ಬ್ರೇಕಿಂಗ್ ನ್ಯೂಸ್
19-11-23 05:58 pm HK News Desk ದೇಶ - ವಿದೇಶ
ಚೆನ್ನೈ, ನ 19: ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ನಟನೆಯ ʼಲಿಯೋʼ ಚಿತ್ರದಲ್ಲಿ ನಟಿ ತ್ರಿಷಾ ಕೃಷ್ಣನ್ ಜೊತೆ ರೇಪ್ ಸೀನ್ ನಟಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹಿರಿಯ ನಟ ಮನ್ಸೂರ್ ಅಲಿ ಖಾನ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ ನೆಟ್ಟಿಗರು, ಸೆಲೆಬ್ರಿಟಿಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.
"ಖುಷ್ಬೂ, ರೋಜಾ ಮೊದಲಾದ ನಟಿಯರನ್ನು ಎತ್ತಿಕೊಂಡು ಹೋಗಿ ರೇಪ್ ಮಾಡುವ ಸೀನ್ಗಳಲ್ಲಿ ನಾನು ನಟಿಸಿದ್ದೆ. ಸುಮಾರು 150 ಚಿತ್ರಗಳಲ್ಲಿ ಇಂಥ ದೃಶ್ಯ ನಟಿಸಿದ್ದೇನೆ. ನಾನು ತ್ರಿಶಾ ಜೊತೆ ನಟಿಸುತ್ತಿದ್ದೇನೆ ಎಂದಾಗ, ಚಿತ್ರದಲ್ಲಿ ಬೆಡ್ರೂಮ್ ಸೀನ್ ಇರಬಹುದು ಎಂದು ಭಾವಿಸಿದ್ದೆ. ನಾನು ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿರುವುದರಿಂದ ಇದು ನನಗೆ ಹೊಸದಲ್ಲ. ಆದರೆ ಇವರು (ಲಿಯೋ ಚಿತ್ರತಂಡದವರು) ಕಾಶ್ಮೀರದಲ್ಲಿ ಶೂಟಿಂಗ್ ಸಮಯದಲ್ಲಿ ತ್ರಿಷಾರನ್ನು ನನಗೆ ತೋರಿಸಿಯೇ ಇಲ್ಲ" ಎಂದು ಮನ್ಸೂರ್ ಖಾನ್ ಮಾಧ್ಯಮಗಳೊಂದಿಗೆ ಹೇಳಿದ್ದರು.
ಮನ್ಸೂರ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಹನಟಿಯೊಂದಿಗೆ ತೋರಿದ ಅಗೌರವಕ್ಕೆ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನ್ಸೂರ್ ಹೇಳಿಕೆಗಳು ಸ್ತ್ರೀವಿರೋಧಿ ಮಾತ್ರವಲ್ಲ ವೃತ್ತಿಪರತೆಗೂ ಅಗೌರವ ಎಂದು ನೆಟ್ಟಿಗರು ಖಂಡಿಸಿದ್ದಾರೆ.
ನಟಿ ತ್ರಿಷಾ ಕೂಡಾ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದು ಮನ್ಸೂರ್ ಆಲಿ ಖಾನ್ ಜೊತೆ ಮುಂದೆ ಎಂದೂ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ.
"ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಸೆಕ್ಸಿಸ್ಟ್, ಅಗೌರವ, ಸ್ತ್ರೀದ್ವೇಷ, ಮತ್ತು ಕೀಳು ಅಭಿರುಚಿಯನ್ನು ಹೊಂದಿದೆ. ಅವರಂತಹ ವ್ಯಕ್ತಿಯೊಂದಿಗೆ ನಟಿಸದೆ ಇರುವುದಕ್ಕೆ ನಾನು ಕೃತಜ್ಞಳು. ನನ್ನ ಮುಂದಿನ ವೃತ್ತಿಜೀವನದಲ್ಲಿಯೂ ಅದು ಎಂದಿಗೂ ನಡೆಯದಂತೆ ನೋಡಿಕೊಳ್ಳುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು" ಎಂದು ತ್ರಿಷಾ ಟ್ವೀಟ್ ಮಾಡಿದ್ದಾರೆ.
"ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಮನ್ಸೂರ್ ಅಲಿ ಖಾನ್ ಅವರು ಮಾಡಿದ ಸ್ತ್ರೀವಿರೋಧಿ ಪ್ರತಿಕ್ರಿಯೆಗಳನ್ನು ಕೇಳಿ ಅಸಮಾಧಾನ ಮತ್ತು ಕೋಪಗೊಂಡಿದ್ದೇನೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ನೀಡುವ ಗೌರವದಲ್ಲಿ ಯಾವುದೇ ರಾಜಿ ಇಲ್ಲ. ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ" ಎಂದು ನಿರ್ದೇಶಕ ಲೋಕೇಶ್ ಕನಗರಾಜ್ ಟ್ವೀಟ್ ಮಾಡಿದ್ದಾರೆ.
ಈ ನಡುವೆ ನೆಟ್ಟಿಗರು ನಟ ವಿಜಯ್ ಹಾಗೂ ರಜಿನಿಕಾಂತ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಚಿತ್ರದಲ್ಲಿ ನಟಿಸಿರುವ ನಟಿ ಬಗ್ಗೆ ಸಹನಟ ಮಾಡಿರುವ ಕೆಟ್ಟ ಅಭಿರುಚಿಯ ಹೇಳಿಕೆಗಳಿಗೆ ವಿಜಯ್ ಯಾಕೆ ಇನ್ನೂ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದೇ ವೇಳೆ, ಜೈಲರ್ ಚಿತ್ರದಲ್ಲಿ ನಟಿ ತಮನ್ನಾ ಬಗ್ಗೆ ರಜಿನಿಕಾಂತ್ ನೀಡಿರುವ ಹೇಳಿಕೆಯನ್ನೂ ಉಲ್ಲೇಖಿಸಿ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಲರ್ ಚಿತ್ರದಲ್ಲಿ ನಟಿ ತಮನ್ನಾ ಜೊತೆ ನನಗೆ ಮಾತನಾಡಲೂ ಬಿಟ್ಟಿರಲಿಲ್ಲ ಎಂದು ರಜಿನಿ ಕಾಂತ್ ಅವರು ತಮಾಷೆಯ ಧಾಟಿಯಲ್ಲಿ ಹೇಳಿದ್ದರು.
A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…
— Trish (@trishtrashers) November 18, 2023
Lokesh Kanagaraj broke his silence on Leo star Mansoor Ali Khan’s comment about Trisha Krishnan. The director, who helmed the Thalapathy Vijay film, took to X (previously known as Twitter) and extended his support to Trisha while slamming Mansoor for his comments. The filmmaker said that he was enraged by Mansoor’s comment and condemned this behaviour.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm