C M Pinarayi Vijayan, Kerala: ಕೇರಳದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಎಡರಂಗ ಸರಕಾರದ ಸಾಧನೆಗಳ ಪ್ರಚಾರ, ಜನರ ಬಳಿಗೆ ಜನತಾ ಸಂಪುಟ, ಮಂಜೇಶ್ವರದಲ್ಲಿ ಪಿಣರಾಯಿ ವಿಜಯನ್ ಚಾಲನೆ, 140 ಕ್ಷೇತ್ರಕ್ಕೂ ಸಂಚರಿಸಲಿದೆ ನವ ಕೇರಳ ಜಾಥಾ

19-11-23 01:44 pm       HK News Desk   ದೇಶ - ವಿದೇಶ

ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಸಂಪುಟ ಸಚಿವರೊಂದಿಗೆ ಶನಿವಾರ ಕಾಸರಗೋಡಿನ ಪೈವಳಿಕೆಗೆ ಬಂದಿದ್ದರು.

ಕಾಸರಗೋಡು, ನ.19: ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಸಂಪುಟ ಸಚಿವರೊಂದಿಗೆ ಶನಿವಾರ ಕಾಸರಗೋಡಿನ ಪೈವಳಿಕೆಗೆ ಬಂದಿದ್ದರು. ಎಡರಂಗ ಸರಕಾರದ ಸಾಧನೆಗಳು, ಯೋಜನೆಗಳನ್ನು ಪ್ರಚಾರ ಪಡಿಸುವ ಉದ್ದೇಶದಲ್ಲಿ ಜನತಾ ಸಂಪುಟವನ್ನು ಜನರ ಬಳಿಗೆ ಒಯ್ಯುವ ‘’ನವ ಕೇರಳ ಸದಸ್ ’’ ಕಾರ್ಯಕ್ರಮಕ್ಕೆ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದಾರೆ.

ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಪೈವಳಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದರಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ. ಜನರ ಅಹವಾಲುಗಳನ್ನು ಪಡೆದುಕೊಳ್ಳಲು ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಸಾಧ್ಯವಿರುವ ದೂರು ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಸೂಚನೆ ನೀಡಲಾಗಿತ್ತು. ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳೂ ಜೊತೆಗಿದ್ದರು.

ಕಂದಾಯ ಸಚಿವ ಕೆ. ರಾಜನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುತೇಕ ಸಚಿವರು ಪಾಲ್ಗೊಂಡಿದ್ದರು. ಜನತಾ ಸಂಪುಟ ಕಾರ್ಯಕ್ರಮ ಇಡೀ ರಾಜ್ಯದಲ್ಲಿ 140 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಸಂಚಾರ ಮಾಡಲಿದೆ. ಪ್ರತಿ ಕ್ಷೇತ್ರಕ್ಕೂ ಸಚಿವರು ಮತ್ತು ಮುಖ್ಯಮಂತ್ರಿ ತೆರಳಲಿದ್ದು, ಆಮೂಲಕ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ಆಕರ್ಷಿಸುವ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿ ಲಕ್ಸುರಿ ಆಗಿರುವ ಬಸ್ಸನ್ನು ವ್ಯವಸ್ಥೆ ಮಾಡಲಾಗಿದ್ದು, ಸಚಿವರು, ಅಧಿಕಾರಿಗಳು ಬಸ್ಸಿನಲ್ಲೇ ಪ್ರತಿ ಕ್ಷೇತ್ರ ಸಂಚಾರ ಮಾಡಲಿದ್ದಾರೆ.

On first day of “Nava Kerala Sadas”, CM slams BJP over its Palestine stand; Opposition alleges political campaign at state exchequer’s expense. Starting Saturday from village Paivalike in Kasaragod in the far north of the state, the 21-member Kerala Cabinet led by Chief Minister Pinarayi Vijayan has set off on a state-wide yatra that is expected to continue for the next 36 days, ending in Thiruvananthapuram on December 23.