Badaruddin Ajmal, Ram Mandir inauguration: ರಾಮ ಮಂದಿರ ಉದ್ಘಾಟನೆ ;  ಜ.20ರಿಂದ 25ರ ವರೆಗೆ ದೇಶದಲ್ಲಿರುವ ಎಲ್ಲಾ ಮುಸ್ಲಿಮರು ಮನೆಯಿಂದ ಹೊರಗೆ ಬರ್ಬೇಡಿ, ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು, ರೈಲಿನಲ್ಲಿ ಪ್ರಯಾಣಿಸಬೇಡಿ ಎಂದ ಸಂಸದ ಬದ್ರುದ್ದೀನ್‌

08-01-24 06:30 pm       HK News Desk   ದೇಶ - ವಿದೇಶ

ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ನಿಮಿತ್ತ ಜನರು ದೇಶಾದ್ಯಂತ ಪ್ರಯಾಣಿಸುತ್ತಾರೆ. ಹೀಗಾಗಿ ಈ ತಿಂಗಳ 20ರಿಂದ 25ರ ವರೆಗೆ ದೇಶದಲ್ಲಿ ಇರುವ ಮುಸ್ಲಿಮರು ಮನೆಯಿಂದ ಹೊರಗೆ ಬರುವುದು ಬೇಡ ಎಂದು ಸಂಸದ ಬದ್ರುದ್ದೀನ್‌ ಅಜ್ಮಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

ಗುವಹಾಟಿ, ಜ 08: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ನಿಮಿತ್ತ ಜನರು ದೇಶಾದ್ಯಂತ ಪ್ರಯಾಣಿಸುತ್ತಾರೆ. ಹೀಗಾಗಿ ಈ ತಿಂಗಳ 20ರಿಂದ 25ರ ವರೆಗೆ ದೇಶದಲ್ಲಿ ಇರುವ ಮುಸ್ಲಿಮರು ಮನೆಯಿಂದ ಹೊರಗೆ ಬರುವುದು ಬೇಡ ಎಂದು ಸಂಸದ ಬದ್ರುದ್ದೀನ್‌ ಅಜ್ಮಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

ಅಸ್ಸಾಂನ ಬಾರ್ಪೆಟಾದಲ್ಲಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಂದರ್ಭದ ಬಳಿಕ ಉಂಟಾಗಿದ್ದ ಪರಿಸ್ಥಿತಿಯೇ ಮತ್ತೆ ಮರುಕಳಿಸಬಹುದು. ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು. ಇದರಿಂದಾಗಿ ಸಮುದಾಯದವರನ್ನು ರಕ್ಷಿಸುವ ಕೆಲಸ ಆಗಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜ. 20ರಿಂದ 25ರ ಅವಧಿಯಲ್ಲಿ ಜನರು ಬಸ್‌ನಲ್ಲಿ, ವಿಮಾನದಲ್ಲಿ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಯಾರೂ ಮನೆಯಿಂದ ಹೊರಗೆ ಬರುವುದು ಬೇಡ ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, “ಆ ಪಕ್ಷ ನಮ್ಮ ಸಮುದಾಯದ ವೈರಿ’ ಎಂದು ದೂರಿದರು.

The chief of the All India United Democratic Front (AIUDF), Badaruddin Ajmal, has asked members of the Muslim community in Assam to avoid travelling by trains during this month to avoid “any untoward incident”.