ಮೆಕ್ಕಾ- ಮದೀನಾದಲ್ಲಿ ಪ್ಯಾಲೆಸ್ತೀನ್ ಪರ ಪ್ರಾರ್ಥನೆ ; ಸೌದಿ ಪೊಲೀಸರಿಂದ ಬಂಧನ 

19-11-23 01:56 pm       HK News Desk   ದೇಶ - ವಿದೇಶ

ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ ಮತ್ತು ಮದೀನಾದಲ್ಲಿ ಗಾಜಾ ಹಾಗೂ ಪ್ಯಾಲೆಸ್ತೀನಿಯರ ಪರ ಪ್ರಾರ್ಥನೆ ಸಲ್ಲಿಸಿದವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸ ತೊಡಗಿದ್ದಾರೆ. 

ನವದೆಹಲಿ, ನ.19: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ ಮತ್ತು ಮದೀನಾದಲ್ಲಿ ಗಾಜಾ ಹಾಗೂ ಪ್ಯಾಲೆಸ್ತೀನಿಯರ ಪರ ಪ್ರಾರ್ಥನೆ ಸಲ್ಲಿಸಿದವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸ ತೊಡಗಿದ್ದಾರೆ. 

ಬ್ರಿಟಿಷ್ ನಟ ಹಾಗೂ ನಿರೂಪಕ ಇಸ್ಲಾ ಅಬ್ದುರ್ ರೆಹಮಾನ್ ಅವರನ್ನು ಮೆಕ್ಕಾ ಯಾತ್ರೆಯ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಮುಂಡಾಸು ಮತ್ತು ಪ್ಯಾಲೆಸ್ತೀನ್ ಬಣ್ಣದ ತಸ್ಬಿಹ್ (ಮುಂಗೈ ವಸ್ತ್ರ) ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ತಲೆಗೆ ಬಿಳಿ ಕೆಫಿಯೆಹ್ (ಮುಂಡಾಸು) ಮತ್ತು ಪ್ಯಾಲೆಸ್ತೀನಿ ಬಣ್ಣದ ತಸ್ಬಿಹ್ (ಮುಂಗೈಗೆ ಸುತ್ತುವ ವಸ್ತ್ರ) ಧರಿಸಿದ್ದಕ್ಕಾಗಿ ನನ್ನನ್ನು ನಾಲ್ವರು ಸೈನಿಕರು ತಡೆದಿದ್ದರು ಎಂದು ಇಸ್ಲಾ ರೆಹಮಾನ್ ಹೇಳಿದ್ದಾರೆ. ತನ್ನನ್ನು ಅಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು ಎಂದು ತಿಳಿಸಿದ್ದಾರೆ. 

ಮೆಕ್ಕಾ, ಮದೀನಾದಲ್ಲಿ ಪ್ಯಾಲೆಸ್ತೀನ್ ಪರ ಪ್ರಾರ್ಥನೆ ಮಾಡುವವರನ್ನು, ಪ್ಯಾಲೆಸ್ತೀನ್ ರೀತಿಯ ವಸ್ತ್ರ ಧರಿಸಿದವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಇಸ್ರೇಲ್- ಹಮಾಸ್ ಘರ್ಷಣೆ ಬಳಿಕ ಸೌದಿ ಅರೇಬಿಯಾ ಇಂತಹ ಕ್ರಮ ಕೈಗೊಂಡಿರುವುದು ಗಮನಾರ್ಹ.

Saudi Arabian authorities are arresting people praying for Palestine at holy sites in Mecca and Medina. This is particularly shocking as Saudi Arabia claims to be a Muslim country.