ಬ್ರೇಕಿಂಗ್ ನ್ಯೂಸ್
18-12-23 10:50 pm HK News Desk ದೇಶ - ವಿದೇಶ
ನವದೆಹಲಿ, ಡಿ 18: ಭೂಗತ ಪಾತಕಿ ಹಾಗೂ 93ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂಗೆ ಅಪರಿಚಿತರು ವಿಷ ಉಣಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರಾಚಿಯ ಆಸ್ಪತ್ರೆಯಲ್ಲಿ ಭಾರೀ ಭದ್ರತೆಯಲ್ಲಿ ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ದಾವೂದ್ ಸತ್ತಿದ್ದಾನೆ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ದಾವೂದ್ ನ ಪ್ರಮುಖ ಅನುಯಾಯಿ ಛೋಟಾ ಶಕೀಲ್, ವದಂತಿಗಳೆಲ್ಲಾ ಸುಳ್ಳು, ದಾವೂದ್ ಇಬ್ರಾಹಿಂ ಆರೋಗ್ಯದಿಂದ ಇದ್ದಾರೆಂದು ತಿಳಿಸಿದ್ದಾನೆ.
ನಕಲಿ ಖಾತೆಯಿಂದ ಟ್ವೀಟ್ ;
ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರ ಹೆಸರಲ್ಲಿ ನಕಲಿ ಖಾತೆ ತೆರದು ದಾವೂದ್ ನಿಧನರಾಗಿದ್ದಾನೆ ಎಂಬ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾನವೀಯತೆಗೆ ಹೆಸರಾಗಿರುವ, ಪ್ರತಿಯೊಬ್ಬ ಪಾಕಿಸ್ತಾನಿ ಹೃದಯದ ಆತ್ಮೀಯ ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷಪ್ರಾಶನಕ್ಕೊಳಗಾಗಿ ನಿಧನರಾಗಿದ್ದಾರೆ. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ ಎಂದು ಬರೆದಿರುವ ಪೋಸ್ಟ್ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಸುದ್ದಿ, ನಕಲಿ ಖಾತೆಯಿಂದ ಪೋಸ್ಟ್ ಆಗಿದೆ ಎಂದು ತಿಳಿದುಬಂದಿದೆ.
1986ರಲ್ಲಿ ದಾವೂದ್ ಪಲಾಯನ ;
ಇನ್ನೂ CBI ಪ್ರಕಾರ ದಾವೂದ್, ತನ್ನ ಗುರುತನ್ನು ಮರೆಮಾಡಲು 13 ಹೆಸರುಗಳನ್ನು ಬಳಸುತ್ತಾನೆ. 1980-90 ರ ದಶಕದ ಆರಂಭದಲ್ಲಿಆತ ವೇಶ್ಯಾವಾಟಿಕೆ, ಜೂಜು ಮತ್ತು ಮಾದಕವಸ್ತು ಸರಬರಾಜು ದಂದೆ ಮೂಲಕ ಮುಂಬೈ ಭೂಗತ ಲೋಕದ ಡಾನ್ ಆಗಿ ಮೆರೆದಾಡಿದ್ದ. ಈತನ ಮಾಫಿಯಾ 1980 ರ ದಶಕದಲ್ಲಿ ಮುಂಬೈನ ಆರ್ಥಿಕ ಕುಸಿತಕ್ಕೆ ಕಾರಣವಾಗಿತ್ತು. ತನ್ನ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ತಪ್ಪಿಸಿಕೊಳ್ಳಲು ಆತ 1986 ರಲ್ಲಿ ದುಬೈಗೆ ಪಲಾಯನ ಮಾಡಿದ್ದ. ಹಲವು ವೇಷಗಳನ್ನು ಬದಲಿಸಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ
ದಾವೂದ್ ಗ್ಯಾಂಗ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಬಂಟ ಶಕೀಲ್ ತನ್ನ ಅನುಯಾಯಿಗಳ ಮೂಲಕ ಸುಲಿಗೆ ದಂಧೆ ನಡೆಸುತ್ತಾನೆ. ದಾವೂದ್ ಇಬ್ರಾಹಿಂ ಮತ್ತು ಆತನ ತಂಡದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಎಂಬಾತನನ್ನ ವಿಚಾರಣೆಗೆ ಒಳಪಡಿಸಿತ್ತು. ಆತ ಬಹಿರಂಗಪಡಿಸಿರುವ ವಿವರಗಳ ಪ್ರಕಾರ, 1995-96ರಲ್ಲಿ ಭಾರತ ತೊರೆದಿದ್ದ ದಾವೂದ್ ಅಂದಿನಿಂದ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ. 1993ರ ಮುಂಬೈ ಸ್ಫೋಟದ ಬಳಿಕ ದಾವೂದ್ ಇಬ್ರಾಹಿಂ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಆದರೆ, ಪಾಕಿಸ್ತಾನ ಇದನ್ನು ಎಂದಿಗೂ ಒಪ್ಪಿಕೊಂಡಿಲ್ಲ.
Dawood Ibrahim's close aide Chhota Shakeel confirmed that the gangster is alive and healthy in an exclusive conversation with CNN-New18. “Dawood is alive and healthy. Even I was shocked to see this fake news. I met him multiple times yesterday," he said.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm