ಬ್ರೇಕಿಂಗ್ ನ್ಯೂಸ್
02-11-23 03:01 pm HK News Desk ದೇಶ - ವಿದೇಶ
ರಾಜಸ್ಥಾನ್, ನ.2: ರಾಜಸ್ಥಾನದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಮುಂದುವರಿದಿರುವ ನಡುವೆಯೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇಸ್ರೇಲ್-ಹಮಾಸ್ ಯುದ್ಧದ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಅಲ್ವಾರ್ ನಲ್ಲಿ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಗಾಜಾದಲ್ಲಿ ತಾಲಿಬಾನಿ ಮನಸ್ಥಿತಿಯ ಜನರನ್ನು ಹೇಗೆ ಕೊನೆಗಾಣಿಸಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಅವರ ಅಡಗುತಾಣಗಳನ್ನು ಕರಾರುವಕ್ಕಾಗಿ ಹುಡುಕಿ ನಾಶಮಾಡಲಾಗುತ್ತಿದೆ. ಅದೇ ರೀತಿ ತಾಲಿಬಾನಿಗಳನ್ನು ಮಟ್ಟಹಾಕಲು ಹನುಮಂತನ ಗದೆಯೇ ಪರಿಹಾರವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಯೋಗಿ, ಗೂಂಡಾಗಿರಿ, ಅರಾಜಕತೆ ಮತ್ತು ಭಯೋತ್ಪಾದನೆ ಸಮಾಜಕ್ಕೆ ದೊಡ್ಡ ಶಾಪವಾಗಿದೆ. ಇದರೊಳಗೆ ರಾಜಕೀಯ ಬೆರೆತುಕೊಂಡಾಗ ಇದರಿಂದ ನಾಗರಿಕ ಸಮಾಜದ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗುತ್ತದೆ ಎಂದು ಹೇಳಿದರು.
ಪಟೇಲ್ ಅವರು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದರು. ಆದರೆ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಅವರು ಇಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿಸಿದರು. ಇದರಿಂದಾಗಿ ಭಯೋತ್ಪಾದನೆ ಹರಡಿತು. ಬಳಿಕ ಬಿಜೆಪಿ ಸರ್ಕಾರ ಬಂದಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾಶ್ಮೀರವನ್ನು ಸಮಸ್ಯೆಯಿಂದ ಮುಕ್ತಗೊಳಿಸಿದರು. ಅಲ್ಲಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಯೋಗಿ ನುಡಿದರು
ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ:
ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗುತ್ತಿರುವುದಾಗಿ ಆರೋಪಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಒಂದು ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮನಸ್ಥಿತಿಯಿಂದಾಗಿ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಶೋಷಣೆಗೊಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ
Uttar Pradesh chief minister Yogi Adityanath on Wednesday took a dig at the Congress party while drawing parallels between the Israel-Hamas war and Taliban and the Congress vs BJP fight in Rajasthan ahead of the assembly elections saying that the only solution to the Taliban is Lord Hanuman’s mace.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm