Kasaragod car baby death: ಉಪ್ಪಳ ; ಮನೆಯಂಗಳದಲ್ಲಿ ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಅಡಿಗೆ ಬಿದ್ದ ಮಗು ಸಾವು 

13-11-23 06:21 pm       HK News Desk   ದೇಶ - ವಿದೇಶ

ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಕಾರಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ.

ಕಾಸರಗೋಡು, ನ.13: ಕಾರು ಪಾರ್ಕಿಂಗ್ ಮಾಡುತ್ತಿದ್ದಾಗ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಕಾರಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ. 

ಮಗುವಿನ ಚಿಕ್ಕಪ್ಪನೇ ಕಾರನ್ನು ಮನೆಯಂಗಳದಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾಗ ಅಲ್ಲಿದ್ದ ಮಗು ನಡೆದುಕೊಂಡು ಮುಂದೆ ಬಂದಿದೆ. ಎದುರಿನಲ್ಲಿದ್ದ ಮಗುವನ್ನು ಗಮನಿಸದೇ ಕಾರು ಚಲಾಯಿಸಿದ್ದರಿಂದ ಮಗು ಚಕ್ರದಡಿಗೆ ಬಿದ್ದಿದೆ. 

ಕೂಡಲೇ ಕಾರು ನಿಲ್ಲಿಸಿ ಹೊರಗೆ ಬರುತ್ತಿದ್ದಂತೆ ಮಗು ಕಿರುಚಾಡಿಕೊಂಡಿದ್ದು ಕೂಡಲೇ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ತರಲಾಗಿತ್ತು. ನಿಜಾರ್ ಎಂಬವರ ಪುತ್ರ ಅಬ್ದುಲ್ ಇಶಾನ್ ಮೃತಪಟ್ಟ ಮಗುವಾಗಿದ್ದು ಸಣ್ಣ ನಿರ್ಲಕ್ಷ್ಯ, ಎಡವಟ್ಟಿನಿಂದಾಗಿ ದುರ್ಘಟನೆ ಆಗಿಹೋಗಿದೆ. ಅ.10ರಂದು ಘಟನೆ ನಡೆದಿದ್ದು ಮನೆಯ ಹೊರಗಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

Kasargod, car runs over Baby while parking car inside house. In a heart-wrenching incident that occurred at Sonkal near Uppala in the district, a 1.5-year-old boy was killed in the verandah of his house as he came under the wheels of the car of his uncle.