Yemens Houthi rebels hijack India, Red Sea: ಕೆಂಪು ಸಮುದ್ರದಲ್ಲಿ ಭಾರತಕ್ಕೆ ಹೊರಟಿದ್ದ ಇಸ್ರೇಲ್ ಹಡಗು ಅಪಹರಣ ; ಹೌತಿ ಬಂಡುಕೋರರಿಂದ 25 ಸಿಬಂದಿ ಒತ್ತೆಯಾಳು

20-11-23 05:56 pm       HK News Desk   ದೇಶ - ವಿದೇಶ

ಯೆಮೆನ್ ದೇಶದ ಹೌತಿ ಬಂಡುಕೋರರು ಕೆಂಪು ಸಮುದ್ರ ಮೂಲಕ ಭಾರತಕ್ಕೆ ಹೊರಟಿದ್ದ ಕಾರ್ಗೋ ಹಡಗನ್ನು ಅಪಹರಿಸಿದ್ದು, ಅದರಲ್ಲಿದ್ದ 25 ಮಂದಿ ಸಿಬಂದಿಯನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ.

ನವದೆಹಲಿ, ನ.20: ಯೆಮೆನ್ ದೇಶದ ಹೌತಿ ಬಂಡುಕೋರರು ಕೆಂಪು ಸಮುದ್ರ ಮೂಲಕ ಭಾರತಕ್ಕೆ ಹೊರಟಿದ್ದ ಕಾರ್ಗೋ ಹಡಗನ್ನು ಅಪಹರಿಸಿದ್ದು, ಅದರಲ್ಲಿದ್ದ 25 ಮಂದಿ ಸಿಬಂದಿಯನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ.

ಜಪಾನ್ ಮೂಲದ ಎನ್ ವೈಕೆ ಲೈನ್ ಎಂಬ ಕಂಪನಿ ಹಡಗನ್ನು ಆಪರೇಟ್ ಮಾಡುತ್ತಿದ್ದು, ಹಡಗು ಇಸ್ರೇಲ್ ದೇಶಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ಹಡಗಿನಲ್ಲಿ ಬಲ್ಗೇರಿಯಾ, ರೊಮಾನಿಯಾ, ಫಿಲಿಪೈನ್ಸ್, ಯುಕ್ರೇನ್ ಮತ್ತು ಮೆಕ್ಸಿಕೋ ಮೂಲದವರಿದ್ದಾರೆ. ಹಡಗು ಅಪಹರಣದ ಬೆನ್ನಲ್ಲೇ ಜಪಾನ್ ದೇಶದ ವಿದೇಶಾಂಗ ಮಂತ್ರಿ, ಇರಾನ್, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹೌತಿ ಬಂಡುಕೋರರು ಹಡಗನ್ನು ಸುರಕ್ಷಿತವಾಗಿ ಬಿಟ್ಟು ಕೊಡುವಂತೆ ಆಗ್ರಹ ಮಾಡಿದ್ದಾರೆ.

ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಮಧ್ಯೆಯೇ ಇಂಥದ್ದೊಂದು ಘಟನೆ ನಡೆದಿರುವುದು ಯುದ್ಧ ಸನ್ನಿವೇಶ ಪೂರ್ವ ಮತ್ತು ದಕ್ಷಿಣ ಏಶ್ಯಾದತ್ತ ಹರಡುವ ಆತಂಕ ಎದುರಾಗಿದೆ. ಹೌತಿ ಬಂಡುಕೋರರು ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರಾಗಿದ್ದು, ಯೆಮೆನ್ ದೇಶದ ಸುನ್ನಿಗಳ ಆಡಳಿತ ವಿರುದ್ಧ 2014ರಿಂದ ಸಶಸ್ತ್ರ ಸಂಘರ್ಷ ನಡೆಸುತ್ತ ಬಂದಿದೆ. ಹೌತಿ ಬಂಡುಕೋರರು ಅಮೆರಿಕ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ವಿರುದ್ಧ ಕಟುವಾದ ನಿಲುವು ಹೊಂದಿದೆ. ಇವರಿಗೆ ಇರಾನ್ ಬೆಂಬಲ ನೀಡುತ್ತಿದ್ದು, ಹಮಾಸ್ ಮೇಲಿನ ದಾಳಿ ವಿಚಾರದಲ್ಲಿ ಇಸ್ರೇಲ್ ಮೇಲೆ ದಾಳಿಗೆ ಮುಂದಾಗಿತ್ತು. ಸದ್ಯಕ್ಕೆ ಉತ್ತರ ಯೆಮೆನ್ ಪ್ರಾಂತ್ಯದಲ್ಲಿ ಹೌತಿ ಆಡಳಿತ ಇದೆ.

Yemen's Houthi rebels seized an Israeli-linked cargo ship in a crucial Red Sea shipping route on November 19 and took its 25 crew members hostage, officials said, raising fears that regional tensions heightened over the Israel-Hamas war were playing out on a new maritime front.