Pakistan Iran attacks, New Delhi: ಇರಾನ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಿಂದ ವೈಮಾನಿಕ ದಾಳಿ ; ಏಳು ಮಂದಿ ಸಾವು 

18-01-24 02:18 pm       HK News Desk   ದೇಶ - ವಿದೇಶ

ಇರಾನ್ ಕ್ಷಿಪಣಿ ಹಾಗೂ ಡ್ರೋಣ್ ದಾಳಿ ನಡೆಸಿದ ಮರುದಿನವೇ ಪಾಕಿಸ್ತಾನದ ಕಡೆಯಿಂದಲೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಪ್ರತೀಕಾರದ ದಾಳಿ ನಡೆದಿರುವುದರಿಂದ ಇರಾನ್- ಪಾಕ್ ಮಧ್ಯೆ ಪ್ರಾದೇಶಿಕ ಬಿಕ್ಕಟ್ಟು ತಲೆದೋರಲಿದೆ. 

ನವದೆಹಲಿ, ಜ.18: ಇರಾನ್ ಕ್ಷಿಪಣಿ ಹಾಗೂ ಡ್ರೋಣ್ ದಾಳಿ ನಡೆಸಿದ ಮರುದಿನವೇ ಪಾಕಿಸ್ತಾನದ ಕಡೆಯಿಂದಲೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಪ್ರತೀಕಾರದ ದಾಳಿ ನಡೆದಿರುವುದರಿಂದ ಇರಾನ್- ಪಾಕ್ ಮಧ್ಯೆ ಪ್ರಾದೇಶಿಕ ಬಿಕ್ಕಟ್ಟು ತಲೆದೋರಲಿದೆ. 

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಜೈಶ್ ಉಲ್ ಅದಲ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಇರಾನ್‌ಗೆ ಪಾಕಿಸ್ತಾನ ಗಂಭೀರ ಪರಿಣಾಮದ ಎಚ್ಚರಿಕೆ ನೀಡಿತ್ತು. ಇರಾನ್ ನೆಲದಲ್ಲಿರುವ ಎರಡು ಬಲೂಚಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಗಳಾದ ಬಲೂಚಿಸ್ತಾನ ಲಿಪರೇಷನ್ ಫ್ರಂಟ್ ಮತ್ತು ಬಲೂಚಿಸ್ತಾನ ಲಿಬರೇಷನ್ ಆರ್ಮಿಯ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. 

Pakistan Attacks Iran: Iran-Pakistan Missile Strikes Live Updates: Pak  Retaliates After Iran Attack, 7 Killed

Iranian strike leaves Pakistan with no easy options for response - The  Economic Times

ಇರಾನ್‌ ಭೂಭಾಗದ ಸರಾವನ್ ನಗರದಲ್ಲಿ ಸರಣಿ ದಾಳಿಯಿಂದ ಸ್ಫೋಟಗಳು ಉಂಟಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. 

ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಇರಾನ್ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ನಮ್ಮ ದೇಶದ ಭದ್ರತೆ ವಿರುದ್ಧ ಆಕ್ರಮಣಕ್ಕೆ ಉತ್ತರವಾಗಿ ಇರಾನ್ ತೆಗೆದುಕೊಂಡ ಮತ್ತೊಂದು ನಿರ್ಣಾಯಕ ಹೆಜ್ಜೆ ಇದು ಎಂದು ಇರಾನ್ ಹೇಳಿಕೊಂಡಿತ್ತು.

 Pakistan on Thursday carried out strikes against "terrorist hideouts" in Iran, a day after warning Tehran of "serious consequences" over its attack on the Balochi group Jaish al-Adl's headquarters in its territory.