Jammu Kashmir, terrorists attack: ಜಮ್ಮು ಕಾಶ್ಮೀರದಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರ ದಾಳಿ ; ನಾಲ್ಕು ಯೋಧರು ಸಾವು

21-12-23 10:55 pm       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದು ನಾಲ್ಕು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಮೂವರು ಯೋಧರು ತೀವ್ರ ಗಾಯಗೊಂಡಿದ್ದಾರೆ.

ಶ್ರೀನಗರ, ಡಿ.21: ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದು ನಾಲ್ಕು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಮೂವರು ಯೋಧರು ತೀವ್ರ ಗಾಯಗೊಂಡಿದ್ದಾರೆ.

ತಾನಾಮಂಡಿ ರಜೌರಿ ಏರಿಯಾದಲ್ಲಿ ಮಧ್ಯಾಹ್ನ 3.45ಕ್ಕೆ ಸೇನಾ ಯೋಧರನ್ನು ಒಯ್ಯುತ್ತಿದ್ದ ಎರಡು ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಪ್ರತಿ ದಾಳಿ ನಡೆಸಲಾಗಿದ್ದು, ಅಷ್ಟರಲ್ಲಿ ನಾಲ್ಕು ಯೋಧರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸಲಾಗುತ್ತಿದೆ.

ಇತ್ತೀಚೆಗೆ ರಜೌರಿ ಪ್ರದೇಶದ ಧರ್ಮಶಾಲಾ ಬಳಿ ಸೇನಾ ಯೋಧರ ಮೇಲೆ ಉಗ್ರರು ದಾಳಿ ನಡೆಸಿ ಇಬ್ಬರು ಕ್ಯಾಪ್ಟನ್ ಸೇರಿ ಐವರು ಯೋಧರು ಸಾವನ್ನಪ್ಪಿದ್ದರು. ಲಷ್ಕರ್ ತೈಬಾ ಸಂಘಟನೆಯ ಕಮಾಂಡರ್ ಆಗಿರುವ ಕ್ವಾರಿ ಎಂಬಾತನ ಸೂತ್ರದಡಿ ನವೆಂಬರ್ ತಿಂಗಳಲ್ಲಿ ಹಲವಾರು ಉಗ್ರ ದಾಳಿ ನಡೆದಿದ್ದವು. ಅದರಲ್ಲಿ ಐವರು ಯೋಧರು ಮತ್ತು ಹತ್ತು ಮಂದಿ ನಾಗರಿಕರು ಮಡಿದಿದ್ದರು. ಇದೀಗ ಡಿಸೆಂಬರ್ ತಿಂಗಳಲ್ಲಿಯೂ ಉಗ್ರರ ದಾಳಿ ಮುಂದುವರಿದಿದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಯತ್ನ ನಡೆಯುತ್ತಿರುವಂತೆಯೇ ಉಗ್ರರು ಚಿಗಿತುಕೊಂಡು ದಾಳಿ ಮುಂದುವರಿಸಿದ್ದಾರೆ.

The vehicles, carrying personnel to the site of an overnight cordon-and-search operation, came under attack at Dhatyar Morh at about 3.45pm on Thursday.A defence spokesperson said a search operation was launched in the general area of Dhera Ki Gali (DKG) in Poonch district on Wednesday night based on “hard intelligence” about the presence of terrorists and an encounter ensued there.