Nayanthara, Annapoorani Controversy: ರಾಮನ ಬಗ್ಗೆ ಅವಹೇಳನ, ಲವ್ ಜಿಹಾದ್ ಕೃತ್ಯಕ್ಕೆ ಉತ್ತೇಜನ ; 'ಅನ್ನಪೂರ್ಣಿ' ಚಿತ್ರದ ಬಗ್ಗೆ ತೀವ್ರ ಆಕ್ಷೇಪ, ವಿವಾದ ಕೇಳಿಬರುತ್ತಲೇ ನೆಟ್ ಫ್ಲಿಕ್ಸ್ ನಿಂದ ಚಿತ್ರ ತೆರವು 

11-01-24 09:03 pm       HK News Desk   ದೇಶ - ವಿದೇಶ

ಇತ್ತ ರಾಮ‌ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದರೆ, ಇತ್ತೀಚೆಗೆ ಬಿಡುಗಡೆಯಾದ 'ಅನ್ನಪೂರ್ಣಿ' ಸಿನಿಮಾದಲ್ಲಿ ರಾಮನನ್ನೇ ಅಣಕಿಸಿ ಚಿತ್ರೀಕರಿಸಿದ ಆರೋಪ ಕೇಳಿಬಂದಿದ್ದು ಭಾರೀ ವಿವಾದಕ್ಕೆ ತುತ್ತಾಗಿದೆ.

ಮುಂಬೈ, ಜ.11: ಇತ್ತ ರಾಮ‌ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದರೆ, ಇತ್ತೀಚೆಗೆ ಬಿಡುಗಡೆಯಾದ 'ಅನ್ನಪೂರ್ಣಿ' ಸಿನಿಮಾದಲ್ಲಿ ರಾಮನನ್ನೇ ಅಣಕಿಸಿ ಚಿತ್ರೀಕರಿಸಿದ ಆರೋಪ ಕೇಳಿಬಂದಿದ್ದು ಭಾರೀ ವಿವಾದಕ್ಕೆ ತುತ್ತಾಗಿದೆ. ಚಿತ್ರದಲ್ಲಿ ಹಿಂದು ಭಾವನೆಗೆ ಧಕ್ಕೆ ತರಲಾಗಿದೆ ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ದೂರುಗಳನ್ನು ನೀಡಿದ್ದಾರೆ. 

ಚಿತ್ರದಲ್ಲಿ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗಿದ್ದು, ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ. 'ಅನ್ನಪೂರ್ಣಿ' ಸಿನಿಮಾ ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ವಿವಾದ ಕೇಳಿಬಂದ ಬೆನ್ನಲ್ಲೇ ನೆಟ್ ಫ್ಲಿಕ್ಸ್ ನಿಂದ ಚಿತ್ರವನ್ನು ತೆಗೆದು ಹಾಕಲಾಗಿದೆ.‌ ವಿವಾದ ಕುರಿತಾಗಿ ಝೀ ಸ್ಟುಡಿಯೋ ಕ್ಷಮೆ ಕೇಳಿ ಹೇಳಿಕೆ ಬಿಡುಗಡೆ ಮಾಡಿದ್ದು ವಿವಾದಿತ ದೃಶ್ಯಗಳನ್ನು ತೆಗೆದುಹಾಕದೆ ಚಿತ್ರವನ್ನು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. 

ಹಿಂದೂ ಐಟಿ ಸೆಲ್ ಸಂಸ್ಥಾಪಕ ರಮೇಶ್ ಸೋಲಂಕಿ ಅವರು ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಅವರ ದೂರಿನ ಪ್ರಕಾರ, 'ಅನ್ನಪೂರ್ಣಿ' ಚಿತ್ರವು ಭಗವಾನ್ ರಾಮನನ್ನು ಅವಮಾನಿಸುತ್ತದೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ದೂರಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಿನಿಮಾದ ಕೆಲವು ದೃಶ್ಯಗಳನ್ನೂ ಸೋಲಂಕಿ ಉಲ್ಲೇಖಿಸಿದ್ದಾರೆ.

ಚಿತ್ರದಲ್ಲಿ ದೇವಸ್ಥಾನದ ಅರ್ಚಕರ ಮಗಳಾಗಿರುವ ನಯನತಾರಾ ಅವರು ಬಿರಿಯಾನಿ ಮಾಡುವ ಮುನ್ನ 'ಹಿಜಾಬ್' ಧರಿಸಿ ನಮಾಜ್ ಮಾಡುವುದನ್ನು ತೋರಿಸುತ್ತದೆ. ಮತ್ತೊಂದು ದೃಶ್ಯದಲ್ಲಿ, ನಯನತಾರಾ ಪಾತ್ರದ ಸ್ನೇಹಿತ ಫರ್ಹಾನ್, ಮಾಂಸವನ್ನು ಕತ್ತರಿಸಲು ಆಕೆಯ ಬ್ರೈನ್ ವಾಶ್ ಮಾಡುತ್ತಾನೆ ಮತ್ತು ಭಗವಾನ್ ಶ್ರೀರಾಮ ಮತ್ತು ಸೀತೆ ಕೂಡ ಮಾಂಸ ಸೇವಿಸಿದ್ದಾರೆ ಎಂದು ಹೇಳುತ್ತಾರೆ. ಅಲ್ಲದೆ, ನಯನತಾರಾ ಪಾತ್ರ ದೇವಸ್ಥಾನಕ್ಕೆ ಹೋಗದೆ, ಫರ್ಹಾನ್‌ನ ಜಾಗಕ್ಕೆ 'ಇಫ್ತಾರಿ'ಗೆ ಹೋಗುವ ದೃಶ್ಯವನ್ನು ಉಲ್ಲೇಖಿಸಿ ದೂರಿನಲ್ಲಿ ಆಕ್ಷೇಪಿಸಿದ್ದಾರೆ.

A police case has been filed against actor Nayanthara for allegedly hurting religious sentiments of Hindus, disrespecting Lord Ram and promoting 'love jihad' through the film 'Annapoorani'. The case was filed by a right-wing outfit in Madhya Pradesh.