ಟ್ಯಾಂಕರ್​ - ಕಾರ್ ಡಿಕ್ಕಿ ; ಭೀಕರ ಅಪಘಾತದಲ್ಲಿ ಮಗು ಸೇರಿ 6 ಜನರು  ಬಲಿ 

02-11-23 05:16 pm       HK News Desk   ದೇಶ - ವಿದೇಶ

ಟ್ಯಾಂಕರ್​ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನಪ್ಪಿದ್ದಾರೆ . ಕಾರಿನಲ್ಲಿ ಹೊರಟ್ಟಿದ್ದ ಆರು ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದೆ.

ಪಂಜಾಬ್​, ನ 02:  ಟ್ಯಾಂಕರ್​ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನಪ್ಪಿದ್ದಾರೆ . ಕಾರಿನಲ್ಲಿ ಹೊರಟ್ಟಿದ್ದ ಆರು ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ಇದೇ ವೇಳೆ, ಮಾರ್ಗಮಧ್ಯೆ ಟ್ಯಾಂಕರ್‌ ವೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ, ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೂವರ ಶವಗಳನ್ನು ಸುನಮ್‌ ಆಸ್ಪತ್ರೆಗೆ ಹಾಗೂ ಇನ್ನೂ ಮೂವರ ಮೃತದೇಹಗಳನ್ನು ಸಂಗ್ರೂರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತ ಕುರಿತಂತೆ ಮಾತನಾಡಿರುವ  ಗಾಯಲು ವಿಜಯ್​ ಕುಮಾರ್​, ಸರಿಯಾದ ದಾರಿಯಲ್ಲೇ ಸಾಗುತ್ತಿದ್ದ ಕಾರು, ರಾಂಗ್​ ಸೈಡ್​ನಲ್ಲಿ ಬರುತ್ತಿದ್ದ ಟಾಂಕರ್​ಗೆ ಡಿಕ್ಕಿ ಹೊಡೆದ ಆಗ ಆ ಕಾರು ನನ್ನ ಕಾರಿಗೂ ಸಹ ಗುದ್ದಿದೆ. ನಾನು ಸುನಮ್‌ ಪ್ರದೇಶಕ್ಕೆ ತೆರಳುತ್ತಿದ್ದಾಗ ಅಪಘಾತ ಜರುಗಿದೆ. ಘಟನೆಯಲ್ಲಿ ನನಗೂ ತೀವ್ರ ಗಾಯವಾಗಿದೆ'' ಅಂದ ಹಾಗೆ ಈ ದುರ್ಘಟನೆಯಲ್ಲಿ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ಅಸು ನೀಗಿದರು. ಇದೊಂದು ಭಯಾನಕರ ದುರ್ಘಟನೆ ಎಂದು ವಿಜಯ್​ ಕುಮಾರ್​ ಹೇಳಿದರು. ಇನ್ನು ಈ ದುರಂತದಲ್ಲಿ ಮೃತಪಟ್ಟವರು ಪಂಜಾಬ್​ನ ಸುನಮ್‌ ಪ್ರದೇಶಕ್ಕೆ ಸೇರಿದ್ದಾರೆ.

Six people, including a 4-year-old child, were killed in road mishap near Mehlan chowk area in Sangrur during the early hours of Thursday.