Uttar pradesh, woman talaq: ಸೋದರನಿಗೆ ಕಿಡ್ನಿ ದಾನ ಮಾಡಿದ್ದ ಅಕ್ಕ ; ಕಿಡ್ನಿ ಕೊಟ್ಟಿದ್ದಕ್ಕೆ 40 ಲಕ್ಷ ಕೇಳುವಂತೆ ಪೀಡಿಸಿದ ಪತಿರಾಯ, ಮಾತು ಕೇಳದ ಪತ್ನಿಗೆ ವಾಟ್ಸಪಲ್ಲೇ ತ್ರಿವಳಿ ತಲಾಖ್ ! 

21-12-23 10:41 pm       HK News Desk   ದೇಶ - ವಿದೇಶ

ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣಕ್ಕಾಗಿ ಪೀಡಿಸಿದ್ದಲ್ಲದೆ, ಒಪ್ಪದ ಪತ್ನಿಗೆ ವಾಟ್ಸಪ್​ ಮೂಲಕ ಪತಿ ತ್ರಿವಳಿ ತಲಾಖ್ ಹೇಳಿ ವಿಚ್ಚೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.

ಲಕ್ನೋ, ಡಿ.21: ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣಕ್ಕಾಗಿ ಪೀಡಿಸಿದ್ದಲ್ಲದೆ, ಒಪ್ಪದ ಪತ್ನಿಗೆ ವಾಟ್ಸಪ್​ ಮೂಲಕ ಪತಿ ತ್ರಿವಳಿ ತಲಾಖ್ ಹೇಳಿ ವಿಚ್ಚೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಈ ಬಗ್ಗೆ ಧನೇಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. 

ಜೈತಾಪುರ ನಿವಾಸಿ ತರುನ್ನುಮ್​ ಎಂಬಾಕೆ ರಶೀದ್​ ಎಂಬಾತ‌ನನ್ನು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್​ ಮತ್ತೊಂದು ಮದುವೆಯಾಗಿದ್ದ. ರಶೀದ್​ ಸೌದಿಯಲ್ಲಿ ಉದ್ಯೋಗದಲ್ಲಿದ್ದು ಈ ನಡುವೆ ತರುನ್ನುಮ್​ ಸಹೋದರ ಶಾಕೀರ್​ ಕಿಡ್ನಿ ವೈಫಲ್ಯಕ್ಕೀಡಾಗಿದ್ದ. ಕಿಡ್ನಿ ಸಿಗದೇ ಇದ್ದರೆ ಪ್ರಾಣಕ್ಕೆ ಅಪಾಯ ಇದೆಯೆಂದು ವೈದ್ಯರ ಹೇಳಿಕೆಯಂತೆ ಸೋದರನ ಪ್ರಾಣ ಉಳಿಸಲು ತರುನ್ನುಮ್​ ಮುಂದಾಗಿದ್ದಳು. ಬಳಿಕ ಶಾಕೀರ್​ಗೆ ಮುಂಬೈನ ಆಸ್ಪತ್ರೆಯಲ್ಲಿ ಕಿಡ್ನಿ ಜೋಡಣೆ ಮಾಡಲಾಗಿತ್ತು. 

ಕಿಡ್ನಿ ಜೋಡಣೆ ಯಶಸ್ವಿಯಾದ ಬಳಿಕ ಪತಿಯ ಮನೆಗೆ ತೆರಳಿದಾಗ, ಪತಿ ಉಲ್ಟಾ ಹೊಡೆದಿದ್ದ. ಕಿಡ್ನಿ ಕೊಟ್ಟಿದ್ದಕ್ಕೆ ಪ್ರತಿಯಾಗಿ 40 ಲಕ್ಷ ರೂ. ಕೇಳಿ ಪಡೆಯುವಂತೆ ಬೇಡಿಕೆ ಇಟ್ಟಿದ್ದ. ಇದಕ್ಕೊಪ್ಪದ ಪತ್ನಿ ತರುನ್ನುಮ್​ಗೆ ರಶೀದ್, ವಾಟ್ಸ್‌ಆ್ಯಪ್​ ನಲ್ಲಿಯೇ ತ್ರಿವಳಿ ತಲಾಖ್​ ನೀಡಿದ್ದಾನೆ. ವಿಚ್ಚೇದನ ಬಳಿಕವೂ ಪತಿಯ ಮನೆಯಲ್ಲೇ ತರುನ್ನುಮ್ ವಾಸವಿದ್ದಳು.‌ ಆದರೆ ಈಗ ಕಿರುಕುಳ ಆರಂಭಿಸಿದ್ದರಿಂದ ಪತಿಯ ಮನೆ ಬಿಟ್ಟು ತಾಯಿ ಮನೆಗೆ ಬಂದು ಪೊಲೀಸ್ ದೂರು ನೀಡಿದ್ದಾಳೆ.

A man gave triple talaq to his wife over WhatsApp after she donated a kidney to her ailing brother. The man works in Saudi Arabia, while the wife stays in Bairiyahi village in Uttar Pradesh’s Gonda district. The incident unfolded after the wife took a decision to save her brother by donating one of her kidneys. Little did she anticipate that the noble act would become the catalyst for the dissolution of her marriage.