Japan Flight News, Accident; ರನ್‌ವೇಯಲ್ಲಿ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಜಪಾನ್ ಏರ್‌ಲೈನ್ಸ್, 379 ಪ್ರಯಾಣಿಕರು, ಸಿಬ್ಬಂದಿ ಅಪಾಯದಿಂದ ಪಾರು, ಐವರು ಕೋಸ್ಟ್‌ ಗಾರ್ಡ್‌ ಸಿಬ್ಬಂದಿಗಳ ಸಾವು 

02-01-24 07:47 pm       HK News Desk   ದೇಶ - ವಿದೇಶ

ಜಪಾನ್‌ನ ಟೋಕಿಯೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಮೃತಪಟ್ಟಿದ್ದಾರೆ. ಹನೇಡಾ ವಿಮಾನ ನಿಲ್ದಾಣದಲ್ಲಿ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದ ಜಪಾನ್ ಏರ್‌ಲೈನ್ಸ್ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿತ್ತು.

ಜಪಾನ್​, ಜ 02: ಜಪಾನ್‌ನ ಟೋಕಿಯೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಮೃತಪಟ್ಟಿದ್ದಾರೆ. ಹನೇಡಾ ವಿಮಾನ ನಿಲ್ದಾಣದಲ್ಲಿ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದ ಜಪಾನ್ ಏರ್‌ಲೈನ್ಸ್ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿತ್ತು. ಎಲ್ಲಾ 379 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಈ ಬೆಂಕಿ ಅನಾಹುತಕ್ಕೆ ಕಾರಣವಾದ ಕರಾವಳಿ ಕಾವಲು ಪಡೆ ವಿಮಾನದ ಡಿಕ್ಕಿ, ಐವರ ಸಾವಿಗೆ ಕಾರಣವಾಗಿದೆ.

Tokyo plane fire: Video shows moment Japan Airlines plane burst into flames  after collision at Haneda airport; 5 killed - ABC7 San Francisco

ಜಪಾನ್ ಏರ್‌ಲೈನ್ಸ್ ಮತ್ತು ಕರಾವಳಿ ಕಾವಲು ವಿಮಾನದ ನಡುವೆ ಡಿಕ್ಕಿ ಸಂಭವಿಸಿದ್ದು, ಇದರಿಂದ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಮಂದಿಯಲ್ಲಿ ಐವರು ಮೃತಪಟ್ಟಿದ್ದಾರೆ. ಕೋಸ್ಟ್ ಗಾರ್ಡ್ ವಿಮಾನದ ಕ್ಯಾಪ್ಟನ್ ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಕರಾವಳಿ ಕಾವಲು ಪಡೆಯ ಸಿಬ್ಬಂದಿ ಭೂಕಂಪನ ಹಾಗೂ ಸುನಾಮಿಯಿಂದ ಉಂಟಾದ ಹಾನಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆಗೆ ತೆರಳಲು ತಯಾರಾಗುತ್ತಿದ್ದರು ಎನ್ನಲಾಗಿದೆ.

ಫ್ಲೈಟ್ 516 ವಿಮಾನವು ಹೊಕ್ಕೈಡೊದ ನ್ಯೂ ಚಿಟೋಸೆ ವಿಮಾನ ನಿಲ್ದಾಣದಿಂದ ಟೋಕಿಯೊದ ಹನೇಡಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ರನ್‌ ವೇದಲ್ಲಿ ಇಳಿದ ನಂತರ ಅದು ಜಪಾನ್ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಜಪಾನ್ ಏರ್‌ಲೈನ್ಸ್ ತಿಳಿಸಿದೆ.

ಎಂಎ722 ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಜಪಾನ್ ಏರ್‌ಲೈನ್ಸ್ ವಿಮಾನದ ಹಿಂದಿನ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಉರಿಯುತ್ತಿರುವಾಗಲೂ ಅದು ರನ್‌ವೇನಲ್ಲಿ ಮುಂದೆ ಸಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವೇ ನಿಮಿಗಳಲ್ಲಿ ಬೆಂಕಿಯ ಜ್ವಾಲೆಗಳು ಉಗ್ರ ಸ್ವರೂಪ ಪಡೆದುಕೊಂಡು ಒಳಭಾಗವನ್ನು ಆವರಿಸಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 379 ಪ್ರಯಾಣಿಕರಿದ್ದು, ಅಷ್ಟು ಕಡಿಮೆ ಅವಧಿಯಲ್ಲಿ ಅವರೆಲ್ಲರೂ ವಿಮಾನದ ಒಳಗಿನಿಂದ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜೀವಂತ ಪಾರಾಗುವ ಅದೃಷ್ಟ ಕರಾವಳಿ ಕಾವಲು ಸಿಬ್ಬಂದಿಗೆ ಇರಲಿಲ್ಲ.

ಜಪಾನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನದಲ್ಲಿ ಬೃಹತ್ ಬೆಂಕಿ ಜ್ವಾಲೆಗಳು ಹಾಗೂ ದಟ್ಟ ಹೊಗೆ ಹೊರಬರುವುದು ಸ್ಥಳೀಯ ಟೆಲಿವಿಷನ್ ಪ್ರಸಾರ ಮಾಡಿರುವ ವಿಡಿಯೋಗಳಲ್ಲಿ ಕಾಣಿಸಿದೆ. ಸುಮಾರು 70 ಅಗ್ನಿ ಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲವಾಗಿವೆ.

5 people dead, Japan Airlines plane catches fire after collision on Tokyo airport  runway

Japan Airlines plane fire: Five dead on coastguard plane after crash with  jet on Haneda Airport runway - BBC News

ಜೆಎಎಲ್ ಏರ್‌ಬಸ್ ಎ350 ವಿಮಾನವು ಲ್ಯಾಂಡಿಂಗ್ ವೇಳೆ ತನ್ನ ವೇಗ ತಗ್ಗಿಸುವಾಗ ಕೋಸ್ಟ್ ಗಾರ್ಡ್‌ನ ಟರ್ಬೋ ಪ್ರಾಪ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರಯಾಣಿಕ ವಿಮಾನ ಎರಡು ಭಾಗವಾಗಿದೆ. ಕ್ಯಾಬಿನ್ ಒಳಗೆ ಹೊಗೆ ತುಂಬಿಕೊಳ್ಳುತ್ತಿದ್ದಂತೆ ಭಯಭೀತರಾದ ಪ್ರಯಾಣಿಕರು, ಜೋರಾಗಿ ಕಿರುಚುತ್ತಾ ಬಾಗಿಲಿನ ಕಡೆ ಓಡಿದ್ದಾರೆ.

ಈ ದುರಂತದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಭೂ, ಮೂಲ ಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ಹಾನಿಯ ಬಗ್ಗೆ ತ್ವರಿತ ವಿಚಾರಣೆ ನಡೆಸಿ, ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಪ್ರಧಾನಿ ಫುಮಿಯೊ ಕಿಶಿಡಾ ಸೂಚಿಸಿದ್ದಾರೆ.

On a bustling day at Tokyo's Haneda Airport, a Japan Airlines (JAL) plane became engulfed in flames on the runway, following what was reported as a collision with a Japan Coast Guard aircraft.