ಬ್ರೇಕಿಂಗ್ ನ್ಯೂಸ್
25-11-23 07:12 pm HK News Desk ದೇಶ - ವಿದೇಶ
ನವದೆಹಲಿ, ನ.25: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಅಲ್ಲದೇ, ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ ಅಪರಾಧಿ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದೆಹಲಿಯಲ್ಲಿ 2008ರ ಸೆಪ್ಟೆಂಬರ್ 30ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ 15 ವರ್ಷಗಳ ಬಳಿಕ ತೀರ್ಪು ಹೊರ ಬಂದಿದೆ. ರವಿ ಕಪೂರ್, ಅಜಯ್ ಕುಮಾರ್, ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಮಲಿಕ್ ಎಂಬುವವರೇ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಅಕ್ಟೋಬರ್ 18ರಂದು ಸಾಕೇತ್ ನ್ಯಾಯಾಲಯವು ಈ ಎಲ್ಲ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು.
ಈ ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರದ ಕಠಿಣ ಕಾನೂನಾದ ಎಂಸಿಒಸಿಎ (ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಕಾಯ್ದೆ ಅಡಿ ಸೆಕ್ಷನ್ 3 (1) (i)ರ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು. ಈ ಪ್ರಕರಣದ ನಾಲ್ಕನೇ ಆರೋಪಿ ಅಜಯ್ ಸೇಥಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 411 ಮತ್ತು ಎಂಸಿಒಸಿಎಯ ಸೆಕ್ಷನ್ 3(2) ಮತ್ತು 3(5) ಅಡಿ ತಪ್ಪಿತಸ್ಥ ಎಂದು ಪ್ರಕಟಿಸಿತ್ತು.
ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ಹಿನ್ನೆಲೆ:ದೆಹಲಿಯಲ್ಲಿಟಿವಿ ಪತ್ರಕರ್ತೆಯಾಗಿದ್ದ ಸೌಮ್ಯಾ ವಿಶ್ವನಾಥನ್ 2008ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಐವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಸೌಮ್ಯಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಇದಾದ ಬಳಿಕ ಹಂತಕರು ತಮ್ಮ ಕೃತ್ಯ ಬಯಲಾಗದಂತೆ ಮಾಡಲು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.
ಅಂತೆಯೇ, ಆರಂಭದಲ್ಲಿ ಕಾರು ದುರಂತ ಎಂಬಂತೆ ಕಂಡುಬಂದಿತ್ತು. ಆದರೆ, ವಿಧಿವಿಜ್ಞಾನ ವರದಿಗಳಲ್ಲಿ ಸೌಮ್ಯಾ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿತ್ತು. ಇದರಿಂದ ಇದೊಂದು ಕೊಲೆ ಎಂದು ಸ್ಪಷ್ಟವಾಗಿ, ಇದರ ಆಧಾರದ ಮೇಲೆ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ತನಿಖೆಯ ಭಾಗವಾಗಿ ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಗಳ ಪರಿಶೀಲನೆಯಲ್ಲಿ ಸೌಮ್ಯಾ ಅವರನ್ನು ಕಾರೊಂದು ಹಿಂಬಾಲಿಸಿದ್ದು ಬಯಲಿಗೆ ಬಂದಿತ್ತು. ನಂತರ 2009ರಲ್ಲಿ ಪೊಲೀಸರು ರವಿ ಕಪೂರ್ ಮತ್ತು ಅಮಿತ್ ಶುಕ್ಲಾನನ್ನು ಬಂಧಿಸಿದ್ದರು. ಅದಾದ ಬಳಿಕ ತನಿಖೆಯು ಮಹತ್ವದ ತಿರುವು ಪಡೆದುಕೊಂಡು, ಈ ಇಬ್ಬರೂ ಇನ್ನೊಂದು ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದು ಪತ್ತೆಯಾಗಿತ್ತು. ಅಲ್ಲದೇ, ಎರಡೂ ಕೊಲೆಗಳಿಗೆ ಒಂದೇ ಕಾರನ್ನು ಬಳಸಿದ್ದು ಕಂಡು ಬಂದಿತ್ತು.
