Madhya Pradesh Accident, Fire: ಖಾಸಗಿ ಬಸ್ - ಟ್ರಕ್ ನೆಡುವೆ ಡಿಕ್ಕಿ ; ಹೊತ್ತಿ ಉರಿದ ಬೆಂಕಿ, 12 ಮಂದಿ ಬಲಿ 

28-12-23 02:23 pm       HK News Desk   ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಬುಧವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ಅಪಘಾತ ಸಂಭವಿಸಿ, 12 ಮಂದಿ ಸಜೀವ ದಹನವಾಗಿದ್ದಾರೆ.

ಗುನಾ, ಡಿ.28: ಮಧ್ಯಪ್ರದೇಶದಲ್ಲಿ ಬುಧವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ಅಪಘಾತ ಸಂಭವಿಸಿ, 12 ಮಂದಿ ಸಜೀವ ದಹನವಾಗಿದ್ದಾರೆ.

ಈ ಘಟನೆ ಗುನ ಜಿಲ್ಲೆಯ ಗುಣ-ಅರೋನ್ ಮಾರ್ಗದಲ್ಲಿ ಸಂಭವಿಸಿದೆ. ಬಸ್ ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಬಸ್ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 12 ಪ್ರಯಾಣಿಕರು ಸಜೀವ ದಹನಗೊಂಡು, 17 ಜನ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಗುನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತರುಣ್ ರಥಿ ತಿಳಿಸಿದ್ದಾರೆ.

ಪ್ರಸ್ತುತ 17 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ, ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Madhya Pradesh Guna bus accident: 13 killed as bus catches fire after  collision with truck - India Today

Madhya Pradesh Bus Accident: Death Toll From Horrific Guna Crash Rises To  12 | India News, Times Now

Passengers recount Guna bus horror: 'Engulfed in flames…people piled on top  of each other…couldn't save my daughter' | India News - The Indian Express

ಮೃತದೇಹಗಳು ಬೆಂಕಿಯಲ್ಲಿ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು.  ಅಪಘಾತ ಸ್ಥಳದಿಂದ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯಲು ಪರಿಶೀಲನೆ ಡೆಯುತ್ತಿದೆ ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳನ್ನು ಘೋಷಿಸಿದ್ದಾರೆ.

"ನಾವು ಆರೋನ್ ಕಡೆಗೆ ಹೋಗುತ್ತಿದ್ದೆವು. ಡಂಪರ್‌ಗೆ ಡಿಕ್ಕಿ ಹೊಡೆದ ಸದ್ದು, ಬಾಂಬ್ ಸ್ಫೋಟದಂತೆ ಕೇಳಿಸಿತ್ತು. ಬಸ್ ಉರುಳಿಬಿದ್ದು, ಬೆಂಕಿಯ ಜ್ವಾಲೆ ಎಲ್ಲಾ ಕಡೆ ಆವರಿಸಿತು. ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ನನ್ನ ಮಗಳನ್ನು ಕಾಪಾಡುವುದು ಸಾಧ್ಯವಾಗಲಿಲ್ಲ" ಎಂದು ಈ ಭಯಾನಕ ಘಟನೆಯಲ್ಲಿ ಮಗಳನ್ನು ಕಳೆದುಕೊಂಡ ಪ್ರಯಾಣಿಕ ಶ್ರೀರಾಮ್ ಓಝಾ ಕಣ್ಣೀರಿಟ್ಟರು.

At least 12 people were killed after a passenger bus caught fire following its collision with a dumper in Madhya Pradesh's Guna. The accident happened in the wee hours of Thursday on the Guna-Aaron road.