುತ್ತಿದ್ದ ಸಿಬ್ಬಂದಿ ತಮ್ಮ ಮಗನಿಗೆ ಶಾಲೆಗೆ ಬಿಡಲು ತೆರಳಿದ್ದರು. ಹಾಗಾಗಿ ಯಾವುದೇ ದುರ್ಘಟನೆ ನಡೆದಿಲ್ಲ.

11.40ರ ಸುಮಾರಿಗೆ ಚಿರತೆಯನ್ನು ರಕ್ಷಣೆ ಮಾಡಿ ಕೊಂಡೊಯ್ಯಲಾಗಿದೆ. ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

A leopard was rescued by forest officials from the heritage hotel Castle Kanota on Thursday after it strayed into one of the staff rooms. A user took to X to post a video of the leopard trapped inside the room, pouncing on the floor and growling at people.