ಬ್ರೇಕಿಂಗ್ ನ್ಯೂಸ್
21-11-23 09:10 pm HK News Desk ದೇಶ - ವಿದೇಶ
ನವದೆಹಲಿ, ನ.21: ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಟ್ಟಗಳ ಮಧ್ಯೆ ಸುರಂಗ ಕೊರೆಯುವ ಸಂದರ್ಭ ಬೃಹತ್ ಬಂಡೆ ಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಕ್ಕಿಬಿದ್ದವರನ್ನು ಹತ್ತನೇ ದಿನದ ಕಾರ್ಯಾಚರಣೆಯಲ್ಲಿ ಪತ್ತೆ ಮಾಡಲಾಗಿದೆ. ಸಿಕ್ಕಿಬಿದ್ದಿರುವ ಎಲ್ಲ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಬೆಟ್ಟದ ಮೇಲಿನಿಂದ ಲಂಬವಾಗಿ ಆರು ಇಂಚು ವ್ಯಾಸದಲ್ಲಿ 57 ಮೀಟರ್ ಆಳಕ್ಕೆ ರಂಧ್ರ ಕೊರೆಯಲಾಗಿದ್ದು, ಸುರಂಗದ ಒಳಗೆ ಸಿಕ್ಕಿಬಿದ್ದವರ ಜೊತೆ ಸಂಪರ್ಕ ಸಾಧಿಸಲಾಗಿದೆ. ಅಲ್ಲದೆ, ಮೊದಲ ಬಾರಿಗೆ ಅವರ ವಿಡಿಯೋಗಳನ್ನು ಚಿತ್ರೀಕರಿಸಲಾಗಿದ್ದು ಒಳಭಾಗದಲ್ಲಿ ಎರಡು ಕಿಮೀ ಉದ್ದಕ್ಕೆ ಸುರಂಗ ಮಾರ್ಗ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಳಿ ಮತ್ತು ನೀರು ಇರುವುದರಿಂದ ಉಳಿದುಕೊಂಡಿದ್ದೇವೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರ್ ಮತ್ತು ಬಾರ್ಕೋಟ್ ಮಧ್ಯೆ 3.5 ಕಿಮೀ ಉದ್ದಕ್ಕೆ ಸುರಂಗ ಕೊರೆಯಲಾಗುತ್ತಿದ್ದು, ನಡುವಿನ ಎರಡು ಕಿಮೀ ಅಂತರದಲ್ಲಿ 70 ಮೀಟರ್ ಉದ್ದಕ್ಕೆ ಬೃಹತ್ ಬಂಡೆಯೊಂದು ಕುಸಿದು ಬಿದ್ದಿದೆ. ನ.14ರಂದು ಘಟನೆ ನಡೆದಿದ್ದು, ಸುರಂಗದ ಒಳಗೆ ಕೆಲಸ ಮಾಡುತ್ತಿದ್ದ 41 ಮಂದಿ ಕಾರ್ಮಿಕರು ಒಳಭಾಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಸಮಾನಾಂತರವಾಗಿ ಬಂಡೆ ಕೊರೆಯುವ ಯತ್ನ ವಿಫಲವಾಗಿದ್ದರಿಂದ ಅಮೆರಿಕದಿಂದ ಬಂದಿದ್ದ ತಜ್ಞರು ಮೇಲ್ಭಾಗದಿಂದ ಪೈಪ್ ಮೂಲಕ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ಭೇಟಿ ಕೊಟ್ಟಿದ್ದು ಒಟ್ಟು ಕಾಮಗಾರಿಯನ್ನು ಪ್ರಧಾನಿ ಕಾರ್ಯಾಲಯದಿಂದಲೇ ನಿಗಾ ವಹಿಸಲಾಗಿದೆ.
ಸ್ಥಳದಲ್ಲಿ ಸೇನೆ, ಎನ್ ಡಿಆರ್ ಎಫ್ ಸೇರಿದಂತೆ ರಕ್ಷಣಾ ತಂಡ ನಾನಾ ರೀತಿಯಲ್ಲಿ ಕಾರ್ಯಾಚರಣೆ ನಿರತವಾಗಿದೆ. ಆದರೆ, ಸತತ ಪ್ರಯತ್ನದ ನಡುವೆಯೂ ಬೆಟ್ಟದ ಅಡಿಭಾಗದಲ್ಲಿ ಸಿಕ್ಕಿಬಿದ್ದಿರುವ ಜಾಗಕ್ಕೆ ತಲುಪುವುದಾಗಲೀ, ಸಂಪರ್ಕ ಸಾಧಿಸುವುದಾಗಲೀ ಸಾಧ್ಯವಾಗಿರಲಿಲ್ಲ. ಒಳಭಾಗದಲ್ಲಿ ಕರೆಂಟ್ ವ್ಯವಸ್ಥೆ ಇರುವುದರಿಂದ ಫೋನ್ ಸಂಪರ್ಕ ಇತ್ತು. ಒಳಭಾಗಕ್ಕೆ ಆಹಾರ ಪೂರೈಕೆ ಸಾಧ್ಯವಾಗದೆ ಸಮಸ್ಯೆ ಆಗಿತ್ತು. ವೈದ್ಯರ ತಂಡವೂ ಸ್ಥಳದಲ್ಲಿದ್ದು, ಒಳಭಾಗದಲ್ಲಿ ಸಿಕ್ಕಿಬಿದ್ದವರನ್ನು ಸದಾ ಚಟುವಟಿಕೆಯಿಂದ ಇರುವಂತೆ ಸೂಚನೆ ನೀಡುತ್ತಿದ್ದಾರೆ. ಯೋಗ, ನಡಿಗೆ, ಇನ್ನಿತರ ವ್ಯಾಯಾಮದ ಮೂಲಕ ದೈಹಿಕ ಚಟುವಟಿಕೆಯಲ್ಲಿ ಇರುವಂತೆ ಸೂಚಿಸಿದ್ದಾರೆ. ಒಳಭಾಗದಲ್ಲಿ ಸೂರ್ಯನ ಬೆಳಕು ಇಲ್ಲದೇ ಇರುವುದು ಮತ್ತು ಯಥಾವತ್ ಆಹಾರ ಪೂರೈಕೆ ಇಲ್ಲದಿರುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯರು ನಿಗಾ ಇಟ್ಟಿದ್ದಾರೆ.
ಪೈಪ್ ಸಂಪರ್ಕ ಸಾಧ್ಯವಾದ ಕೂಡಲೇ ಅವರಿಗೆ ಒಣ ಹಣ್ಣುಗಳು, ದ್ರವಾಹಾರ, ಇನ್ನಿತರ ಒಣ ಬೀಜಗಳನ್ನು ಕಳಿಸಿಕೊಡಲಾಗುತ್ತಿದೆ. ಅಲ್ಲದೆ, 41 ಮಂದಿ ಕಾರ್ಮಿಕರ ಕುಟುಂಬಸ್ಥರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಆತಂಕದಲ್ಲಿದ್ದವರು ದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಕಾರ್ಮಿಕರ ಜೊತೆ ಕುಟುಂಬಸ್ಥರು ವಾಕಿ ಟಾಕಿಯಲ್ಲಿ ಮಾತನಾಡಿದ್ದಾರೆ. ಒಳಭಾಗದಲ್ಲಿ ಕರೆಂಟ್ ವ್ಯವಸ್ಥೆ ಮಾಡಿದ್ದು, ಒಳಭಾಗದ ವಿಡಿಯೋ ಚಿತ್ರಣವನ್ನು ಕಳಿಸಿಕೊಟ್ಟಿದ್ದಾರೆ. ಆದರೆ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಸಮಾನಾಂತರ ರೂಪದಲ್ಲಿಯೇ ಸುರಂಗವನ್ನು ಕೊರೆಯುತ್ತ ಸಾಗಬೇಕಿದೆ ಎಂದು ವಿದೇಶಿ ತಜ್ಞರು ತಿಳಿಸಿದ್ದಾರೆ. ಇದಕ್ಕಾಗಿ ಅತ್ಯಾಧುನಿಕ ಯಂತ್ರಗಳು, ಕೊರೆಯುವ ಸಾಧನಗಳನ್ನು ತರಲಾಗಿದೆ. ಬೃಹತ್ ಬಂಡೆ ಅಡ್ಡಲಾಗಿ ಬಿದ್ದಿರುವುದರಿಂದ ಅದನ್ನು ತುಂಡರಿಸುವುದಾಗಲೀ, ಒಡೆಯುವುದಾಗಲೀ ಸಾಧ್ಯವಾಗುತ್ತಿಲ್ಲ. ಕಾರ್ಮಿಕರನ್ನು ರಕ್ಷಿಸಿ ಹೊರಗೆ ಕರೆತರಲು ಬಂಡೆ ಕಡಿಯುವುದೇ ರಕ್ಷಣಾ ತಂಡಕ್ಕೆ ಸವಾಲಾಗಿದೆ.
After a series of setbacks, Tuesday, which was the 10th day since the workers were trapped following the tunnel collapse in Uttarkashi, brought in some good news. Besides the workers appearing on camera for the first time since being trapped, Lt Gen Syed Ata Hasnain, a member of the National Disaster Management Authority, said that there was sufficient water and oxygen inside and ample space for them to move around, coming as a relief for the family members anxiously waiting outside.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm