CAA Law of Country, Amit Shah, Mamata Banerjee: ದೇಶದಲ್ಲಿ ಸಿಎಎ ಕಾಯ್ದೆ ಜಾರಿ ಖಚಿತ, ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ; ಅಮಿತ್ ಷಾ ಘೋಷಣೆ

29-11-23 09:26 pm       HK News Desk   ದೇಶ - ವಿದೇಶ

2019ರಲ್ಲಿ ದೇಶಾದ್ಯಂತ ಭಾರೀ ವಿವಾದಕ್ಕೆ ಈಡಾಗಿದ್ದ ಸಿಎಎ ತಿದ್ದುಪಡಿ ಕಾಯ್ದೆ ಬಗ್ಗೆ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ್ದಾರೆ.

ನವದೆಹಲಿ, ನ.29: 2019ರಲ್ಲಿ ದೇಶಾದ್ಯಂತ ಭಾರೀ ವಿವಾದಕ್ಕೆ ಈಡಾಗಿದ್ದ ಸಿಎಎ ತಿದ್ದುಪಡಿ ಕಾಯ್ದೆ ಬಗ್ಗೆ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ್ದಾರೆ. ಸಿಎಎ ಕಾಯ್ದೆ ಈ ದೇಶದ ಕಾನೂನು, ಅದನ್ನು ಜಾರಿಗೊಳಿಸುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈ ಹೇಳಿಕೆ ನೀಡಿರುವ ಅಮಿತ್ ಷಾ, ಮಮತಾ ಬ್ಯಾನರ್ಜಿ ಅವರಿಗೆ ಗಡಿಭಾಗದಲ್ಲಿ ನುಸುಳುಕೋರರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರಿಗೆ ವೋಟರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಬಹಿರಂಗವಾಗಿಯೇ ವಿತರಣೆ ಮಾಡಲಾಗುತ್ತಿದೆ. ಆದರೆ ಮಮತಾಜೀ ಇದನ್ನೆಲ್ಲ ಸುಮ್ಮನೆ ಕುಳಿತುಕೊಂಡು ನೋಡುತ್ತಿದ್ದಾರೆ. ಇದನ್ನೆಲ್ಲ ಬರೀ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಮತಾಜೀ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Mamata Banerjee News: Mamata Banerjee urges judiciary “not to take people's  jobs" - The Economic Times

ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಅಕ್ರಮ ನುಸುಳುಕೋರರಿಗೆ ಬೆಂಬಲ ನೀಡುವುದಕ್ಕಾಗಿಯೇ ಇಂತಹ ಅಕ್ರಮಕ್ಕೆ ಮಮತಾ ಬೆಂಬಲ ನೀಡುತ್ತಿದ್ದಾರೆ. ಅಸ್ಸಾಮ್ ನಲ್ಲಿ ಗಡಿಭಾಗದಲ್ಲಿ ನುಸುಳಿ ಬರುವುದನ್ನು ನಿಲ್ಲಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಯಾಕೆ ಸಾಧ್ಯವಾಗಲ್ಲ ಎಂದು ಪ್ರಶ್ನಿಸಿದ್ದಾರೆ. ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಮತಾಜೀ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಸಿಎಎ ಈ ದೇಶದಲ್ಲಿ ಜಾರಿಯಾಗೋದು ಖಚಿತ. ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

2019ರ ಡಿಸೆಂಬರ್ ತಿಂಗಳಲ್ಲಿ ಸಿಎಎ ತಿದ್ದುಪಡಿ ಕಾಯ್ದೆ ಮಸೂದೆಯನ್ನು ತರಲಾಗಿತ್ತು. ಆದರೆ, ಈ ಕಾಯ್ದೆ ಇನ್ನೂ ದೇಶದಲ್ಲಿ ಜಾರಿಗೆ ಬಂದಿಲ್ಲ. ಕಾಯ್ದೆ ಹೇಗಿರುತ್ತೆ, ಅದರಲ್ಲಿ ಏನೇನಿರುತ್ತೆ ಅನ್ನುವ ಬಗ್ಗೆ ಗೃಹ ಸಚಿವಾಲಯ ನೋಟಿಫಿಕೇಶನ್ ಹೊರಡಿಸಿಲ್ಲ. ದೇಶಾದ್ಯಂತ ಈ ಕಾನೂನು ಬಗ್ಗೆ ಮುಸ್ಲಿಮರಿಂದ ವಿರೋಧ ವ್ಯಕ್ತವಾಗಿದ್ದರಿಂದ ಒಟ್ಟು ಪ್ರಕ್ರಿಯೆ ಪೆಂಡಿಂಗ್ ಮಾಡಲಾಗಿತ್ತು. ಸಿಎಎ ಕಾಯ್ದೆ ಪ್ರಕಾರ, ನೆರೆದೇಶಗಳಾದ ಪಾಕಿಸ್ಥಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶದಿಂದ 2014 ಡಿಸೆಂಬರ್ 31ರ ಒಳಗೆ ಭಾರತಕ್ಕೆ ಬಂದಿರುವ ಹಿಂದು, ಸಿಖ್, ಪಾರ್ಸಿ, ಕ್ರಿಸ್ತಿಯನ್, ಬುದ್ಧರು ಮತ್ತು ಜೈನರಿಗೆ ಯಾವುದೇ ದಾಖಲಾತಿ ಇಲ್ಲದೆ ನಾಗರಿಕತ್ವ ನೀಡುತ್ತದೆ.

ತನ್ನ ದೇಶದಲ್ಲಿ ಮತ, ಧರ್ಮದ ಕಾರಣಕ್ಕೆ ಪೀಡನೆ ಎದುರಿಸಿ, 2014ರ ಮೊದಲು ಭಾರತಕ್ಕೆ ಬಂದಿರುವ ಪ್ರಜೆಗಳಿಗೆ ತ್ವರಿತ ಗತಿಯಲ್ಲಿ ನಾಗರಿಕತ್ವ ನೀಡುವ ಪ್ರಸ್ತಾಪ ಸಿಎಎ ಕಾಯ್ದೆಯಲ್ಲಿದೆ. ಆದರೆ ಈ ಕಾಯ್ದೆ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಡೀ ರಾಜ್ಯದಲ್ಲಿ ಭಾರೀ ಪ್ರತಿಭಟನೆ ಎದುರಾಗಿತ್ತು.

No one can stop the implementation of CAA," Shah declared. Amit Shah accused Mamata Banerjee of destroying the state and unleashed a blistering attack on the Trinamool government over the issues of appeasement, corruption and political violence