Earthquake in Japan, Tsunami in Japan: ಹೊಸ ವರ್ಷದ ಮೊದಲ ದಿನವೇ ಭೂಕಂಪಕ್ಕೆ ನಲುಗಿದ ಜಪಾನ್  ; 12 ಮಂದಿ ಸಾವು, ಆಘಾತದ ಬೆನ್ನಲ್ಲೇ ಸುನಾಮಿಯ ಎಚ್ಚರಿಕೆ !

02-01-24 12:53 pm       HK News Desk   ದೇಶ - ವಿದೇಶ

ಹೊಸ ವರ್ಷದ ಮೊದಲ ದಿನವೇ ಜಪಾನ್ ಸರಣಿ ಭೂಕಂಪಗಳಿಂದ ನಲುಗಿ ಹೋಗಿದೆ, ಸೋಮವಾರದಿಂದ ಇಲ್ಲಿಯವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.

ಟೋಕಿಯೊ, ಜ 02: ಹೊಸ ವರ್ಷದ ಮೊದಲ ದಿನವೇ ಜಪಾನ್ ಸರಣಿ ಭೂಕಂಪಗಳಿಂದ ನಲುಗಿ ಹೋಗಿದೆ, ಸೋಮವಾರದಿಂದ ಇಲ್ಲಿಯವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.

ಸೋಮವಾರದ 7.6 ಮತ್ತು 6 ತೀವ್ರತೆಯ ಎರಡು ಪ್ರಬಲ ಭೂಕಂಪಗಳೂ ಸಂಭವಿಸಿವೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ಭೂಕಂಪನದಿಂದ ಕನಿಷ್ಠ 12 ಮಂದಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಅಲ್ಲದೆ ಬದುಕುಳಿದವರ ಹುಡುಕಾಟದಲ್ಲಿ ರಕ್ಷಣಾ ತಂಡ ನಿರತವಾಗಿದೆ ಎಂದು ಹೇಳಲಾಗಿದೆ, ಭೂಕಂಪದ ತೀವ್ರತೆಗೆ ಸಮುದ್ರದಲ್ಲಿ ಸುನಾಮಿ ಭೀತಿ ಆವರಿಸಿದ್ದು ದೊಡ್ಡ ದೊಡ್ಡ ಅಲೆಗಳ ಹೊಡೆತಕ್ಕೆ ಅನೇಕ ಮನೆಗಳು ನೆಲಸಮವಾಗಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ

Japan earthquake latest: At least 30 dead as bodies are pulled from rubble;  airport shut after runway cracked | World News | Sky News

ಭೂಕಂಪನದಿಂದ ವಾಜಿಮಾ ಪಟ್ಟಣದಲ್ಲಿ ಸುಮಾರು 30 ಕಟ್ಟಡಗಳು ಕುಸಿದಿವೆ. ವಿದ್ಯುತ್ ಕಡಿತದಿಂದ 32,700 ಕ್ಕೂ ಹೆಚ್ಚು ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಪ್ರಮುಖ ರಸ್ತೆಗಳು ಕುಸಿದ ಪರಿಣಾಮ ರಕ್ಷಣಾ ಕಾರ್ಯಾಚಣೆ, ವೈದ್ಯಕೀಯ ಸಹಾಯಕ್ಕೆ ತೊಡಕು ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Japan earthquake and tsunami of 2011 - Aftermath, Recovery, Rebuilding |  Britannica

ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದ್ದು, ಈ ಹಿನ್ನೆಲೆ ಜನರು ಕರಾವಳಿ ಪ್ರದೇಶಗಳನ್ನು ತ್ವರಿತವಾಗಿ ಬಿಟ್ಟು ಕಟ್ಟಡಗಳ ಮೇಲ್ಭಾಗಕ್ಕೆ ಅಥವಾ ಸಾಧ್ಯವಾದಷ್ಟು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ.

4 killed after magnitude 7.5 earthquake jolts Japan | Daily Sabah

ಎನ್‌ಎಚ್‌ಕೆ ಪ್ರಕಾರ, ಇಶಿಕಾವಾದಲ್ಲಿನ ವಾಜಿಮಾ ನಗರದ ತೀರಕ್ಕೆ 1 ಮೀಟರ್‌ಗಿಂತ ಹೆಚ್ಚು ಎತ್ತರದ ಅಲೆಗಳು ಅಪ್ಪಳಿಸಿದೆ. ಆದರೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ಇನ್ನೂ ವರದಿಯಾಗಿಲ್ಲ

2011 ರ ಟೊಹೊಕು ಭೂಕಂಪ ಮತ್ತು ಸುನಾಮಿ ಘಟನೆಯನ್ನು ಸಾಮಾನ್ಯವಾಗಿ ಗ್ರೇಟ್ ಈಸ್ಟ್ ಜಪಾನ್ ಭೂಕಂಪ ಮತ್ತು ಸುನಾಮಿ ಎಂದು ಕರೆಯಲಾಗುತ್ತದೆ. ಆ ಅವಘದಲ್ಲಿ 18,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು

The tsunami threat resulting from a powerful earthquake that struck central Japan on Monday has been deemed largely over, according to a statement from the Pacific Tsunami Warning Center based in Hawaii.