Online Paytm lays off, 1000 employees: ಪೇಟಿಎಂ ಸಂಸ್ಥೆಯಲ್ಲಿ ಒಂದು ಸಾವಿರ ಉದ್ಯೋಗಕ್ಕೆ ಕತ್ತರಿ ; ಮಾನವ ರಹಿತ ಎಐ ಟೆಕ್ನಾಲಜಿ ಬಳಕೆಯತ್ತ ಚಿಂತನೆ 

25-12-23 10:50 pm       HK News Desk   ದೇಶ - ವಿದೇಶ

ಆನ್ಲೈನ್ ಪೇಮೆಂಟ್ ಆ್ಯಪ್ ಪೇಟಿಎಂ ಸಂಸ್ಥೆಯಲ್ಲಿ ದೇಶಾದ್ಯಂತ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಪೈಕಿ ಎರಡು ತಿಂಗಳ ಅವಧಿಯಲ್ಲಿ ಒಂದು ಸಾವಿರ ಮಂದಿಯನ್ನು ಕಿತ್ತು ಹಾಕಿದೆ. 

ನವದೆಹಲಿ, ಡಿ.25: ಆನ್ಲೈನ್ ಪೇಮೆಂಟ್ ಆ್ಯಪ್ ಪೇಟಿಎಂ ಸಂಸ್ಥೆಯಲ್ಲಿ ದೇಶಾದ್ಯಂತ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಪೈಕಿ ಎರಡು ತಿಂಗಳ ಅವಧಿಯಲ್ಲಿ ಒಂದು ಸಾವಿರ ಮಂದಿಯನ್ನು ಕಿತ್ತು ಹಾಕಿದೆ. 

ಕಳೆದ ಅಕ್ಟೋಬರ್ ತಿಂಗಳಿನಿಂದಲೇ ಜಾಬ್ ಕಟ್ಟಿಂಗ್ ಶುರು ಮಾಡಿದ್ದು ಕನಿಷ್ಠ ಒಂದು ಸಾವಿರ ಮಂದಿಯನ್ನು ಕತ್ತರಿ ಹಾಕಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಮಾನವ ರಹಿತವಾಗಿ ಎಐ ಟೆಕ್ನಾಲಜಿ ಬಳಕೆ ಮಾಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. 

ಎಐ ಅಟೊಮೇಶನ್ ಮೂಲಕ 10 ರಿಂದ 15 ಪರ್ಸೆಂಟ್ ವೆಚ್ಚ ಕಡಿಮೆ ಮಾಡಿಕೊಳ್ಳುವ ಇರಾದೆ ಇದೆಯಂತೆ. ಇದಲ್ಲದೆ, ಮುಂದಿನ ವರ್ಷ ಹೊಸತಾಗಿ ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ಮತ್ತು ಕಂಪನಿಯ ವಿಸ್ತರಣೆ ಬಗ್ಗೆಯೂ ಹೇಳಿಕೊಂಡಿದೆ.

As the string of layoffs in 2023 continues, Paytm's parent company One 97 Communications has decided to fire over 1,000 employees across various departments in an effort to cut costs across the company.