ಬ್ರೇಕಿಂಗ್ ನ್ಯೂಸ್
13-11-20 10:48 am Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 13 : ಇತ್ತೀಚೆಗಷ್ಟೇ ಭಾರತದಲ್ಲಿ ಚೀನಾ ಮೂಲದ ಪಬ್ ಜಿ ವಿಡಿಯೋ ಗೇಮ್ ನಿಷೇಧ ಆಗಿತ್ತು. ಆದರೆ, ಶೀಘ್ರದಲ್ಲಿಯೇ ಪಬ್ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಅವತಾರದಲ್ಲಿ ಎಂಟ್ರಿ ನೀಡಲು ರೆಡಿಯಾಗಿದೆ.
ಪಬ್ ಜಿ ಗೇಮ್ ಜನಕ, ಸೌತ್ ಕೊರಿಯಾ ಮೂಲದ ಪಬ್ಜಿ ಕಾರ್ಪೋರೇಷನ್, ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಘೋಷಣೆ ಮಾಡಿದೆ. ಜೊತೆಗೆ ಇದರಲ್ಲಿ ಚೀನಾದ ಪಾಲುದಾರಿಕೆ ಇರಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಪಬ್ಜಿ ಕಾರ್ಪೋರೇಷನ್ ನ ಮಾತೃಸಂಸ್ಥೆ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡ್ತಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್ಜಿ ಸೇರಿದಂತೆ ಚೀನಾ ಅ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್ಜಿ ಗೇಮ್ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ನಿಷೇಧಕ್ಕೊಳಗಾದ ದಿನವೇ ಮತ್ತೆ ಮಾರುಕಟ್ಟೆಗೆ ಹಿಂದಿರುಗುವ ಬಗ್ಗೆ ಪಬ್ಜಿ ವಿಶ್ವಾಸ ವ್ಯಕ್ತಪಡಿಸಿತ್ತು.
ಭಾರತಕ್ಕೆ ಪಬ್ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಹಿಂದಿರುಗಲಿದೆ. ಆದ್ರೆ ಲಾಂಚ್ ಆಗುವ ದಿನವನ್ನ ಕಂಪನಿ ಘೋಷಣೆ ಮಾಡಿಲ್ಲ. ಭಾರತೀಯ ಖಾಸಗಿತನಕ್ಕೆ ಆ್ಯಪ್ ನಿಂದ ಧಕ್ಕೆ ಆಗಲಾರದು ಎಂದು ಪಬ್ಜಿ ಸ್ಪಷ್ಟಪಡಿಸಿದೆ.
ವಿಶ್ವದಲ್ಲಿ ಅತಿ ಹೆಚ್ಚು ಡೌನ್ಲೋಡ್ ಅಗಿರುವ ಟಾಪ್ 5ರ ಲಿಸ್ಟ್ ನಲ್ಲಿ ಪಬ್ಜಿ ಆ್ಯಪ್ ಸ್ಥಾನ ಪಡೆದಿದೆ. ಇಡೀ ವಿಶ್ವದಲ್ಲಿ 73 ಕೋಟಿಗೂ ಅಧಿಕ ಜನ ಪಬ್ಜಿ ಡೌನ್ಲೋಡ್ ಮಾಡಿದ್ದು, ಭಾರತದಲ್ಲಿ 17.5 ಕೋಟಿ ಅಂದ್ರೆ ಶೇ.24ರಷ್ಟು ಬಳಕೆದಾರರನ್ನು ಪಬ್ಜಿ ಹೊಂದಿದೆ. ಪಬ್ಜಿ ಆಡುವ ಪ್ರತಿ ನಾಲ್ಕು ಜನರಲ್ಲಿ ಓರ್ವ ಭಾರತೀಯ ಎಂಬ ಲೆಕ್ಕಾಚಾರ ಇದೆ. ಇದೇ ಕಾರಣಕ್ಕೆ ಭಾರತದ ಬೃಹತ್ ಮಾರುಕಟ್ಟೆಯನ್ನು ಮರಳಿ ಪಡೆಯಲು ಪಬ್ ಜಿ ಕಂಪನಿ ಹವಣಿಕೆಯಲ್ಲಿದೆ.
PUBG Mobile developers have announced that they will launch a new game called PUBG Mobile India to cater to Indian players.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm