ಬ್ರೇಕಿಂಗ್ ನ್ಯೂಸ್
01-11-23 06:31 pm HK News Desk ದೇಶ - ವಿದೇಶ
ತಿರುವನಂತಪುರಂ, ನ.1: ನಟಿ ರೆಂಜೂಷಾ ಮೆನನ್ ಅವರ ಆಘಾತಕಾರಿ ಸಾವಿನ ಸುದ್ದಿ ಬೆನ್ನಲ್ಲೇ, ಮಲಯಾಳಂ ಚಿತ್ರರಂಗದ ಮತ್ತೊಬ್ಬ ಕಿರುತೆರೆ ನಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 8 ತಿಂಗಳ ಗರ್ಭಿಣಿಯಾಗಿದ್ದ ಡಾ.ಪ್ರಿಯಾ ಅ.31ರಂದು ಮೃತಪಟ್ಟಿದ್ದಾರೆ.
34 ವರ್ಷದ ಡಾ.ಪ್ರಿಯಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದು ಎಂದಿನಂತೆ ಹೆಲ್ತ್ ಚೆಕಪ್‌ಗೆ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ಹೃದಯಾಘಾತವಾಗಿದೆ. ನವಜಾತ ಶಿಶುವನ್ನು ಉಳಿಸಲಾಗಿದ್ದು ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಿಯಾ ಅವರ ಒಡನಾಡಿ ನಟ ಕಿಶೋರ್ ಸತ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ನಟಿಯ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ. ಮಲಯಾಳಂ ಕಿರುತೆರೆ ವಲಯದಲ್ಲಿ ಮತ್ತೊಂದು ಅನಿರೀಕ್ಷಿತ ಸಾವು. ಡಾ.ಪ್ರಿಯಾ ನಿನ್ನೆ ಹೃದಯಾಘಾತದಿಂದ ನಿಧನರಾದರು. ಆಕೆ 8 ತಿಂಗಳ ಗರ್ಭಿಣಿಯಾಗಿದ್ದಳು. ಮಗು ಐಸಿಯುನಲ್ಲಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಬರೆದಿದ್ದಾರೆ.
ಡಾ. ಪ್ರಿಯಾ ಮಲಯಾಳಂ ಕಿರುತೆರೆಯಲ್ಲಿ ಚಿರಪರಿಚಿತ ನಟಿಯಾಗಿದ್ದರು. ‘ಕರುತಮುತ್ತು’ ಎನ್ನುವ ಸೀರಿಯಲ್ ನಲ್ಲಿ ಜನಪ್ರಿಯರಾಗಿದ್ದರು. ಮದುವೆಯ ನಂತರ ನಟನೆಯಿಂದ ವಿರಾಮ ಪಡೆದಿದ್ದರು. ವೃತ್ತಿಯಲ್ಲಿ ಪ್ರಸೂತಿ ವೈದ್ಯೆಯೂ ಆಗಿದ್ದರು. ಸದ್ಯ ಎಂಡಿ ವ್ಯಾಸಂಗ ಮಾಡುತ್ತಿದ್ದು ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬಳೇ ಮಗಳಾಗಿರುವ ಪ್ರಿಯಾ ಸಾವಿನಿಂದ ಆಕೆಯ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ.
ಅ.30ರಂದು ಜನಪ್ರಿಯ ನಟಿಯಾಗಿದ್ದ ರೆಂಜುಷಾ ಮೆನನ್ ನಿಗೂಢ ರೀತಿಯಲ್ಲಿ ಸಾವು ಕಂಡಿದ್ದರು. ತಿರುವನಂತಪುರದ ಫ್ಲಾಟ್ ಒಂದರಲ್ಲಿ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೀರಿಯಲ್, ಸಿನಿಮಾ ನಟಿಯಾಗಿದ್ದ ರೆಂಜುಷಾ ನಿರ್ಮಾಪಕಿಯಾಗಿಯೂ ಹೆಸರು ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಆರ್ಥಿಕ ನಷ್ಟ ಅನುಭವಿಸಿದ್ದರು ಎಂದು ಸಹವರ್ತಿಗಳು ತಿಳಿಸಿದ್ದರು. ಆದರೆ ಇವರ ಪತಿ ಮನೋಜ್ ಕೂಡ ಸಿನಿಮಾ ನಟ. ಕೊಚ್ಚಿ ಮೂಲದ ರೆಂಜುಷಾ ಭರತನಾಟ್ಯ ಕಲಾವಿದೆಯಾಗಿ ಸಾಕಷ್ಟು ಹೆಸರು ಮಾಡಿದ್ದರು. ಸಣ್ಣ ಆರ್ಥಿಕ ಹೊಡೆತಕ್ಕೆ ಸಾವಿಗೆ ಶರಣಾಗಿದ್ದು ಅಭಿಮಾನಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ.
Malayalam serial actor Dr Priya, who was eight months pregnant, died a day ago at a private hospital here following a cardiac arrest, one of her colleagues said on Wednesday. The baby of Dr Priya was saved by doctors of the hospital and is presently on ventilator support in the ICU as it was premature, a hospital source said.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm