ಬ್ರೇಕಿಂಗ್ ನ್ಯೂಸ್
15-12-23 10:44 pm HK News Desk ದೇಶ - ವಿದೇಶ
ನವದೆಹಲಿ, ಡಿ.15: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ದಾಳಿ ಎಸಗಿದ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಎನ್ನಲಾದ ಲಲಿತಾ ಝಾನನ್ನು ಗುರುವಾರ ರಾತ್ರಿ ದೆಹಲಿಯಲ್ಲಿ ಬಂಧಿಸಲಾಗಿದ್ದು, ಪಾಟಿಯಾಲ ಕೋರ್ಟ್ ಆತನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದ ಲಲಿತಾ ಝಾ ರಾಜಸ್ಥಾನ, ಹರ್ಯಾಣ ಗಡಿ ತಲುಪಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಗುರುವಾರ ರಾತ್ರಿ ಕರ್ತವ್ಯ ಪಥ್ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದ. ಆತನ ಜೊತೆಗಿದ್ದ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಸಂಸತ್ ಒಳಗೆ ಭದ್ರತೆ ಉಲ್ಲಂಘಿಸಿ ಸ್ಮೋಕ್ ದಾಳಿ ನಡೆಸಿದ್ದನ್ನು ಭಯೋತ್ಪಾದಕ ಕೃತ್ಯವೆಂದೇ ಭಾವಿಸಲಾಗಿದ್ದು, ಪೊಲೀಸರು ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಸಂಸತ್ತಿನ ಹೊರಗೆ ಬಣ್ಣದ ಹೊಗೆ ಹಾರಿಸುತ್ತ ಪ್ರತಿಭಟನೆ ನಡೆಸಿದ್ದನ್ನು ದೂರದಲ್ಲಿ ನಿಂತಿದ್ದ ಲಲಿತ್ ಝಾ ತನ್ನ ಮೊಬೈಲ್ ಫೋನಲ್ಲಿ ಚಿತ್ರೀಕರಿಸಿದ್ದ. ಅಲ್ಲದೆ, ನಾಲ್ವರು ಆರೋಪಿಗಳ ಫೋನನ್ನು ತಾನೇ ಇರಿಸಿಕೊಂಡಿದ್ದು, ಆನಂತರ ಅಲ್ಲಿಂದ ಪರಾರಿಯಾಗಿದ್ದ. ಆ ಫೋನ್ ಗಳನ್ನು ರಾಜಸ್ಥಾನ ಗಡಿಯಲ್ಲಿ ಬಿಸಾಡಿದ್ದಾನೆ ಎನ್ನಲಾಗುತ್ತಿದ್ದು, ಪೊಲೀಸರು ಇನ್ನೂ ಮೊಬೈಲ್ ಪತ್ತೆ ಮಾಡಿಲ್ಲ. ಬುಧವಾರ ಘಟನೆ ನಡೆದ ಬೆನ್ನಲ್ಲೇ ರಾಜಸ್ಥಾನಕ್ಕೆ ತೆರಳಿದ್ದ ಲಲಿತ್ ಝಾ ಅಲ್ಲಿನ ಕಛ್ ಮನ್ ಎನ್ನುವ ಪ್ರದೇಶದಲ್ಲಿ ಮಹೇಶ್ ಎನ್ನುವಾತನ ಸಹಾಯ ಪಡೆದು ಅಂದು ರಾತ್ರಿ ಕಳೆದಿದ್ದ.
ಆರೋಪಿಗಳು ಸಂಸತ್ತಿಗೆ ಬರುವುದಕ್ಕೂ ಮುನ್ನ ಹರ್ಯಾಣದ ಗುರುಗಾಂವ್ ನಗರದಲ್ಲಿ ವಿಶಾಲ್ ಶರ್ಮಾ ಅಲಿಯಾಸ್ ವಿಕ್ಕಿ ಎಂಬಾತನ ಮನೆಯಲ್ಲಿ ಉಳಿದುಕೊಂಡಿದ್ದರು. ಸದ್ಯಕ್ಕೆ ಆ ಮನೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲ ಏಳು ಮಂದಿಯನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಒಂದೇ ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಇವರು ಎಲ್ಲವನ್ನೂ ಭಾರೀ ಪೂರ್ವ ನಿಯೋಜಿತವಾಗಿ ಮಾಡಿದ್ದಾರೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಅಲ್ಲದೆ, ಪೊಲೀಸರ ಬಂಧನಕ್ಕೊಳಗಾದ ವೇಳೆ ಯಾವ ರೀತಿಯ ಉತ್ತರ ನೀಡಬೇಕು ಎಂಬ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಸಿರುವಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳೆಲ್ಲರ ಐಡಿಯಾಲಜಿ ಒಂದೇ ರೀತಿ ಇದೆ. ದೇಶದ ಗಮನ ಸೆಳೆಯಬೇಕು ಮತ್ತು ಸರಕಾರಕ್ಕೆ ಉತ್ತಮ ಸಂದೇಶ ನೀಡಬೇಕು ಎನ್ನುವ ಗುರಿಯನ್ನು ಹೊಂದಿದ್ದರು. ಪೊಲೀಸರ ವಿಚಾರಣೆಯಲ್ಲಿ ದೇಶದಲ್ಲಿ ರೈತರ ಸಮಸ್ಯೆ, ಮಣಿಪುರದಲ್ಲಿ ಹಿಂಸಾಚಾರ ನಿರ್ಲಕ್ಷ್ಯ, ನಿರುದ್ಯೋಗ ಹೆಚ್ಚಳ ವಿಚಾರದಲ್ಲಿ ಸಂಸದರು ಮತ್ತು ಸರಕಾರದ ಗಮನಸೆಳೆಯುವ ಉದ್ದೇಶ ಹೊಂದಿದ್ದಾರೆ. ಇವರೆಲ್ಲ ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎನ್ನುವ ಫೇಸ್ಬುಕ್ ಪೇಜ್ ನಲ್ಲಿ ಜೊತೆಯಾಗಿದ್ದರು.
ಎರಡು ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವ ಬಗ್ಗೆ ಮೇಲ್ನೋಟಕ್ಕೆ ಸಂಶಯ ಇದೆ. ಆದರೆ, ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಇವರ ಪಾತ್ರದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಯಾವುದೇ ಉಗ್ರವಾದಿ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವುದು ಈವರೆಗಿನ ತನಿಖೆಯಲ್ಲಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Lalit Mohan Jha, the mastermind behind the Parliament security breach conspiracy case, was arrested by the Delhi Police after he reportedly surrendered before the Kartavya Path Police station on Thursday evening.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm