ಮುಂಬೈ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಇ–ಮೇಲ್ ಮೂಲಕ ಬೆದರಿಕೆ ; ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ರೂ. ಡಿಮ್ಯಾಂಡ್, ಪೋಲೀಸರು ಹೈ ಅಲರ್ಟ್

24-11-23 03:14 pm       HK News Desk   ದೇಶ - ವಿದೇಶ

ಬಿಟ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ರೂಪದಲ್ಲಿ 10 ಲಕ್ಷ ಡಾಲರ್‌ ಅಂದ್ರೆ 8.33 ಕೋಟಿ ರೂ. ಪಾವತಿಸದಿದ್ದರೇ ಮುಂಬೈ ಏರ್ಪೋರ್ಟ್ ಟರ್ಮಿನಲ್‌ 2 ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ನೀಡಲಾಗಿದೆ.

ಮುಂಬೈ, ನ 24: ಬಿಟ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ರೂಪದಲ್ಲಿ 10 ಲಕ್ಷ ಡಾಲರ್‌ ಅಂದ್ರೆ 8.33 ಕೋಟಿ ರೂ. ಪಾವತಿಸದಿದ್ದರೇ ಮುಂಬೈ ಏರ್ಪೋರ್ಟ್ ಟರ್ಮಿನಲ್‌ 2 ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ನೀಡಲಾಗಿದೆ.

ಇ-ಮೇಲ್‌ ಬೆದರಿಕೆ ಕಳುಹಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ quaidacasrol@gmail.ಕಂ ನಿಂದ ಬೆದರಿಕೆ ಇಮೇಲ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ

ನಿಮ್ಮ ವಿಮಾನ ನಿಲ್ದಾಣಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ. 10 ಲಕ್ಷ ಡಾಲರ್‌ ಅನ್ನು ಬಿಟ್‌ಕಾಯಿನ್‌ ರೂಪದಲ್ಲಿ ಪಾವತಿಸದೇ ಇದ್ದರೇ 48 ಗಂಟೆಗಳ ಒಳಗೆ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಬಾಂಬ್‌ ಹಾಕಿ ಉಡಾಯಿಸುತ್ತೇವೆ. 24 ಗಂಟೆಗಳ ನಂತರ ಮತ್ತೊಂದು ಎಚ್ಚರಿಕೆ ನೀಡಲಾಗುವುದು ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಬೆದರಿಕೆಯ ಇಮೇಲ್‌ ಬರುತ್ತಿದ್ದಂತೆ ಮುಂಬೈ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ. ಇಮೇಲ್‌ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಹಿಂದೆ ಸೆಪ್ಟೆಂಬರ್‌ 5 ರಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕಾಮತಿಪುರದಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು.

The Mumbai International Airport on Thursday received a "threat" email to blow up its Terminal 2, police said. The sender of the email has demanded USD 1 million in Bitcoin within 48 hours to avert the blast.