PM Modi, CM Siddaramaiah: ಕರ್ನಾಟಕದಲ್ಲಿ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ; ಸಿಎಂ ಗೊಂದಲ ಬಗ್ಗೆ ಮಧ್ಯಪ್ರದೇಶದಲ್ಲಿ ಮೋದಿ ವ್ಯಂಗ್ಯ 

05-11-23 10:33 pm       HK News Desk   ದೇಶ - ವಿದೇಶ

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಸ್ಥಿತಿ ಹಾಳಾಗಿದ್ದು, ಅಲ್ಲಿನ ರಾಜಕೀಯ ಚಟುವಟಿಕೆ ನೋಡಿದರೆ ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಟಕಿಯಾಡಿದ್ದಾರೆ. ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಪ್ರದೇಶದ ಖಾಂಡ್ವ ಜಿಲ್ಲೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಇಂದೋರ್, ನ.5: ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಸ್ಥಿತಿ ಹಾಳಾಗಿದ್ದು, ಅಲ್ಲಿನ ರಾಜಕೀಯ ಚಟುವಟಿಕೆ ನೋಡಿದರೆ ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಟಕಿಯಾಡಿದ್ದಾರೆ. ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಪ್ರದೇಶದ ಖಾಂಡ್ವ ಜಿಲ್ಲೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಬಗ್ಗೆಯೇ ಗೊಂದಲ ಎದ್ದಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಅಧಿಕಾರ ಹಿಡಿದಿರುವ ಕಾಂಗ್ರೆಸ್​ ಭ್ರಷ್ಟಾಚಾರದಲ್ಲಿ ಭಾಗಿಯಾದ್ದರಿಂದ ರಾಜ್ಯದ ಆರ್ಥಿಕತೆಗೆ ಹಾನಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕರ್ನಾಟಕದಲ್ಲಿ ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಆಡಳಿತದತ್ತ ನೋಡಿ, ಅಲ್ಲಿನ ಮುಖ್ಯಮಂತ್ರಿಗೆ ತಾನು ಎಷ್ಟು ದಿನ ರಾಜ್ಯಭಾರ ನಡೆಸುತ್ತೇನೆ ಎಂಬ ಬಗ್ಗೆಯೇ ಗೊತ್ತಿಲ್ಲ. ಅವರಿಂದ ಕರ್ನಾಟಕದ ಬೆಳವಣಿಗೆ ಹೇಗೆ ಸಾಧ್ಯ. ಇದರಿಂದ ಅಭಿವೃದ್ಧಿ ಕುಂಠಿತಗೊಂಡು ರಾಜ್ಯದ ಸ್ಥಿತಿ ಹಾಳಾಗುತ್ತದೆ ಎಂದಿದ್ದಾರೆ.

One nation, one election impossible, PM under stress after BJP's loss in  Karnataka polls: Siddaramaiah

ರಾಜಸ್ಥಾನದ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಸಂಘರ್ಷವನ್ನು ಪ್ರಸ್ತಾಪಿಸಿದ ಮೋದಿ, ಅಲ್ಲಿಯೂ ಎರಡು ಗುಂಪುಗಳ ನಡುವೆ ಒಳಜಗಳ ಇದೆ. ಈ ರೀತಿಯ ಜಗಳ ಕಾಂಗ್ರೆಸ್ ಸಂಸ್ಕೃತಿ. ದೆಹಲಿಯಲ್ಲಿ ಕುಳಿತುಕೊಂಡಿರುವ ಅವರ ನ್ಯಾಯಾಧೀಶರು ತೀರ್ಪು ಕೊಡುತ್ತಾರೆ ಮತ್ತು ಅಂಗಡಿ ನಡೆಸುತ್ತಾರೆ ಎಂದು ಟೀಕಿಸಿದರು.

ಎಲ್ಲೆಲ್ಲ ಕಾಂಗ್ರೆಸ್ ಅದೃಷ್ಟವಶಾತ್ ಅಧಿಕಾರ ಹಿಡಿದಿದೆಯೋ ಅಲ್ಲೆಲ್ಲ ಅದರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮಧ್ಯೆ ಲೂಟಿ ಮಾಡಲು ಪೈಪೋಟಿ ನಡೆದಿದೆ. ಅಂಥ ಸುದ್ದಿ ಕರ್ನಾಟಕದಿಂದ ಪದೇ ಪದೇ ಕೇಳಿಬರುತ್ತಿದೆ ಎಂದೂ ಮೋದಿ ಹೇಳಿದರು.

Prime Minister Narendra Modi on Sunday said the Congress has damaged Karnataka where development has come to a standstill and raised doubts about the continuation of its chief minister at the helm.