Election Victory, Indias BJP leads: ಉತ್ತರದಲ್ಲಿ ಬಿಜೆಪಿ ಅಧಿಪತ್ಯ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಕೇಸರಿ ಜಯಭೇರಿ, ತೆಲಂಗಾಣದಲ್ಲಿ ಕೆಸಿಆರ್ ಸಾಮ್ರಾಜ್ಯ ಅಂತ್ಯ, ಕಾಂಗ್ರೆಸ್ ಗ್ಯಾರಂಟಿಗೆ ಬಹುಮತ   

03-12-23 04:23 pm       HK News Desk   ದೇಶ - ವಿದೇಶ

ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಉತ್ತರ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಪಡೆದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ನವದೆಹಲಿ, ಡಿ.3: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಉತ್ತರ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಪಡೆದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿಯುವತ್ತ ಸಾಗಿದೆ.

ಮಧ್ಯಪ್ರದೇಶದಲ್ಲಿ 18 ವರ್ಷಗಳ ಬಳಿಕ ಮೂರನೇ ಒಂದರಷ್ಟು ಸ್ಥಾನಗಳನ್ನು ಪಡೆದು ಅಭೂತಪೂರ್ವ ಗೆಲುವು ಕಂಡಿದೆ. 230 ಸ್ಥಾನಗಳ ಪೈಕಿ ಬಿಜೆಪಿ 163 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಬಹುತೇಕ ಇಡೀ ರಾಜ್ಯದಲ್ಲಿ ಕಮಲ ಜಯಭೇರಿ ಬಾರಿಸಿದೆ. ಮಧ್ಯಾಹ್ನ ಮೂರು ಗಂಟೆ ವೇಳೆಗೆ, ಈ ಪೈಕಿ 145 ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಸದಸ್ಯರು ಗೆದ್ದಿದ್ದಾರೆ. ಕಾಂಗ್ರೆಸ್ ಇಲ್ಲಿ ಕೇವಲ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಮೂಲಕ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ 18 ವರ್ಷಗಳ ಬಳಿಕವೂ ನಾಲ್ಕನೇ ಬಾರಿಗೆ ಜನರು ಮತ ನೀಡಿದ್ದಾರೆ.

Rajasthan Election Result 2023 LIVE: BJP crosses majority mark as party  looks to oust Congress - India Today

ರಾಜಸ್ಥಾನದಲ್ಲಿ ಜನರು ಅದಲು ಬದಲು ಮಾಡುವ ತಮ್ಮ ತೀರ್ಪನ್ನು ಈ ಬಾರಿಯೂ ಜಾರಿಗೊಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸನ್ನು ಧೂಳೀಪಟ ಮಾಡಿದ್ದು 116 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ ಸದಸ್ಯರು 68 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದಾರೆ. ಬಿಎಸ್ಪಿ ಎರಡು, ಇತರರು 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜಸ್ಥಾನದಲ್ಲಿ ಕಳೆದ 25 ವರ್ಷಗಳಿಂದಲೂ ಪ್ರತಿ ಐದು ವರ್ಷಕ್ಕೊಮ್ಮೆ ಜನರು ಅದಲು ಬದಲಿನ ತೀರ್ಪು ನೀಡಿದ್ದಾರೆ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವುದು ಪ್ರತಿ ಬಾರಿಯಂತೆ ಈ ಬಾರಿಯೂ ಸಾಬೀತಾಗಿದೆ. ಮೂರು ಬಾರಿಯ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬಾರಿ ಅಧಿಕಾರ ಕಳಕೊಂಡಿದ್ದಾರೆ. ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಹೊಯ್ದಾಟ ಕಾಂಗ್ರೆಸ್ ಪಾಲಿಗೆ ಮುಳುವಾಗಿದೆ.

Election result in Karnataka will be repeated in Telangana: Congress' Reddy

ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹತ್ತು ವರ್ಷಗಳ ಅಧಿಪತ್ಯ ಕೊನೆಗೊಂಡಿದೆ. ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸ್ಪಷ್ಟ ಬಹುಮತ ಗಳಿಸಿದೆ. ಜಮೀರ್ ಅಹ್ಮದ್ ಖಾನ್ ಹೇಳಿಕೆಯಂತೆ ಮುಸ್ಲಿಮರು ಕಾಂಗ್ರೆಸ್ ಕೈಹಿಡಿದಿರುವುದು ಸ್ಪಷ್ಟವಾಗಿದೆ. ಚಂದ್ರಶೇಖರ್ ರಾವ್ ಅವರ ಬಿಆರ್ ಎಸ್ 40 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 8, ಎಂಐಎಂ 6 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ತೆಲಂಗಾಣದಲ್ಲಿ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಒಂದೂ ಸ್ಥಾನ ಪಡೆದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಭರವಸೆ ಮೂಡಿಸಿದ್ದ ಕಲ್ಯಾಣ್ ಪಕ್ಷಕ್ಕೆ ಮುಖಭಂಗ ಎದುರಾಗಿದೆ.

Chhattisgarh Election Result Live:राजनांदगांव की खुज्जी सीट पर आया पहला  नतीजा, कांग्रेस प्रत्याशी की जीत - Chhattisgarh Election Result 2023 Vote  Counting Update Facing Tough Competition In ...

ಛತ್ತೀಸ್ಗಢದಲ್ಲಿ ಅಧಿಕಾರ ರೂಢ ಕಾಂಗ್ರೆಸಿನ ಬಾಘೇಲ್ ಸರಕಾರ ಪತನಗೊಂಡಿದೆ. ಬಿಜೆಪಿ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ 35 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು ಸದಸ್ಯ ಬಲದಲ್ಲಿ ಮ್ಯಾಜಿಕ್ ನಂಬರ್ ಮೀರಿ ಬಿಜೆಪಿ ಸ್ಥಾನಗಳನ್ನು ಗಳಿಸಿದ್ದು, ಮತ್ತೆ ರಮಣ್ ಸಿಂಗ್ ಅಧಿಕಾರ ಹಿಡಿಯುವುದು ಖಾತ್ರಿಯಾಗಿದೆ.

India’s governing right-wing Bharatiya Janata Party (BJP) is leading in three of four states in key regional polls, indicating a big boost to Prime Minister Narendra Modi ahead of the general elections slated to be held within six months. The heartland states of Rajasthan, Madhya Pradesh, Chhattisgarh, southern state of Telangana and northeastern Mizoram state voted last month in the provincial elections.