Drone attack Ship Mangalore: ಅರಬ್ಬೀ ಸಮುದ್ರಲ್ಲಿ ಡ್ರೋಣ್ ದಾಳಿಗೀಡಾಗಿದ್ದ ಹಡಗು ಮುಂಬೈಗೆ ; ಮಂಗಳೂರಿಗೆ ತೈಲ ಹೊತ್ತು ಬರುತ್ತಿದ್ದ ಹಡಗಿಗೆ ಹಾನಿ, ಡ್ರೋಣ್ ಕಣ್ಗಾವಲಿಗೆ ಗಸ್ತು ವಿಮಾನ 

26-12-23 02:10 pm       HK News Desk   ದೇಶ - ವಿದೇಶ

ಅರಬ್ಬೀ ಸಮುದ್ರದಲ್ಲಿ ಡ್ರೋಣ್ ದಾಳಿಗೆ ಒಳಗಾಗಿದ್ದ ಇಸ್ರೇಲ್ ಮೂಲದ ವಾಣಿಜ್ಯ ಹಡಗು ಎಂವಿ ಕೆಮ್ ಫ್ಲೂಟೊ ಸದ್ಯ ಮುಂಬೈ ಬಂದರನ್ನು ತಲುಪಿದೆ. ಡ್ರೋನ್​ ದಾಳಿಯಿಂದ ಹಡಗಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದ್ದು ನೌಕಾಸೇನೆ ವಿವಿಧ ಏಜನ್ಸಿಗಳ ಜೊತೆಗೆ ಹೆಚ್ಚಿನ ತನಿಖೆ ಆರಂಭಿಸಿದೆ.‌

ಮುಂಬೈ, ಡಿ.26: ಅರಬ್ಬೀ ಸಮುದ್ರದಲ್ಲಿ ಡ್ರೋಣ್ ದಾಳಿಗೆ ಒಳಗಾಗಿದ್ದ ಇಸ್ರೇಲ್ ಮೂಲದ ವಾಣಿಜ್ಯ ಹಡಗು ಎಂವಿ ಕೆಮ್ ಫ್ಲೂಟೊ ಸದ್ಯ ಮುಂಬೈ ಬಂದರನ್ನು ತಲುಪಿದೆ. ಡ್ರೋನ್​ ದಾಳಿಯಿಂದ ಹಡಗಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದ್ದು ನೌಕಾಸೇನೆ ವಿವಿಧ ಏಜನ್ಸಿಗಳ ಜೊತೆಗೆ ಹೆಚ್ಚಿನ ತನಿಖೆ ಆರಂಭಿಸಿದೆ.‌

ಸೌದಿ ಅರೇಬಿಯಾದಿಂದ ಮಂಗಳೂರಿನ ಬಂದರಿಗೆ ಕಚ್ಚಾ ತೈಲ ಹೊತ್ತುಕೊಂಡು ಹೊರಟಿದ್ದ ಹಡಗಿನ ಮೇಲೆ ಗುಜರಾತ್ ಬಳಿ ಸಮುದ್ರ ಮಧ್ಯೆ ಡ್ರೋಣ್ ದಾಳಿ ನಡೆಸಲಾಗಿತ್ತು. ಈ ದಾಳಿಯನ್ನು ಇರಾನ್ ನಡೆಸಿದೆ ಎಂದು ಅಮೆರಿಕದ ಭದ್ರತಾ ಸಂಸ್ಥೆ ಹೇಳಿತ್ತು. ಸರಕು ಹಡಗು ಡಿಸೆಂಬರ್ 19 ರಂದು ಪ್ರಯಾಣ ಆರಂಭಿಸಿತ್ತು. ಡಿಸೆಂಬರ್ 25 ರಂದು ನವ ಮಂಗಳೂರು ಬಂದರಿಗೆ ತಲುಪಬೇಕಿತ್ತು. ಡಿಸೆಂಬರ್​ 23 ರಂದು ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದ ಸಮುದ್ರದಲ್ಲಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ಜಪಾನ್‌ ಒಡೆತನದ ಹಡಗು ಇದಾಗಿದ್ದು, ಇಸ್ರೇಲ್​ ಸಹಭಾಗಿತ್ವ ಹೊಂದಿದೆ. 

ದಾಳಿಯ ಮಾಹಿತಿ ತಿಳಿದ ತಕ್ಷಣ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿತ್ತು. ಅದರಂತೆ ದಾಳಿಗೀಡಾದ ಎಂವಿ ಕೆಮ್ ಫ್ಲೂಟೋ ಹಡಗನ್ನು ಭಾರತೀಯ ಕೋಸ್ಟ್​ ಗಾರ್ಡ್​ ಮುಂಬೈ ಬಂದರಿಗೆ ತಲುಪುವಂತೆ ಮಾಡಿದೆ.

ಪರಿಶೀಲನೆ ಬಳಿಕ ಇದು ಡ್ರೋನ್ ದಾಳಿ ಎಂದು ಭಾರತೀಯ ನೌಕಾಪಡೆ ಖಚಿತಪಡಿಸಿದೆ. ಹೆಚ್ಚಿನ ವಿವರಗಳಿಗಾಗಿ ಫೋರೆನ್ಸಿಕ್ ತನಿಖೆಯ ನಂತರ ದುರಸ್ತಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಮತ್ತೊಂದೆಡೆ, ಭಾರತೀಯ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯ ದೃಷ್ಟಿಯಿಂದ ಕಣ್ಗಾವಲುಗಾಗಿ P-8I ಗಸ್ತು ವಿಮಾನಗಳನ್ನು ನಿಯೋಜಿಸಿದೆ.

Chemical tanker MV Chem Pluto was struck by a drone off India's west coast on Saturday. The attack came amid increasing concerns over various commercial vessels being targeted reportedly by Iran-backed Houthi militants in the Red Sea and Gulf of Aden amid the Israel-Hamas conflict. The vessel with 21 Indian and one Vietnamese crew, anchored at outer anchorage off Mumbai at 3.30 pm.