PM Modi, launches survey, NaMo app: ಕೇಂದ್ರ ಸರಕಾರದ ಅಭಿವೃದ್ಧಿ ಜನರಿಗೆ ತಲುಪಿದೆಯೇ ? ಸ್ಥಳೀಯ ಸಂಸದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ? ಸಾರ್ವಜನಿಕರೇ ಮಾಹಿತಿ ದಾಖಲಿಸಲು ನಮೋ ಏಪ್ ಬಿಡುಗಡೆ

20-12-23 03:22 pm       HK News Desk   ದೇಶ - ವಿದೇಶ

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮೋ ಏಪ್ ಬಿಡುಗಡೆ ಮಾಡಿದ್ದು, ಕೇಂದ್ರ ಸರಕಾರದ ಯೋಜನೆಗಳು ಮತ್ತು ಸ್ಥಳೀಯ ಸಂಸದರ ಬಗ್ಗೆ ಜನರ ಅಭಿಪ್ರಾಯಗಳನ್ನು ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ನವದೆಹಲಿ, ಡಿ.20: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮೋ ಏಪ್ ಬಿಡುಗಡೆ ಮಾಡಿದ್ದು, ಕೇಂದ್ರ ಸರಕಾರದ ಯೋಜನೆಗಳು ಮತ್ತು ಸ್ಥಳೀಯ ಸಂಸದರ ಬಗ್ಗೆ ಜನರ ಅಭಿಪ್ರಾಯಗಳನ್ನು ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಜನ ಮನ ಸರ್ವೇ ಹೆಸರಿನಲ್ಲಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸ್ವತಃ ಪ್ರಧಾನಿ ಮೋದಿಯವರೇ ಮುಂದಾಗಿದ್ದು, ಕೇಂದ್ರ ಸರಕಾರದ ವಿವಿಧ ಯೋಜನೆಗಳು ಜನರಿಗೆ ತಲುಪಿದೆಯೇ, ತನ್ನ ಆಡಳಿತ ಜನರಿಗೆ ತೃಪ್ತಿ ಕೊಟ್ಟಿದೆಯೇ, ಸ್ಥಳೀಯ ಸಂಸದರ ಕುರಿತು ಜನರ ಅಭಿಪ್ರಾಯ ಹೇಗಿದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ ಎನ್ನುವ ಬಗ್ಗೆ ತಿಳಿದುಕೊಳ್ಳಲು ಮೋದಿ ಮುಂದಾಗಿದ್ದಾರೆ. ಜನಸಾಮಾನ್ಯರ ಅಭಿಪ್ರಾಯ ದಾಖಲಿಸಲು ಹೊಸತಾದ ಏಪ್ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ತಾವಾಗಿಯೇ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.

ಈ ಸರ್ವೇ ಮೂಲಕ ಜನರೇ ಹಾಲಿ ಸಂಸದರ ಬದಲಾವಣೆ ಬಗ್ಗೆ ಅಭಿಪ್ರಾಯ ತಿಳಿಸಬಹುದಲ್ಲದೆ, ಆತನ ಬದಲು ಪರ್ಯಾಯ ನಾಯಕನ ಹೆಸರನ್ನೂ ಸೂಚಿಸಬಹುದು. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯ ಪಡೆಯುವುದು, ಮಾತುಗಳನ್ನು ಆಲಿಸುವುದು ಮಹತ್ವದ್ದಾಗಿದೆ. ಜನರ ಅಭಿಪ್ರಾಯವನ್ನು ನೇರವಾಗಿ ತಿಳಿಯಲು ಇದೊಂದು ಅವಕಾಶ. ಸರಕಾರದ ಅಭಿವೃದ್ಧಿ ಯೋಜನೆಗಳು ತಮ್ಮ ಕ್ಷೇತ್ರದಲ್ಲಿ ಸಾಕಾರ ಆಗಿದೆಯೇ ಎನ್ನುವ ಬಗ್ಗೆ ತಿಳಿಯಬಹುದಾಗಿದೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಕ್ರಾನಿಕಲ್ ಮಾಧ್ಯಮ ವರದಿ ಮಾಡಿದೆ.

In a move similar to one made in 2018, Prime Minister Narendra Modi on December 19 launched the “Jan Man Survey” on the NaMo app with exhaustive questions on the performance of his government and that of local representatives.