ಆಲಿಗಢ ಮುಸ್ಲಿಂ ವಿವಿಯ ವಿದ್ಯಾರ್ಥಿಗಳಿಂದಲೇ ದೇಶದ್ರೋಹಿ ಕೃತ್ಯಕ್ಕೆ ಸಂಚು ; ಉತ್ತರ ಪ್ರದೇಶದಲ್ಲಿ ಆರು ಮಂದಿ ಐಸಿಸ್ ಶಂಕಿತ ಉಗ್ರರ ಬಂಧನ

11-11-23 11:04 pm       HK News Desk   ದೇಶ - ವಿದೇಶ

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ದಿಢೀರ್ ಕಾರ್ಯಾಚರಣೆಯಲ್ಲಿ ಆರು ಶಂಕಿತ ಐಸಿಸ್ ಉಗ್ರವಾದಿ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದೆ.

ಲಕ್ನೋ, ನ.11: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ದಿಢೀರ್ ಕಾರ್ಯಾಚರಣೆಯಲ್ಲಿ ಆರು ಶಂಕಿತ ಐಸಿಸ್ ಉಗ್ರವಾದಿ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದೆ. ಈ ಪೈಕಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ, ಆರೋಪಿಗಳು ದೇಶದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಆರು ಮಂದಿಯನ್ನು ಬಂಧಿಸುವುದರೊಂದಿಗೆ ವಿವಿಯ ವಿದ್ಯಾರ್ಥಿ ಸಂಘಟನೆ ಉಗ್ರ ಜಾಲದಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರೀಯ ಸಂಸ್ಥೆಗಳ ರಾಡಾರ್‌ನಲ್ಲಿದ್ದು ಹಲವು ಸಮಯದ ಕಾರ್ಯಾಚರಣೆ ಬಳಿಕ ಬಂಧನ ಮಾಡಲಾಗಿದೆ.

ಪುಣೆ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿರುವ ರಿಜ್ವಾನ್ ಮತ್ತು ಶಹನವಾಜ್ ಅವರ ವಿಚಾರಣೆ ವೇಳೆ, ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ ವಿರೋಧಿ ಅಜೆಂಡಾವನ್ನು ಹರಡಲು ತೊಡಗಿದ್ದಾರೆ ಎಂದು ತಿಳಿದುಬಂದಿತ್ತು.

6 linked to Aligarh Muslim University arrested for 'working as ISIS operatives. The Anti-Terror Squad of Uttar Pradesh arrested six suspected ISIS operatives from different parts of Uttar Pradesh. Four of the six have been identified as Rakib Inam, Naved Siddiqui, Mohammad Noman and Mohammad Nazim.