ಇದಾದ ಬಳಿಕ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 2010ರಲ್ಲಿ ಇತರ ಮೂವರು ಆರೋಪಿಗಳಾದ ಬಲ್ಜೀತ್ ಮಲಿಕ್, ಅಜಯ್ ಕುಮಾರ್ ಮತ್ತು ಅಜಯ್ ಸೇಥಿಯನ್ನು ಬಂಧಿಸಿ, ಐವರ ವಿರುದ್ಧ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. 2010ರ ನವೆಂಬರ್ 16ರಂದು ಸಾಕೇತ್ ನ್ಯಾಯಾಲಯದಲ್ಲಿ ವಿಚಾರಣೆಯು ಪ್ರಾರಂಭವಾಗಿತ್ತು. 2016ರ ಜುಲೈ 19ರಂದು ನ್ಯಾಯಾಲಯವು ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಕೊಲೆ ಕೇಸ್ ಭೇದಿಸಲು ಟ್ಯಾಟೂ ಸಹಾಯ
ಒಂದು ಟ್ಯಾಟೂ ಇಡೀ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಐಟಿ ಉದ್ಯೋಗಿ ಜಿಗಿಶಾ ಜೋಶ್ ಅವರನ್ನು 2009ರಲ್ಲಿ ಕೊಲೆ ಮಾಡಿದ್ದು, ಇವರ ಕೊಲೆ ಪ್ರಕರಣದ ತನಿಖೆ ನಡೆಸುವಾಗ ನಮಗೆ ಸೌಮ್ಯಾ ವಿಶ್ವನಾಥನ್ ಅವರ ಕೊಲೆ ಪ್ರಕರಣವನ್ನೂ ಭೇದಿಸಲು ಸಾಧ್ಯವಾಯಿತು. ಜಿಗಿಶಾ ಅವರ ಶವವು ಫರೀದಾಬಾದ್ನ ಸೂರಜ್ ಕುಂಡ್ ಪ್ರದೇಶದಲ್ಲಿ ಸಿಕ್ಕ ಮೂರು ದಿನಗಳ ಬಳಿಕ ಪ್ರಕರಣವನ್ನು ಭೇದಿಸಲಾಯಿತು. ಸಿಸಿಟಿವಿ ದೃಶ್ಯಾವಳಿಯೊಂದು ನಮಗೆ ಸಿಕ್ಕಿತು. ಅದರಲ್ಲಿ ಒಬ್ಬ ಆರೋಪಿಯು ತನ್ನ ಕೈ ಮೇಲೆ ತನ್ನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು, ಮತ್ತೊಬ್ಬನು ಪೊಲೀಸರಿಂದ ಕದ್ದ ವೈರ್ಲೆಸ್ ಸೆಟ್ ಹಿಡಿದುಕೊಂಡಿದ್ದ. ಒಬ್ಬ ಆರೋಪಿಯು ಟ್ಯಾಟೂ ಹಾಕಿಸಿಕೊಂಡು, ಜಿಗಿಶಾ ಡೆಬಿಟ್ ಕಾರ್ಡ್ ಬಳಸುತ್ತಿದ್ದ ದೃಶ್ಯದ ಆಧಾರದ ಮೇಲೆ ತನಿಖೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್ ಕೊಲೆಯನ್ನೂ ಇವರೇ ಮಾಡಿದ್ದು ಎಂಬುದು ಗೊತ್ತಾಯಿತು” ಎಂದು ತನಿಖಾಧಿಕಾರಿ ಅತುಲ್ ಕುಮಾರ್ ವರ್ಮಾ ತಿಳಿಸಿದ್ದಾರೆ
ಬಲ್ಜಿತ್ ಮಲ್ಲಿಕ್ ತನ್ನ ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಇದಾದ ಬಳಿಕ ಮತ್ತೊಂದು ಪೊಲೀಸ್ ತಂಡವನ್ನು ತನಿಖೆಗೆ ರಚಿಸಲಾಯಿತು. ಐವರೂ ದೋಷಿಗಳು ಸೌಮ್ಯಾ ವಿಶ್ವನಾಥನ್ ಅವರ ಕಾರನ್ನು ಹಿಂಬಾಲಿಸಿ, ಕೊಲೆ ಮಾಡಿದ್ದರು. ಈ ಕುರಿತು ಫೊರೆನ್ಸಿಕ್ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು ನಮಗೆ ನಿಜವಾಗಿಯೂ ಸವಾಲಾಯಿತು. ಆದರೂ ಪ್ರಕರಣವನ್ನು ಭೇದಿಸಿದೆವು” ಎಂದಿದ್ದಾರೆ.
A court here on Saturday sentenced four convicts to life imprisonment for killing TV journalist Soumya Vishwanathan in 2008 while the fifth convict was sent to three years in jail. While sentencing Ravi Kapoor, Amit Shukla, Baljeet Malik and Ajay Kumar to life imprisonment, the court of Additional Sessions Judge Ravindra Kumar Pandey also imposed a fine of Rs 1.25 lakh on each of them.
28-03-25 10:47 pm
Bangalore Correspondent
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
28-03-25 04:15 pm
HK News Desk
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
28-03-25 11:16 pm
Udupi Correspondent
Mangalore University, Rajendra Kumar, Rohan M...
28-03-25 07:38 pm
Cow Transport, Kaikamba, Bajrang Dal, Mangalo...
28-03-25 11:52 am
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
28-03-25 09:25 pm
Mangalore Correspondent
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm
Bangalore Murder, Techie: ಮುದ್ದಾದ ಪತ್ನಿಯನ್ನು...
28-03-25 06:12 pm
Kodagu Murder, Four Killed: ಕೊಡಗು ; ಅತ್ತೆ - ಮ...
28-03-25 05:41 pm
CISF Arrest, Robbery, Kolkata: ಐಟಿ ಅಧಿಕಾರಿಗಳ...
27-03-25 01:37 pm