ಕೇರಳ ಕಿಡ್ನಾಪ್ ಕೇಸ್ ; ಪೋಲೀಸರ 21 ಗಂಟೆಗಳ ಸತತ ಹುಡುಕಾಟದ ಬಳಿಕ ಬಿಗ್ ರಿಲೀಫ್, ಆಶ್ರಮದ ಮೈದಾನದಲ್ಲಿ ಪತ್ತೆಯಾದ ಬಾಲಕಿ

28-11-23 05:47 pm       HK News Desk   ದೇಶ - ವಿದೇಶ

ಒಂದು ದಿನದ ಹಿಂದೆ ದಕ್ಷಿಣ ಕೇರಳದ ಪುಯಪ್ಪಳ್ಳಿಯಿಂದ ಆರು ವರ್ಷದ ಬಾಲಕಿ ಅಬಿಗೇಲ್ ಸಾರಾ ರೆಜಿಯನ್ನು ಅಪಹರಿಸಿದ 21 ಗಂಟೆಗಳ ನಂತರ, ಮಗು ಮಂಗಳವಾರ ಮಧ್ಯಾಹ್ನ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ಪತ್ತೆಯಾಗಿದೆ.

ಕೇರಳ, ನ 28: ಒಂದು ದಿನದ ಹಿಂದೆ ದಕ್ಷಿಣ ಕೇರಳದ ಪುಯಪ್ಪಳ್ಳಿಯಿಂದ ಆರು ವರ್ಷದ ಬಾಲಕಿ ಅಬಿಗೇಲ್ ಸಾರಾ ರೆಜಿಯನ್ನು ಅಪಹರಿಸಿದ 21 ಗಂಟೆಗಳ ನಂತರ, ಮಗು ಮಂಗಳವಾರ ಮಧ್ಯಾಹ್ನ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ಪತ್ತೆಯಾಗಿದೆ. ಅಪಹರಣಕಾರರು ಬಾಲಕಿಯನ್ನು ಉಪೇಕ್ಷಿಸಿದ್ದು, ಆಕೆಯನ್ನು ಪೊಲೀಸರು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮಗು ಪತ್ತೆಯಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ಟ್ಯೂಷನ್‌ಗೆ ತೆರಳುತ್ತಿದ್ದಾಗ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲಕಿ ಪ್ರಕರಣವು ಸಾಕಷ್ಟು ಸದ್ದು ಮಾಡಿತ್ತು. ಸ್ವತಃ ಕೇರಳ ಮುಖ್ಯಮಂತ್ರಿಗಳೇ ಆಸಕ್ತಿ ತೋರಿ, ತ್ವರಿತ ಶೋಧಕ್ಕಾಗಿ ಪೊಲೀಸರಿಗೆ ಸೂಚನೆ ನೀಡಿದ್ದು ಫಲ ನೀಡಿದೆ. ಕಣ್ಮರೆಯಾದ 20 ಗಂಟೆಗಳ ಹುಡುಕಾಟದ ಬಳಿಕ ಕೇರಳ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿದ್ದಾರೆ.

ಅಪಹರಣಕ್ಕೆ ಒಳಗಾಗಿದ್ದ ಓಯೂರು ಮೂಲದ ಬಾಲಕಿ ಅಬಿಗೈಲ್ ಸಾರಾ ರೆಜಿ, ಕೊಲ್ಲಂನ ಆಶ್ರಮ ಮೈದಾನದಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಬಾಲಕಿಯರ ಪೋಷಕರು ಅಪಹರಣಕಾರರಿಂದ ಸುಲಿಗೆ ಕರೆ ಸ್ವೀಕರಿಸಿದ್ದು, ಬಾಲಕಿಯನ್ನು ಸುರಕ್ಷಿತವಾಗಿ ಹಿಂದಿರುಗಿಸಲು 10 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾರೆ. ಮಕ್ಕಳ ಪೋಷಕರು ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗಿದ್ದಾರೆ. ಅಪಹರಣದ ಕೆಲ ಗಂಟೆಗಳ ನಂತರ ಸ್ವತಃ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ತ್ವರಿತ ತನಿಖೆ ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

ಕರೆ ಬಂದ ಕೂಡಲೇ ಕೇರಳ ಪೊಲೀಸರು ಬಾಲಕಿಯ ಹುಡುಕಾಟವನ್ನು ತೀವ್ರಗೊಳಿಸಿದರು, ಕೊಲ್ಲಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನ ದಕ್ಷಿಣ ಜಿಲ್ಲೆಗಳ ಎಲ್ಲಾ ಪ್ರಮುಖ ಮತ್ತು ಚಿಕ್ಕ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಸೋಮವಾರ ಸಂಜೆ 4 ರಿಂದ 4.30 ರ ನಡುವೆ ಅಪಹರಣದ ಘಟನೆ ನಡೆದಿತ್ತು. ಬಾಲಕಿಯ ಎಂಟು ವರ್ಷದ ಸಹೋದರನ ಪ್ರಕಾರ, ಅಪಹರಣಕಾರರು ಬಿಳಿ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾರೆ. ಬಾಲಕಿಯ ಸಹೋದರ ತನ್ನ ಸಹೋದರಿಯನ್ನು ಉಳಿಸಲು ಪ್ರಯತ್ನಿಸುವಾಗ ಮೊಣಕಾಲುಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದರು.

ಆಶ್ರಮ ಮೈದಾನದಲ್ಲಿ ಮಗುವನ್ನು ಬಿಟ್ಟು ಹೋಗಿದ್ದ ಅಪಹರಣಕಾರರು ; 

ಆಶ್ರಮ ಮೈದಾನದಲ್ಲಿ ಸ್ಥಳೀಯರು ಮೊದಲು ಅಬಿಗೈಲ್ ಸಾರಾಳನ್ನು ನೋಡಿದ್ದಾರೆ. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ ಚಿತ್ರಗಳ ಮೂಲಕ ಮಗುವನ್ನು ಗುರುತಿಸಲಾಗಿದೆ. ಮಗುವನ್ನು ನೆಲದ ಮೇಲೆ ಕೂರಿಸಿದ ಬಳಿಕ ಜೊತೆಯಲ್ಲಿದ್ದ ಮಹಿಳೆ ಓಡಿ ಹೋಗುವುದನ್ನು ನೋಡಿದ್ದೇನೆ ಎಂದು ಮಗುವನ್ನು ಮೊದಲು ನೋಡಿದ ಯುವತಿ ಧನಂಜಯಾ ಹೇಳಿದ್ದಾರೆ. ಒಂದು ಮಗು ಮತ್ತು ಮಹಿಳೆ ಮಾತ್ರ ಅಲ್ಲಿದ್ದು, ಅವರೊಂದಿಗೆ ಯಾವುದೇ ಪುರುಷರು ಇರಲಿಲ್ಲ ಎಂದು ಕೊಲ್ಲಂನ ಎಸ್‌ಎನ್ ಕಾಲೇಜಿನ ವಿದ್ಯಾರ್ಥಿ ಧನಂಜಯಾ ಹೇಳಿದ್ದಾರೆ.

Kidnapped child rescued by Kerala Police ❤️❤️ Big Salute #keralapolice#kerala_kidnap_Child_Rescue pic.twitter.com/UqPcMIVi6O

— Shabeer Ali khan (@shebychathalloo) November 28, 2023

 

More than twenty hours after Abigail Sara Reji, a six-year-old child was abducted near her home at Oyoor in Kerala’s Kollam, the police found her from the Asramam Maidan in the city about 25 km away from her home on Tuesday, November 28.